ಬುರ್ಕಾ ಧರಿಸಿ ಪಬ್ಲಿಕ್ ನಲ್ಲಿ ಶೇಕಿಂಗ್ ಮಾಡಿದ ಮುಸ್ಲಿಂ ಹುಡುಗಿ!

ಮುಸ್ಲಿಂ ಹುಡುಗಿಯೊಬ್ಬಳು ಸ್ವತಃ ಬುರ್ಕಾ ಧರಿಸಿ ಕುಣಿದು ಕುಪ್ಪಳಿಸಿದ ವೀಡಿಯೋ ವೈರಲ್ ಆಗಿದೆ.
ಇಸ್ತಾನ್‌ಬುಲ್‌ನಲ್ಲಿ ನಟಿ ಮಂದನಾ ಅವರು ಶೂಟಿಂಗ್‌ವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಶಾಪಿಂಗ್ ಗೆಂದು ಮಾಲ್ ಗೆ ಬುರ್ಕಾ ಧರಿಸಿ ಬಂದ ನಟಿ, ಸಣ್ಣ ಬಟ್ಟೆಯೊಂದನ್ನು ಕೈಯಲ್ಲಿ ಹಿಡಿದುಕೊಂಡು ಏನು ಅನಿಸುತ್ತೋ ಡ್ಯಾನ್ಸ್ ಮಾಡಿದ್ದಾಳೆ. ಈ ವೀಡಿಯೋವನ್ನು ನಟಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಕೆಲ ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ಈಕೆ ಈಗ ವಿವಾದವನ್ನು ನಟಿ ಮೈಮೇಲೆ ಎಳೆದುಕೊಂಡಿದ್ದಾರೆ. ಹೌದು, ಬುರ್ಕಾ ಧರಿಸಿ, ಡ್ಯಾನ್ಸ್ ಮಾಡಿರೋದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಡ್ಯಾನ್ಸ್ ಮಾಡಿರುವ ವೀಡಿಯೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬುರ್ಕಾ ಹಾಕಿ ಡ್ಯಾನ್ಸ್ ಮಾಡಿದ ಆಕೆಯ ಡ್ಯಾನ್ಸ್ ನೋಡಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ನಟಿ ಕಂಗನಾ ರಣಾವತ್ ಅವರು ನಡೆಸಿಕೊಡುತ್ತಿದ್ದ ‘Lock Upp’ ಶೋನಲ್ಲಿ ನಟಿ ಮಂದನಾ ಕರೀಮಿ ಅವರು ಭಾಗವಹಿಸಿದ್ದರು. ಈ ಶೋನಲ್ಲಿ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಹೇಳಿಕೊಂಡಿದ್ದ ನಟಿ, ಭಾರೀ ವಿವಾದಕ್ಕೆ ಗುರಿಯಾಗಿದ್ದರು ಕೂಡಾ. ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ಮಂದನಾ ಕರೀಮಿ ಅವರು ನಿರ್ದೇಶಕನ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದು, ಗರ್ಭಿಣಿಯಾಗಿದ್ದೆ ಎಂಬುದನ್ನು ‘Lock Upp’ ಶೋನಲ್ಲಿ ಬಾಯಿಬಿಟ್ಟಿದ್ದರು. ಮಂದನಾ ಕರೀಮಿ ಅವರು ಗೌರವ್ ಗುಪ್ತಾಗೆ ವಿಚ್ಛೇದನ ನೀಡಬೇಕು ಎಂದು ಯೋಚನೆ ಮಾಡುತ್ತಿದ್ದ ಸಮಯದಲ್ಲೇ ಬಾಲಿವುಡ್ ನ ಖ್ಯಾತ ನಿರ್ದೇಶಕ ಜೊತೆ ರಹಸ್ಯ ಸಂಬಂಧದಲ್ಲಿ ಇದ್ದರಂತೆ. ಆ ನಿರ್ದೇಶಕ ಬಾಲಿವುಡ್ ನ ಮಹಿಳಾ ಹಕ್ಕುಗಳ ಬಗ್ಗೆ ದನಿಯೆತ್ತಿ ಸಿನಿಮಾ ಮಾಡುತ್ತಿದ್ದರು ಎಂಬ ಹೇಳಿಕೆಯನ್ನು ನೀಡಿದ್ದರು.

ಇಸ್ತಾನ್‌ಬುಲ್‌ನಲ್ಲಿ ಮಂದನಾ ಅವರು ಶೂಟಿಂಗ್‌ವೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ಅವರು ಬುರ್ಕಾ ಧರಿಸಿದ್ದರು. ಬಟ್ಟೆ ಶಾಪ್ ವೊಂದರಲ್ಲಿ ಬುರ್ಕಾ ಹಾಕಿಕೊಂಡ ಮಂದನಾ ಅವರು ಡ್ಯಾನ್ಸ್ ಮಾಡಿದ, ವೀಡಿಯೋವನ್ನು ನಟಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ‘ಹಿಜಾಬ್ ಹಾಕಿಕೊಂಡು ಡ್ಯಾನ್ಸ್ ಮಾಡೋದು ಸುಲಭ ಅಂದುಕೊಂಡಿದ್ದೆ. ಆದರೆ ಹಾಗಿಲ್ಲ’ ಎಂದಿದ್ದಾರೆ.

https://www.instagram.com/reel/Ce5SP72JDn5/?utm_source=ig_web_copy_link

ಆಕೆಯ ಈ ಡ್ಯಾನ್ಸ್ ಅನೇಕರಿಗೆ ಅಸಭ್ಯ ಅನ್ನಿಸಿದೆ. ನೋಡಿ ಅನೇಕ ಮಂದಿ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ನೋಡಿದವರು ಅದರಲ್ಲೇನಿದೆ ಅಸಭ್ಯ ಅಂತಿದ್ದಾರೆ. ‘ಮುಸ್ಲಿಂ ಆಗಿ ಹಿಜಾಬ್‌ನ್ನು ಗೇಲಿ ಮಾಡ್ತೀಯಾ? ನಾಚಿಕೆಯಾಗಬೇಕು’ ಎಂಬಿತ್ಯಾದಿ ಕಟುವಾದ ಟೀಕೆಗಳನ್ನು ಕಟ್ಟರ್ ಗಳು ಮಾಡಿದ್ದಾರೆ. ಆಕೆ ಮಾತ್ರ ಬಿಂದಾಸ್ ಆಗಿ ಓಡಾಡ್ತಿದ್ದಾಳೆ. ಮನಸ್ಸಿನ ಭಾವನೆ ಮತ್ತು ಮೂಡ್ ಬಂದಾಗ ಡ್ಯಾನ್ಸ್ ಮಾಡ್ತೇವೆ. ಬುರ್ಕಾ ಹಾಕಿದ ಕೂಡಲೇ ಮೂಡ್ ಬರ್ಬಾರ್ದು ಅಂತೇನಿಲ್ಲವಲ್ಲ ಅಂದು ಬುರ್ಕಾ ಬದಿಗಿರಿಸಿ ಬೇರೆ ದಿರಿಸು ಏರಿಸಿ ಇನ್ನೊಂದು ಲಹರಿಗೆ ರೆಡಿ ಆಗ್ತಿದ್ದಾಳಂತೆ ಮಂದನಾ.

Leave A Reply