ಮಂಗಳೂರು: ಹಿಂದೂ ಯುವತಿಗೆ ಟಿಕೆಟ್ನಲ್ಲಿ ಮೊಬೈಲ್ ನಂಬರ್ ಬರೆದು ಬಲವಂತವಾಗಿ ಬ್ಯಾಗ್ ನೊಳಕ್ಕೆ ತುರುಕಿದ ಕಂಡೆಕ್ಟರ್ !
ಮಂಗಳೂರು : ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಬಸ್ ಟಿಕೆಟ್ನ ಮೇಲೆ ತನ್ನ ಮೊಬೈಲ್ ನಂಬರ್ ಬರೆದು ಕೊಟ್ಟ ಆರೋಪದಲ್ಲಿ ಖಾಸಗಿ ಬಸ್ ಕಂಡಕ್ಟರ್ ಓರ್ವನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಗುರುಪುರ ನಿವಾಸಿ ಮೊಹಮ್ಮದ್ ಅಜ್ಜಲ್ (32) ಬಂಧಿತ ಆರೋಪಿ.
ಮೊನ್ನೆ ಶನಿವಾರ ಮಧ್ಯಾಹ್ನ 4 ಗಂಟೆಗೆ ಮಂಗಳೂರಿನಿಂದ ಮೂಡಬಿದ್ರಿಗೆ ಸಂಚರಿಸುವ ಖಾಸಗಿ ಎಕ್ಸ್ ಪ್ರೆಸ್ ಬಸ್ಸಿನಲ್ಲಿ ಸಿದ್ದಕಟ್ಟೆ ಮೂಲದ ಯುವತಿಯೋರ್ವಳು ಮೂಡಬಿದ್ರಿಗೆ ಪ್ರಯಾಣಿಸುತ್ತಿದ್ದಳು. ಈ ಬಸ್ಸಿನಲ್ಲಿ ನಿರ್ವಾಹಕನಾಗಿದ್ದ ಅಜ್ಜಲ್ ಪ್ರಯಾಣಿಕರಿಗೆ ಟಿಕೆಟ್ ನೀಡುವ ಸಂದರ್ಭ ಯುವತಿಗೆ ತನ್ನ ಮೊಬೈಲ್ ನಂಬರ್ ಪಡೆದುಕೊಳ್ಳಲು ಕೇಳಿದ್ದ.
ಆದರೆ ಯುವತಿ ನಂಬರ್ ಪಡೆದು ಕೊಳ್ಳಲು ನಿರಾಕರಿಸಿದ್ದಾಳೆ. ಆಗ ಆಕೆಗೆ ನೀಡುವ ಟಿಕೆಟ್ ಹಿಂಭಾಗದಲ್ಲಿ ತನ್ನ ಮೊಬೈಲ್ ನಂಬರ್ ಬರೆದು ಯುವತಿಯ ಹ್ಯಾಂಡ್ ಒಳಕ್ಕೆ ಟಿಕೆಟ್ ತುರುಕಿದ್ದ. ಈ ವಿಚಾರದಿಂದ ಕ್ರುದ್ಧಗೊಂಡ ಯುವತಿ ಯುವತಿ ಸಾರ್ವಜನಿಕರ ಸಹಾಯ ಕೇಳಿದ್ದಾಳೆ. ಆಗ ಆಕೆಯೇ ಸಹಾಯಕ್ಕೆ ಧಾವಿಸಿದ ಹಿಂದೂ ಸಂಘಟನೆಯ ಮುಖಂಡರು ಆತನ ವಿರುದ್ಧ ವಿರುದ್ಧ ಬಜಪೆ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಸಂಜೆ 7 ಗಂಟೆ ಸುಮಾರಿಗೆ ಆರೋಪಿ ಕೆಲಸ ಮಾಡುತ್ತಿದ್ದ ಬಸ್ಸನ್ನು ಗುರುಪುರ ಕೈಕಂಬದಲ್ಲಿ ತಡೆದು ಆರೋಪಿಯನ್ನು ಬಂಧಿಸಿ ಎಫ್ಐಆ ದಾಖಲಿಸಿಕೊಂಡಿದ್ದಾರೆ.
ಯುವತಿಗೆ ಅನ್ಯಕೋಮಿನ ಕಂಡಕ್ಟರ್ ಮೊಬೈಲ್ ನಂಬರನ್ನು ಟಿಕೆಟ್ ಮೇಲೆ ಬರೆದು ಬ್ಯಾಗ್ ನೊಳಗೆ ಹಾಕಿದ ವಿಚಾರ ಬಜರಂಗದ ಕಾರ್ಯಕರ್ತರ ಗಮನಕ್ಕೆ ಬಂದಿದ್ದು ಬಸ್ ತಡೆಯಲು ಕಾರ್ಯಕರ್ತರು ಉದ್ದೇಶಿಸಿದ್ದರು. ಆದರೆ ಪೋಲೀಸರ ಕ್ಷಿಪ್ರ ಕಾರ್ಯಾಚರಣೆಯ ಕಾರಣ ಸಂಭಾವ್ಯ ಗಲಾಟೆ ತಪ್ಪಿದೆ.
ಮೊಹಮ್ಮದ್ ಅಜ್ಜಲ್ ನಂತಹ ಕೆಲವು ಮಂದಿ ಕಂಡಕ್ಟರ್ಗಳಿಂದಾಗಿ ಬಸ್ಸುಗಳಲ್ಲಿ ನಿಯತ್ತಿನಿಂದ ದುಡಿಯುವ ಚಾಲಕರು ಮತ್ತು ನಿರ್ವಾಹಕರುಗಳನ್ನೂ ಸಾರ್ವಜನಿಕರು ಕೆಟ್ಟ ದೃಷ್ಟಿಯಿಂದ ನೋಡುವಂತಾಗಿದೆ. ಇಂತಹ ಕೆಲವರಿಂದ ನಮ್ಮ ವೃತ್ತಿಗೆ ಕಳಂಕ ತರಲಾಗುತ್ತಿದೆ ಎಂದು ಕಂಡಕ್ಟರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿನ್ನೆಲೆ ನೋಡಿ ಕೆಲಸಕ್ಕೆ ಸೇರಿಸಿಕೊಳ್ಳಲು ಒತ್ತಾಯ ಕೇಳಿಬಂದಿದೆ.
ತಮ್ಮ ದುರ್ನಡತೆಯಿಂದ, ಅತ್ಯುತ್ತಮ ವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಬಸ್ ವ್ಯವಸ್ಥೆಗೆ ಕಳಂಕ ತರುವ ಮತ್ತು ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಬಸ್ ಸಿಬ್ಬಂದಿಗಳ ಬಗ್ಗೆ ಬಸ್ಸು ಮಾಲಕರು ನಿಗಾ ಇಡಬೇಕಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ.