ರಾಜ್ಯ ಸರಕಾರಿ ನೌಕರರಿಗೆ ಗುಡ್ ನ್ಯೂಸ್

ರಾಜ್ಯ ಸರಕಾರ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ಇದುವರೆಗೆ ಇದ್ದ ಮ್ಯಾನುಯೆಲ್ ಸಾಲಸೌಲಭ್ಯವನ್ನು ತೆಗೆದು ಹಾಕಿ, ಆನ್ ಲೈನ್ ಮೂಲಕ ಸಾಲ ಪಡೆಯುವ ಅವಕಾಶವನ್ನು ನೀಡಿದೆ.

 

ಆನ್ ಲೈನ್ ಮೂಲಕ ಸಾಲ ಮಂಜೂರಾತಿಗಾಗಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲಾಗಿದ್ದು, ಇನ್ಮುಂದೆ ಸರ್ಕಾರಿ ವಿಮಾ ಇಲಾಖೆಯಿಂದ ಜೀವ ವಿಮಾ ಪಾಲಿಸಿಗಳಿಂದ ಸಾಲ ಪಡೆಯಲು ಆನ್ ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ಕುರಿತಂತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ನಿರ್ದೇಶಕರು ಸುತ್ತೋಲೆಯನ್ನು ಹೊರಡಿಸಿದ್ದು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲೆ ವಿಮಾದಾರರಿಗೆ ಆನ್ ಲೈನ್ ನಲ್ಲಿ ಸಾಲ ಮಂಜೂರು ಮಾಡೋದಕ್ಕಾಗಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲಾಗಿದ್ದು, ಈ ಸಾಫ್ಟ್ ವೇರ್ ಅನ್ನು ಪ್ರಾಯೋಗಿಕವಾಗಿ ಯಾದಗಿರಿ, ಕೊಡಗು, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದೆ.

ಈ ಸಂಬಂಧ ಸರ್ಕಾರಿ ನೌಕರರಿಗೆ ತರಬೇತಿ ಕೂಡ ಇರಲಿದ್ದು, ಸಾಲದ ಅರ್ಜಿಗಳನ್ನು ಆನ್ ಲೈನ್ ನಲ್ಲಿ ಸ್ವೀಕರಿಸಿ, ಸಾಲ ಮಂಜೂರಾತಿ ಪ್ರಕ್ರಿಯೆಯನ್ನು ನಿರ್ವಹಿಸಲು ಸೂಚನೆ ಹೊರಡಿಸಲಾಗಿದೆ. ಮುಂದುವರೆದು , ದತ್ತಾಂಶ ಪರಿಶೀಲನೆ ಮುಗಿದಿರುವ ಪಾಲಿಸಿಗಳ ಮೇಲೆ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.

Leave A Reply

Your email address will not be published.