SBI ಗ್ರಾಹಕರಿಗೆ ಶಾಕಿಂಗ್ ನ್ಯೂಸ್!!
ದೇಶದ ಅತೀ ದೊಡ್ಡ ರಾಷ್ಟ್ರೀಯ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಶಾಕ್ ನೀಡಿದ್ದು, ಎಟಿಎಂಗಳಲ್ಲಿ ಹಣ ವಿತ್ ಡ್ರಾ ಶುಲ್ಕದಲ್ಲಿ ಬದಲಾವಣೆ ಮಾಡಿದೆ.
ಹೌದು. ಎಟಿಎಂಗಳಲ್ಲಿ ವಿತ್ ಡ್ರಾ ಮಾಡುವ ಶುಲ್ಕ ಪ್ರತಿ ಡ್ರಾಗೆ 5 ರೂ.ನಿಂದ 20ರೂ.ಗೆ ಏರಿಸಲಾಗಿದೆ. ಆದರೆ ಇದು ವಿತ್ ಡ್ರಾ ಮಾದರಿಯನ್ನು ಅವಲಂಬಿಸಿರುತ್ತದೆ. ಎಸ್ ಬಿಐ ಎಟಿಎಂಗಳಿಗೆ ಆದರೆ 5 ರೂ. ಹಾಗೂ ಇತರೆ ಬ್ಯಾಂಕ್ ಗಳ ಎಟಿಎಂಗಳಲ್ಲಿ ಆದರೆ 8 ರೂ. ಕನಿಷ್ಠ ಶುಲ್ಕ ವಸೂಲು ಮಾಡಲಾಗುವುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಮ್ಮ ಗುಂಪಿನ ಎಟಿಎಂಗಳಲ್ಲಿ ಮಾಸಿಕ ಐದು ಡ್ರಾಗಳಿಗೆ ಶುಲ್ಕದಿಂದ ವಿನಾಯಿತಿ ನೀಡಿದೆ. ಆದರೆ ಕನಿಷ್ಠ ಒಂದು ಲಕ್ಷ ರೂ. ಠೇವಣಿ ಇರಿಸಿದವರಿಗೆ ಮಾತ್ವ ಈ ನಿಯಮ ಅನ್ವಯವಾಗಲಿದೆ. ಈ ಎಟಿಎಂ ನಿಯಮಗಳು ದೇಶದ ಆರು ಮೆಟ್ರೋ ನಗರಗಳಲ್ಲಿ ಮಾತ್ರ ಅನ್ವಯವಾಗಲಿದ್ದು, ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ ಮತ್ತು ಹೈದರಾಬಾದ್ ಗಳಲ್ಲಿ ನೂತನ ಶುಲ್ಕ ಪದ್ಧತಿ ಜಾರಿಗೆ ಬರಲಿದೆ.
ಇದಕ್ಕೂ ಮುನ್ನ 25 ಸಾವಿರ ರೂ. ಮೇಲ್ಪಟ್ಟ ಠೇವಣಿ ಹೊಂದಿದ್ದು, ಅನಿಮಿಯಿತ ವಿತ್ ಡ್ರಾ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಇದೀಗ ಈ ಮೊತ್ತವನ್ನು ಕನಿಷ್ಠ 50 ಸಾವಿರ ರೂ.ಗೆ ಏರಿಸಲಾಗಿದೆ. ಆದರೆ ನಗರ ಪ್ರದೇಶಗಳಲ್ಲಿ ಎಸ್ ಬಿಐ ಗುಂಪಿನ ಎಟಿಎಂಗಳಲ್ಲಿ ಗರಿಷ್ಠ ಮೂರು ಬಾರಿ ಮಾತ್ರ ಉಚಿತವಾಗಿ ವಿತ್ ಡ್ರಾ ಮಾಡಬಹುದಾಗಿದೆ.