ನಟ ನಾಗಚೈತನ್ಯ “ಹೊಸ ಹೀರೋಯಿನ್” ನೊಂದಿಗೆ ಡೇಟಿಂಗ್ | ಸಮಂತಾ ಮೇಲೆ ಗೂಬೆ ಕೂರಿಸಿದ ಫ್ಯಾನ್ಸ್ !!!!

ನಟಿ ಸಮಂತಾ, ನಟ ನಾಗ ಚೈತನ್ಯ ಇಬ್ಬರೂ ತಮ್ಮ ವಿಚ್ಛೇದನದ ವಿಷಯದಿಂದ ಮುಂದೆ ಹೋಗಿದ್ದಾರೆ. ಇಬ್ಬರು ನಟ ನಟಿಯರು ತಮ್ಮ ವೈಯಕ್ತಿಕ ವಿಚಾರಗಳ ಗೊಂದಲಗಳಿಂದ ಮುಂದೆ ಹೋಗಿ ತಮ್ಮ ಸಿನಿಮಾ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈಗ ನಟ ನಾಗ ಚೈತನ್ಯ ಅವರು ಶೋಭಿತಾ ಧುಲಿಪಲ ಜೊತೆ ಡೇಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಾಗಚೈತನ್ಯ ಡೇಟಿಂಗ್ ಮಾಡೋ ವಿಷಯವನ್ನು ಗಮನಿಸಿದ ಚೈತನ್ಯ ಅಭಿಮಾನಿಗಳು ಈ ಸುದ್ದಿಯನ್ನು ಸಮಂತಾ ಅವರೇ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಈ ಎಲ್ಲಾ ಆರೋಪಕ್ಕೆ ಸುಮ್ಮನಿದ್ದ ಸಮಂತಾ ಈಗ ತನ್ನ ಮೇಲಿನ ಆರೋಪಕ್ಕೆ ಉತ್ತರ ನೀಡಿದ್ದಾರೆ.

 

ಸಮಂತಾ ಟ್ವೀಟ್ ಮಾಡಿದ್ದೇನು?
“ಹುಡುಗಿ ಬಗ್ಗೆ ಗಾಸಿಪ್ ಹರಡಿದರೆ ಅದು
ನಿಜವಾಗಿರುತ್ತದೆ ಹುಡುಗನ ಬಗ್ಗೆ ಗಾಸಿಪ್ ಹರಡಿದರೆ ಅದು ಬಿತ್ತಿದ್ದಾಗಿರುತ್ತದೆ, ಬೆಳೆಯಿರಿ
ನಾವು ಮೂವ್ ಆನ್ ಆಗಿದ್ದೇವೆ, ನೀವು ಮೂವ್ ಆನ್ ಆಗಬೇಕು, ನಿಮ್ಮ ಕೆಲಸ, ಕುಟುಂಬದ ಕಡೆ ಗಮನ ಕೊಡಿ” ಎಂದು ಬರೆದಿದ್ದಾರೆ.

ಅಷ್ಟಕ್ಕೂ ಈ ಗಾಳಿಸುದ್ದಿ ಹಬ್ಬೋಕೆ ಕಾರಣವೇನು ?

“ಇತ್ತೀಚೆಗೆ ಜುಬ್ಲಿ ಹಿಲ್ಸ್‌ನಲ್ಲಿರುವ ನಾಗ ಚೈತನ್ಯ ಅಪಾರ್ಟ್‌ಮೆಂಟ್‌ನಲ್ಲಿ ಶೋಭಿತಾ ಧುಲಿಪಲ ಕಾಣಿಸಿಕೊಂಡಿದ್ದರು. ಒಂದೇ ಕಾರ್‌ನಲ್ಲಿ ಅವರಿಬ್ಬರು ಬಂದು ಹೋಗಿದ್ದರು. ಅವರಿಬ್ಬರ ನಡುವಿನ ಬಾಂಧವ್ಯ ತುಂಬ ಚೆನ್ನಾಗಿದೆ. ‘ಮೇಜರ್’ ಸಿನಿಮಾ ವೇಳೆ ಸಾಕಷ್ಟು ಬಾರಿ ನಾಗ ಚೈತನ್ಯ, ಶೋಭಿತಾ ಭೇಟಿಯಾಗಿದ್ದರು” ಎಂದು ಸಿನಿ ಮೂಲಗಳಿಂದ ಸುದ್ದಿ.

ಆದರೆ ಫ್ಯಾನ್ಸ್ ಪ್ರಕಾರ, ಶೋಭಿತಾ, ನಾಗ ಚೈತನ್ಯ ಡೇಟಿಂಗ್ ಗಾಸಿಪ್‌ನ್ನು ಸ್ವತಃ ಸಮಂತಾ ಅವರೇ ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ನಾಗ ಚೈತನ್ಯ ಬೇರೆ ಹುಡುಗಿ ಹಿಂದೆ ಹೋಗುವುದು ಖಂಡಿತವಾಗಿಯೂ ಸಾಧ್ಯವಿಲ್ಲ ಎಂದು ಅಭಿಮಾನಿಗಳ ಬಲವಾದ ನಂಬಿಕೆ. ಹಾಗಾಗಿ ಅವರೆಲ್ಲ ಸಮಂತಾ ಮೇಲೆ ಈ ಆರೋಪದ ಗೂಬೆಯನ್ನು ಕೂರಿಸಿದ್ದಾರೆ. ಇದು ಸಮಂತಾ ಗಮನಕ್ಕೆ ಬಂದಿದ್ದು “ಈ ರೀತಿ ಗಾಸಿಪ್‌ನ್ನು ನಾನು ಸೃಷ್ಟಿ ಮಾಡಿಲ್ಲ, ನಾನು ಮೂವ್ ಆನ್ ಆಗಿದ್ದೇನೆ, ನೀವು ಮೂವ್ ಆನ್ ಆಗಿ ಎನ್ನುವರ್ಥದಲ್ಲಿ ಸಮಂತಾ ಪ್ರತಿಕ್ರಿಯೆ ನೀಡಿದ್ದಾರೆ.

ಅಷ್ಟಕ್ಕೂ ಯಾರೀ ಶೋಭಿತಾ ಧುಲಿಪಲ?

ಶೋಭಿತಾ ಧುಲಿಪಲ ಅವರು ಆಂಧ್ರಪ್ರದೇಶದ ಮಾಡೆಲ್. ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ನಟಿಸಿರುವ ನಟಿ. ಶೋಭಿತಾ ಅವರು 2016ರಲ್ಲಿ ‘ರಮನ್ ರಾಘವ್ 2.0’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಗೂಢಾಚಾರಿ’, ‘ದಿ ಬಾಡಿ’, ‘ಘೋಸ್ಟ್ ಸ್ಟೋರೀಸ್’, ‘ಕುರುಪ್’ ‘ಮೇಜರ್’ ಮುಂತಾದ ಸಿನಿಮಾಗಳಲ್ಲಿ ಶೋಭಿತಾ ಧುಲಿಪಲ ನಟಿಸಿದ್ದಾರೆ. ಇನ್ನು ಕೆಲವು ಸಿನಿಮಾಗಳು ರಿಲೀಸ್ ಗೆ ಬಾಕಿ ಇದೆ. ‘ಪೊನ್ನಿಯಿನ್ ಸೆಲ್ವನ್: 1’, ‘ಸಿತಾರಾ’, ‘ಮಂಕಿ ಮ್ಯಾನ್’ ಈ ಸಿಮಿಮಾಗಳು ರಿಲೀಸ್ ಗೆ ಬಾಕಿ ಇದೆ.

Leave A Reply

Your email address will not be published.