ಮತ್ತೆ ಪುಟಿದೆದ್ದ ಷೇರು; ಇಲ್ಲಿದೆ ಷೇರು ಮಾರುಕಟ್ಟೆಯ ಲಾಭ ನಷ್ಟಗಳ ವಿವರ

ಕಳೆದ ವಾರ ಈ ವರ್ಷದಲ್ಲೇ ಕೆಟ್ಟ ವಾರವನ್ನು ಕಂಡ ಷೇರು ಮಾರುಕಟ್ಟೆಯು ಸೋಮವಾರ ಪುಟಿದೆದ್ದಿದೆ. ಇಂದು ಷೇರು ಪೇಟೆಯು ಕೊಂಚ ಚೇತರಿಕೆ ಕಂಡಿದೆ.

 

ಸನ್‌ ಫಾರ್ಮಾ ನಿಫ್ಟಿಯಲ್ಲಿ ಭಾರೀ ಚೇತರಿಕೆ ಕಂಡಿದೆ. ಸನ್‌ ಫಾರ್ಮಾ ಷೇರು ಶೇಕಡ 1.53ರಷ್ಟು ಹೆಚ್ಚಳ ಕಂಡು ರೂಪಾಯಿ 805.50ಕ್ಕೆ ತಲುಪಿದೆ. ಇನ್ನು ಷೇರು ಮಾರುಕಟ್ಟೆಯಲ್ಲಿ ಸುಮಾರು 1,047 ಷೇರುಗಳು ಲಾಭವನ್ನು ಕಂಡಿದ್ದರೆ 1,366 ಷೇರುಗಳು ನಷ್ಟವನ್ನು ಕಂಡಿದೆ.

ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಎಚ್ ಯುಎಲ್, ಎಚ್ ಡಿಎಫ್ ಸಿ, ಅಪೋಲೊ ಹಾಸ್ಪಿಟಲ್ಸ್, ಏಷಿಯನ್ ಪೇಂಟ್ಸ್, ಆಲ್ಟ್ರಾ ಟೆಕ್ ಸಿಮೆಂಟ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಒಎನ್ ಜಿಸಿ, ಟಾಟಾ ಸ್ಟೀಲ್, ಯುಪಿಎಲ್, ಹಿಂಡಲ್ಕೋ ಇಂಡಸ್ಟ್ರೀಸ್ ಮತ್ತು ಕೋಲ್ ಇಂಡಿಯಾ ಷೇರುಗಳು ನಷ್ಟ ಕಂಡಿದೆ.

Leave A Reply

Your email address will not be published.