ಭೂಮಿಗೆ ಕಾದಿದೆಯೇ ಬಹುದೊಡ್ಡ ಗಂಡಾಂತರ !?? | ಇಂದು ಭೂಮಂಡಲಕ್ಕೆ ಅಪ್ಪಳಿಸಲಿದೆ ಭೀಕರ ಸೌರ ಮಾರುತ

ಪ್ರಕೃತಿ ಎದುರು ಯಾರೂ ನಿಲ್ಲುವುದು ಸಾಧ್ಯವಿಲ್ಲ, ಗೆಲ್ಲುವುದೂ ಸಾಧ್ಯವಿಲ್ಲ. ಪ್ರಕೃತಿ ಮುನಿದರೆ ಎಲ್ಲವೂ ಸರ್ವನಾಶ. ಅಂತೆಯೇ ಎಲ್ಲಾ ಮುನ್ನೆಚ್ಚರಿಕೆಗಳ ನಡುವೆಯೇ ಇಂದು ಭೂಮಿಯ ಮೇಲೆ ದೊಡ್ಡ ಅಪಾಯವೊಂದು ಎದುರಾಗಲಿದೆಯಂತೆ !!

ಹೌದು. ವಿಜ್ಞಾನಿಗಳು ನೀಡಿರುವ ಎಚ್ಚರಿಕೆಯ ಪ್ರಕಾರ, ಇನ್ನು ಕೆಲವೇ ಗಂಟೆಗಳಲ್ಲಿ ಭೀಕರ ಸೌರ ಮಾರುತಗಳು ಭೂಮಿಗೆ ಅಪ್ಪಳಿಸಬಹುದು. ಬಲವಾದ ಸೌರ ಮಾರುತಗಳು ಇಂದು ರಾತ್ರಿ ಭೂಮಿಯ ಕಾಂತಕ್ಷೇತ್ರವನ್ನು ಅಪ್ಪಳಿಸಿದರೆ ಯುರೋಪಿನ ಅನೇಕ ದೇಶಗಳಲ್ಲಿ ದೊಡ್ಡ ಮಟ್ಟದ ಸಮಸ್ಯೆಗಳು ಎದುರಾಗಬಹುದು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈ ಸೌರ ಜ್ವಾಲೆಗಳು ಸೂರ್ಯನ ರಂಧ್ರದಿಂದ ಹೊರಬರುತ್ತವೆ. ಇದರ ವೇಗ ಸೆಕೆಂಡಿಗೆ 600 ಕಿ.ಮೀ. ಇದು ನಮ್ಮ ಭೂಮಿಯ ಮ್ಯಾಗ್ನೆಟೋಸ್ಪಿಯರ್ ಮೇಲೆ ಪರಿಣಾಮ ಬೀರುತ್ತದೆ. ಆದರೂ ಈ ಸೌರ ಜ್ವಾಲೆಯು ಭೂಮಿಯನ್ನು ಅಪ್ಪಳಿಸುವ ಸಂಭವ ತೀರಾ ಕಡಿಮೆ ಎನ್ನಲಾಗಿದೆ. ಇದರ ಹೊರತಾಗಿಯೂ, ಒಂದು ವೇಳೆ ಇದು ಭೂಮಿಯನ್ನು ಅಪ್ಪಳಿಸಿದರೆ, ಪವರ್ ಗ್ರಿಡ್ ನಲ್ಲಿ ಏರಿಳಿತಗಳು ಉಂಟಾಗುತ್ತವೆ.

ಈ ಅಪಾಯಕಾರಿ ಸೌರ ಮಾರುತಗಳು Google ಮ್ಯಾಪ್ ಮತ್ತು ನಿಮ್ಮ GPS ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರೊಂದಿಗೆ, ಈ ಮಾರುತಗಳು ಹೆಚ್ಚಿನ ಎತ್ತರದಲ್ಲಿ ಹಾರುವ ವಲಸೆ ಹಕ್ಕಿಗಳ ಹಾದಿಯನ್ನು ಕೂಡಾ ತಪ್ಪಿಸಬಹುದು.

ಸೂರ್ಯನ ಹೊರ ಪದರವಾದ ಕರೋನಾ ತಾಪಮಾನವು 11 ಲಕ್ಷ ಡಿಗ್ರಿ ಸೆಲ್ಸಿಯಸ್ ತಲುಪುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ತಾಪಮಾನವು ತುಂಬಾ ಹೆಚ್ಚಾದಾಗ, ಸೂರ್ಯನ ಗುರುತ್ವಾಕರ್ಷಣೆಯು ವೇಗವಾಗಿ ಚಲಿಸುವ ಕಣಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವು ನಿರಂತರವಾಗಿ ಹೊರಬರುತ್ತವೆ. ಕರೋನಾ ರಂಧ್ರದಿಂದ ಹೊರಹೊಮ್ಮುವ ಸೌರ ಮಾರುತಗಳು ತುಂಬಾ ವೇಗವಾಗಿರುತ್ತವೆ. ಈ ವೇಗವು ಸೆಕೆಂಡಿಗೆ 600 ರಿಂದ 800 ಕಿಮೀ ತಲುಪುತ್ತದೆ.

ಇಂದು ರಾತ್ರಿ ಸಂಭವಿಸಬಹುದು ಎನ್ನಲಾದ ಈ ಗತಿ ವಿಧಿಗೆ ಸಂಬಂಧಿಸಿದಂತೆ ಬ್ರಿಟನ್ ಸೇರಿದಂತೆ ಯುರೋಪ್‌ನ ಯಾವುದೇ ದೇಶದ ಸರ್ಕಾರವು ಯಾವುದೇ ರೀತಿಯ ಎಚ್ಚರಿಕೆಯ ಸಂದೇಶವನ್ನು ಜಾರಿ ಮಾಡಿಲ್ಲ ಎಂದು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: