ವಿಶ್ವದ ಏಕತಾ ಮೂರ್ತಿಯ ಬಳಿ ಭೂಕಂಪನ 

 

ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆದಿರುವ ಗುಜರಾತ್‍ನ ಸರ್ದಾರ್ ವಲ್ಲಬಾಯಿ ಪಟೇಲ್‍ರ ಏಕತಾ ಮೂರ್ತಿಯ ಬಳಿ ಭೂಕಂಪನ ಉಂಟಾದ ಘಟನೆ ನಡೆದಿದೆ.

ಗುಜರಾತ್‍ನ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದ ಬಳಿ ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಕಂಪನ ದಾಖಲಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಸಾವು ನೋವು ಅಥವಾ ಆಸ್ತಿ ಹಾನಿಯ ವರದಿಯಾಗಿಲ್ಲ.

ಸೋಮವಾರ ರಾತ್ರಿ ಕಂಪನ ದಾಖಲಾಗಿದೆ. ಪ್ರಬಲ ಭೂಕಂಪಗಳು ಮತ್ತು ಚಂಡಮಾರುತಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ನಿರ್ಮಿಸಲಾದ ಏಕತಾ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಮಾರಕದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಹುಲ್ ಪಟೇಲ್ ಹೇಳಿದ್ದಾರೆ.

Leave A Reply

Your email address will not be published.