ಅಡುಗೆ ಎಣ್ಣೆ ದರದಲ್ಲಿ ಭಾರೀ ಇಳಿಕೆ | ಯಾವೆಲ್ಲ ಎಣ್ಣೆಗೆ ಇಲ್ಲಿದೆ ಲಿಸ್ಟ್!
ರಷ್ಯಾ -ಉಕ್ರೇನ್ ನಡುವಿನ ಯುದ್ಧ ಪರಿಣಾಮ ಭಾರತದ ಅಡುಗೆ ಮನೆ ಮೇಲೂ ಆಗಿದೆ. ಮನೆಯಲ್ಲಿ ಬಳಸುವ ದಿನ ನಿತ್ಯ ಬಳಸುವ ಖಾದ್ಯ ತೈಲಗಳ ಪೂರೈಕೆ ವ್ಯತ್ಯಯದಿಂದಾಗಿ ಖಾದ್ಯ ತೈಲ ಬೆಲೆ ಏರಿಕೆಯಾಗಿದ್ದು, ಇದು ಜನರಿಗೆ ಬೆಲೆ ಏರಿಕೆಯ ಬಿಸಿಯನ್ನು ತಟ್ಟಿತ್ತು. ಇದಕ್ಕೆ ಕಾರಣ ಉಕ್ರೇನ್ನಿಂದ ಸೂರ್ಯಕಾಂತಿ ಎಣ್ಣೆ ಆಮದು ಸ್ಥಗಿತಗೊಂಡಿದ್ದು. ಆದರೆ, ಇತ್ತೀಚೆಗೆ ಖಾದ್ಯ ತೈಲ ಬೆಲೆ ಇಳಿಕೆಯಾಗುತ್ತಿದೆ.
ಹೈದಾರಾಬಾದ್ ಮೂಲದ ಜೆಮಿನಿ ಖಾದ್ಯ ತೈಲ ಸಂಸ್ಥೆಯು ಫ್ರೀಡಂ ಸನ್ಪ್ಲವರ್ ಎಣ್ಣೆಯ ಬೆಲೆ ಇಳಿಕೆ ಮಾಡಿದ ಬೆನ್ನಲ್ಲೇ ಪ್ರಮುಖ ಸಂಸ್ಥೆ ಅದಾನಿ ವಿಲ್ಮಾರ್ ಕೂಡಾ ಬೆಲೆ ಇಳಿಕೆ ಘೋಷಿಸಿದೆ.
ಜೆಮಿನಿ ಖಾದ್ಯ ತೈಲ ರೂಪಾಯಿ 15 ಕಡಿತ ಮಾಡಿದ್ದು, ದರವು 220 ರೂಪಾಯಿಗೆ ತಲುಪಿದೆ. ಇನ್ನು ಈ ವಾರದಲ್ಲಿ ಸಂಸ್ಥೆಯು ಫ್ರೀಡಂ ಸನ್ಪ್ಲವರ್ ಎಣ್ಣೆಯ ಬೆಲೆಯಲ್ಲಿ ಮತ್ತೆ 20 ರೂಪಾಯಿ ಕಡಿತ ಮಾಡುವ ಸಾಧ್ಯತೆ ಇದೆ. ಅದಾನಿ ಸಂಸ್ಥೆ ಒಡೆತನದ ಬ್ಯಾಂಡ್ ಫಾರ್ಚ್ಯನ್ ಸನ್ ಫ್ಲವರ್ ತೈಲದ 1 ಲೀಟರ್ ಬೆಲೆ(MRP) 220 ರಿಂದ 210 ರುಗೆ ಇಳಿಕೆಯಾಗಿದೆ.
ಇದೇ ರೀತಿ ಫಾರ್ಚ್ಯನ್ ಸೋಯಾಬಿನ್ ಹಾಗೂ ಫಾರ್ಚೂನ್ ಸಾಸಿವೆ ಎಣ್ಣೆ 1 ಲೀಟರ್ ಪ್ಯಾಕ್ ಬೆಲೆ 205 ರು ನಿಂದ 195ರು ತಗ್ಗಿದೆ. ಮಾರುಕಟ್ಟೆಯಲ್ಲಿ ಶೀಘ್ರವೇ ಪರಿಷ್ಕೃತ ದರದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ದಕ್ಷಿಣ ಭಾರತದಲ್ಲಿ ಸಾಸಿವೆ ಎಣ್ಣೆ ಸೋಯಾಬಿನ್ ಎಣ್ಣೆ ಬಳಕೆಗಿಂತ ಕಡ್ಲೆಕಾಯಿ ಎಣ್ಣೆ ರಿಫ್ರೆಂಡ್ ನೆಲಗಡಲೆ ಖಾದ್ಯ ತೈಲಗಳನ್ನು ಹೆಚ್ಚು ಬಳಸಲಾಗುತ್ತದೆ. ಅಲ್ಲದೆ ಭತ್ತದ ತೌಡಿನಿಂದ ಉತ್ಪಾದಿಸಿದ ಖಾದ್ಯ ತೈಲ ಕೂಡಾ ಜನಪ್ರಿಯತೆ ಗಳಿಸುತ್ತಿದೆ. ಈ ಖಾದ್ಯ ತೈಲಗಳ ಬೆಲೆ ಕೂಡಾ ಸೂರ್ಯಕಾಂತಿ ಎಣ್ಣೆಗಿಂತ ಕಡಿಮೆ ಇದ್ದು ಬೇಡಿಕೆಗೆ ತಕ್ಕಂತೆ ಪೂರೈಕೆಯೂ ಆಗುತ್ತಿದೆ ಎಂದು ಅಂಗು ಮಲಿಕ್ ಹೇಳಿದರು.