ಇಂದಿನಿಂದ ಪದವಿ ಪ್ರವೇಶ ಪ್ರಕ್ರಿಯೆ ಶುರು: ಆನ್ ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ

2022-23 ನೇ ಸಾಲಿನ ಪದವಿ ಪ್ರವೇಶ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದ್ದು, ಪ್ರಸಕ್ತ ವರ್ಷದಿಂದಲೇ ರಾಜ್ಯದ ಪದವಿ ಕಾಲೇಜುಗಳ ಪ್ರವೇಶವನ್ನು ಆನ್ ಲೈನ್ ಮುಖಾಂತರ ನಡೆಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

 

ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು 2022-23ನೇ ಸಾಲಿನಿಂದ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ವೆಬ್ ಸೈಟ್ ಮುಖಾಂತರ ಆನ್ ಲೈನ್ ಮೂಲಕ ಮಾತ್ರವೇ ಪ್ರವೇಶ ಪ್ರಕ್ರಿಯೆ ನಡೆಸಬೇಕೆಂದು ಕಾಲೇಜು ಶಿಕ್ಷಣ ಸೂಚನೆ ನೀಡಿದೆ.

ಕಾಲೇಜುಗಳಲ್ಲಿ ಲಭ್ಯವಿರುವ ಕೋರ್ಸ್, ಕಾಂಬಿನೇಷನ್, ಶುಲ್ಕಗಳ ವಿವರ ಮತ್ತು ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳು ಹಾಗೂ ಯುಯುಸಿಎಂಎಸ್ ವೆಬ್ ಸೈಟ್ ನ ಮಾಹಿತಿಯನ್ನು ಕಾಲೇಜಿನ ವೆಬ್ ಸೈನ್ ನಲ್ಲಿ ಹಾಗೂ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Leave A Reply

Your email address will not be published.