‘ಸ್ವಚ್ಛ ಭಾರತ್’ ಅಭಿಯಾನಕ್ಕೆ ಬದ್ಧರಾದ ಪ್ರಧಾನಿ ಮೋದಿ
ನವದೆಹಲಿ: ಯಾವುದೇ ಒಂದು ಕೆಲಸವು ಯಶಸ್ವಿಯಾಗಬೇಕಾದರೆ ಅದು ತಮ್ಮಿಂದ ಪ್ರಾರಂಭವಾದರೆ ಮಾತ್ರ ಸಾಧ್ಯ. ಕೇವಲ ಭಾಷಣಗಳಲ್ಲಿ ಮಾತಾಡಿ, ತನ್ನೊಳಗೆ ಆ ಗುಣ ನಡತೆ ರೂಡಿಸಿಕೊಳ್ಳದೆ ಇರೋರೋ ಮಧ್ಯೆ, ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಮಾತಿಗೆ ಬದ್ಧ ಎಂಬುದನ್ನು ಸಾಧಿಸಿತೋರಿಸಿದ್ದಾರೆ.
ಹೌದು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ‘ಸ್ವಚ್ಛ ಭಾರತ’ ಅಥವಾ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮವನ್ನು ವೈಯಕ್ತಿಕ ಮಟ್ಟದಲ್ಲಿ ಹೇಗೆ ಅನುಷ್ಠಾನಗೊಳಿಸಬೇಕು ಎಂಬುದಕ್ಕೆ ತಾವೇ ಉದಾಹರಣೆಯಾಗಿದ್ದಾರೆ. ಸ್ವಚ್ಛ ಭಾರತ್ ಅಭಿಯಾನ ಇಡೀ ಭಾರತದಲ್ಲಿ ಜಾರಿಯಲ್ಲಿದ್ದು, ಈ ನಡುವೆ ಅಭಿಯಾನಕ್ಕೆ ಬದ್ಧರಾಗಿ ಪ್ರಧಾನಿ ಮೋದಿ ಕಸ ಎತ್ತಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದೆಹಲಿಯ ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್‌ನ ಭಾಗವಾಗಿ ಹೊಸದಾಗಿ ಆರಂಭಿಸಲಾದ ಐಟಿಪಿಒ ಸುರಂಗದ ಪರಿಶೀಲನೆ ನಡೆಸುತ್ತಿದ್ದ ವೇಳೆ, ಅಲ್ಲಿಯೇ ಬಿದ್ದಿದ್ದ ಖಾಲಿ ನೀರಿನ ಬಾಟಲಿ ಮತ್ತು ಇತರ ಕಸದ ತುಂಡುಗಳನ್ನು ತಮ್ಮ ಕೈಗಳಿಂದ ಎತ್ತಿಕೊಂಡಿದ್ದಾರೆ. ಇದರ ಫೋಟೋ, ವಿಡಿಯೋ ನೆಟ್ಟಿಗರ ಮನೆ
ಗೆದ್ದಿದೆ. ಅಂದಹಾಗೆ ಇಂದಿನಿಂದ ಸುರಂಗವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
‘ಸ್ವಚ್ಛ ಭಾರತ ಅಭಿಯಾನ’ವನ್ನು ಪ್ರಧಾನಿ ಮೋದಿ ಅವರು
ಪ್ರಧಾನಿಯಾದ ವರ್ಷ ಅಕ್ಟೋಬರ್ 2, 2014 ರಂದು ಮತ್ತು ಮಹಾತ್ಮ ಗಾಂಧಿಯವರ 145 ನೇ ಜನ್ಮದಿನದಂದು ಪ್ರಾರಂಭಿಸಿದ್ದು, ಈ ಕಾರ್ಯಕ್ರಮವು ಸಾರ್ವತ್ರಿಕ ನೈರ್ಮಲ್ಯ ಕಾಪಾಡುವ ಪ್ರಯತ್ನಗಳನ್ನು ವೇಗಗೊಳಿಸಲು ಉದ್ದೇಶಿಸಲಾಗಿದೆ.
ಕಾರ್ಯಕ್ರಮಗಳ ಅಡಿಯಲ್ಲಿ ಎಲ್ಲಾ ಗ್ರಾಮಗಳು, ಗ್ರಾಮ
ಪಂಚಾಯತ್‌ಗಳು, ಜಿಲ್ಲೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗ್ರಾಮೀಣ ಭಾರತದಲ್ಲಿ 100 ಮಿಲಿಯನ್ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಬಯಲು ಶೌಚಮುಕ್ತ ಎಂದು ಘೋಷಿಸಿಕೊಂಡಿವೆ. ಈ ಕಾರ್ಯಕ್ರಮವು ಈಗ ಸ್ವಚ್ಛ ಭಾರತ್ ಮಿಷನ್ ಎಂಬ ಮುಂದಿನ ಹಂತದತ್ತ ಸಾಗುತ್ತಿದೆ.
ಇದೀಗ ಮೋದಿ ಕಸ ಹೆಕ್ಕಿ ಸ್ವಚ್ಛತೆ ಕಾಪಾಡಿದ ಬಗ್ಗೆ ಟ್ವಿಟ್ ಮಾಡಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ “ಐಟಿಪಿಒ ಸುರಂಗದ ಉದ್ಘಾಟನೆಯ ಸಂದರ್ಭದಲ್ಲಿಯೂ, ಪಿಎಂ ನರೇಂದ್ರ ಮೋದಿ ಜಿ ಅವರು ಕಸವನ್ನು ಎತ್ತಿ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳುತ್ತಾರೆ” ಎಂದು ಪ್ರಧಾನಿಯವರು ಕಸ ತೆಗೆಯುತ್ತಿರುವ ವಿಡಿಯೋ
ಹಂಚಿಕೊಂಡಿದ್ದಾರೆ.