ಎಷ್ಟೇ ಡಯೆಟ್ ಮಾಡಿದರೂ, ತೂಕ ಕಡಿಮೆ ಆಗ್ತಿರಲಿಲ್ಲ, ನಂತರ ತಿಳಿಯಿತು ಶಾಕಿಂಗ್ ಸತ್ಯ!
ಯಾರಿಗೆ ತಾನೇ ಸಣ್ಣ ಆಗಬೇಕು ಅಂತ ಆಸೆ ಇರಲ್ಲ ಹೇಳಿ, ಚೆನ್ನಾಗಿ ಕಾಣಿಸ್ಬೇಕು ಎಂಬ ಆಸೆ ಎಲ್ಲರಲ್ಲೂ ಇದ್ದೇ ಇರುತ್ತದೆ.ಇದಕ್ಕಾಗಿ ಕೆಲವರು ಜಿಮ್ ಹೋಗಿ ವರ್ಕೌಟ್ ಮಾಡುತ್ತಾರೆ, ಡಯಟ್ ಮಾಡುತ್ತಾರೆ ಇದೆಲ್ಲಾ ಎಲ್ಲರಿಗೂ ತಿಳಿದಿರೋ ವಿಷಯ. ಕೆಲವರು ಎಷ್ಟೊಂದು ಕಟ್ಟುನಿಟ್ಟಾಗಿ ತೂಕ ಕಡಿಮೆ ಮಾಡಿದ್ರೂ ಕೆಲವರ ತೂಕ ಮಾತ್ರ ಕಡಿಮೆ ಆಗೋಲ್ಲ. ಇಂತದ್ದೇ ಒಂದು ಘಟನೆ ಚೀನಾದಲ್ಲಿ ನಡೆದಿದೆ. ಒಬ್ಬ ಮಹಿಳೆ ಎಷ್ಟು ಡಯೆಟ್ ಮಾಡಿದರೂ ಕಡಿಮೆ ಆಗದ ತೂಕದಿಂದ ವೈದ್ಯರ ಬಳಿ ಚಿಕಿತ್ಸೆಗೆ ಹೋಗಿದ್ದಾರೆ.
ಆ ಮಹಿಳೆಯ ಬಾಡಿ ಫುಲ್ ಚೆಕ್ ಅಪ್ ಮಾಡಿದ ಮೇಲೆ ಡಾಕ್ಟರ್ ಕೊಟ್ಟ ಸುದ್ದಿ ಎಂಥವರೂ ಕೂಡಾ ಬೆಚ್ಚಿಬೀಳುವ ಹಾಗಿತ್ತು. ಕಾರಣ ಆಕೆಯ ಹೊಟ್ಟೆಯಲ್ಲಿ ಇದ್ದ ಗೆಡ್ಡೆಯೇ ಆಕೆಯ ತೂಕ ಹೆಚ್ಚಾಗೋದಕ್ಕೆ ಕಾರಣ ಅಂತ ವೈದ್ಯರು ಹೇಳಿದ್ದರು.
ಜಿಯಾಂಗ್ಸ್ ನಗರದಲ್ಲಿ ವಾಸಿಸೋ, ಲೀನ್ ಅನ್ನೋ ಮಹಿಳೆ ಹೆಚ್ಚಾಗುತ್ತಿರೋ ತೂಕದಿಂದ ಅನಾರೋಗಕ್ಕೆ ಒಳಗಾಗಿದ್ದಳು. ವ್ಯಾಯಾಮ, ಡಯಟ್ ಮಾಡಿದರೂ ತೂಕ ಮಾತ್ರ ಕಡಿಮೆ ಆಗುತ್ತಿರಲಿಲ್ಲ. ಕೊನೆಗೆ ವೈದ್ಯರು ಆ ಮಹಿಳೆ ಸಮಸ್ಯೆಗೆ ಕಾರಣ ಆಕೆಯ ಹೊಟ್ಟೆಯಲ್ಲಿ 18.1 ಇಂಚಿನ ಟ್ಯೂಮರ್ ಅಂದರೆ 11ಕಿಲೋ ಗೆಡ್ಡೆಯೇ ಕಾರಣ ಎಂದು ಹೇಳಿದರು ತಕ್ಷಣವೇ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿ ಗೆಡ್ಡೆಯನ್ನ ಹೊಟ್ಟೆಯಿಂದ ಹೊರಗೆ ತೆಗೆದಿದ್ದಾರೆ. ಈ ಗೆಡ್ಡೆ ಇರುವುದರಿಂದಲೇ ಆಕೆಯ ಆರೋಗ್ಯ ಪದೇ-ಪದೇ ಹದಗೆಡುತ್ತಿತ್ತು. ಈಗ ಆಪರೇಷನ್ ನಂತರ, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.