ತನ್ನ ಮೇಲಿನ ವಿವಾದಕ್ಕೆ ಸ್ಪಷ್ಟನೆ ನೀಡಿದ ನಟಿ “ಸಾಯಿಪಲ್ಲವಿ” , ವಿಡಿಯೋ ಮೂಲಕ ಸ್ಪಷ್ಟೀಕರಣ
ಖ್ಯಾತ ನಟಿ ಸಾಯಿಪಲ್ಲವಿ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಕಾಶ್ಮೀರ ಪಂಡಿತರ ಬಗ್ಗೆ ಹಾಗೂ ಗೋಕಳ್ಳಸಾಗಾಣೆ ಮಾಡುವವರ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದರು. ಈ ಬಗ್ಗೆ ಎಲ್ಲೆಡೆ ನಟಿ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮೌನ ಮುರಿದಿದ್ದು ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಯನ್ನೂ ನೀಡಿದ್ದಾರೆ
ಈ ಹಿಂದಿನ ಸಂದರ್ಶನದಲ್ಲಿ ನಾನು ಎಡವಾ-ಬಲವಾ ಎಂದು ಪ್ರಶ್ನಿಸಿದ್ದರು. ನಾನು ನ್ಯೂಟ್ರಲ್ ಎಂಬುದನ್ನು ಅವರಿಗೆ ಸ್ಪಷ್ಟಪಡಿಸಿದ್ದೇನೆ. ನಾನು ಮಾತಾಡಿದ್ದನ್ನೆಲ್ಲ ತಪ್ಪಾಗಿ ಭಾವಿಸಲಾಗಿದೆ. ಅಷ್ಟಕ್ಕೂ ಬಹಳಷ್ಟು ಮಂದಿ ನಾನು ಕೊಟ್ಟಿರುವ ಸಂದೇಶವನ್ನು ಪೂರ್ತಿಯಾಗಿ ನೋಡಿಲ್ಲ. ಕೆಲವೆಡೆ ಸಂದರ್ಶನದ ಆಯ್ದ ಭಾಗವನ್ನಷ್ಟೇ ಪ್ರಸಾರ ಮಾಡಿದ್ದಾರೆ ಎಂದು ಸಾಯಿಪಲ್ಲವಿ ವೀಡಿಯೋದಲ್ಲಿ ಹೇಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರೇ ಆಗಲಿ ನಂಬಿಕೆಗಳಿಗೆ ಬದ್ಧರಾಗುವ ಮೊದಲು ನಾವು ಒಳ್ಳೆಯ ಮನುಷ್ಯರಾಗಿರಬೇಕು. ನರಮೇಧದ ನಿಲುವಿನ ಬಗ್ಗೆ ನನ್ನ ವಿರೋಧವಿದೆ. ಯಾರಿಗೂ ಯಾರನ್ನೂ ಕೊಲ್ಲುವ ಹಕ್ಕಿಲ್ಲ. ಯಾವುದೇ ಧರ್ಮದ ವಿಚಾರಲ್ಲೂ ಹಿಂಸೆ ಸರಿಯಲ್ಲ ಎಂಬುದು ನನ್ನ ಭಾವನೆ. ವೈದ್ಯೆಯಾಗಿ ನನಗೆ ಎಲ್ಲ ಜೀವವೂ ಒಂದೇ, ನಾನು ಎಲ್ಲ ಜೀವವನ್ನೂ ಗೌರವಿಸುತ್ತೇನೆ. ನಾವೆಲ್ಲರೂ ಸಮಾನರು ಎಂಬುದನ್ನು ಶಾಲಾದಿನಗಳಿಂದಲೂ ಓದುತ್ತ ಬಂದಿದ್ದೇನೆ. ಮುಂದೆ ಯಾವುದೇ ಮಗು ಕೂಡ ಅದರ ಗುರುತಿನ ಕಾರಣಕ್ಕೆ ಭಯದಲ್ಲಿ ಬದುಕುವಂಥ ವಾತಾವರಣ ಉಂಟಾಗದಿರಲಿ ಎಂದು ಆಶಿಸುತ್ತೇನೆ ಎಂದಿರುವ ಸಾಯಿ ಪಲ್ಲವಿ, ಎಲ್ಲರಿಗೂ ಸಂತೋಷ, ಶಾಂತಿ-ಪ್ರೀತಿಯನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.