ಭಾವನ ಖಾಸಗಿ ಭಾಗಕ್ಕೆ ಬಿಸಿಬಿಸಿ ನೀರು ಸುರಿದ ಅತ್ತಿಗೆ!!!

ಕೆಲವೊಂದು ಮನೆಯಲ್ಲಿ ಸಣ್ಣ ವಿಷಯಗಳಿಗಾಗುವ ಜಗಳ ದೊಡ್ಡ ಅವಾಂತರಕ್ಕೆ ಕಾರಣವಾಗುವ ಎಷ್ಟೋ ಸಂದರ್ಭಗಳು ಇದೆ. ಕೆಲವೊಂದು ಘಟನೆ ಎಷ್ಟೊಂದು ಅತಿರೇಕಕ್ಕೆ ಹೋಗುತ್ತದೆ ಎಂದು ನಾವು ಊಹಿಸಲೂ ಸಾಧ್ಯವಿಲ್ಲ ಆ ರೀತಿ ಆಗುತ್ತದೆ. ಇಂಥಹುದೇ ಒಂದು ಘಟನೆ ಬಿಹಾರದ ರಾಜಧಾನಿಯಲ್ಲಿ ನಡೆದಿದೆ.

 

ಪಾಟ್ನಾದಲ್ಲಿ ಅತ್ತಿಗೆ ಕೋಪದಲ್ಲಿ ಮಾಡಿದ ಕೃತ್ಯಕ್ಕೆ ಈಗ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಮನೆಯಲ್ಲಿ ನಡೆದ ಜಗಳದ ನಡುವೆಯೇ ಸಿಟ್ಟಿಗೆದ್ದ ಅತ್ತಿಗೆ, ಭಾವನ ಗುಪ್ತಾಂಗದ ಮೇಲೆ ಕುದಿಯುವ ನೀರನ್ನು ಸುರಿದೇ ಬಿಟ್ಟಿದ್ದಾಳೆ.

ಫತುಹಾದ ಮನ್ಸೂದ್‌ಪುರ ಪ್ರದೇಶದ ಮನೆಯೊಂದರಲ್ಲಿ ಜಮೀನಿನ ಬಗ್ಗೆ ವಿವಾದವಿತ್ತು. ಈ ವಿಚಾರವಾಗಿ ಮನೆಯಲ್ಲಿ ಚರ್ಚೆಯಾಗುತ್ತಿತ್ತು. ಶುಕ್ರವಾರವೂ ಜಮೀನಿನ ಹಕ್ಕು ವಿಚಾರವಾಗಿ ಕುಟುಂಬಸ್ಥರು ಜಗಳವಾಡಿದ್ದರು. ಈ ವಿಚಾರದಲ್ಲಿ ಸಿಟ್ಟಿಗೆದ್ದ ಅತ್ತಿಗೆ ಭಾವನ ಗುಪ್ತಾಂಗದ ಮೇಲೆ ಬಿಸಿ ನೀರು ಎರಚಿದ್ದಾಳೆ. ಈ ಘಟನೆಯಲ್ಲಿ ಬಾವನ ಖಾಸಗಿ ಅಂಗಗಳು ಸುಟ್ಟು ಕರಕಲಾಗಿವೆ. ಈ ಬೆನ್ನಲ್ಲೇ ಗಾಯಾಳು ಮಿಥೇಶ್ ಕುಮಾರ್ ಅವರ ಪತ್ನಿ ಶೋಭಾದೇವಿ ಅವರು ಫತುಹಾ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ಈ ವಿಷಯ ಭೂ ವಿವಾದಕ್ಕೆ ಸಂಬಂಧಿಸಿದ್ದು ಇದರಿಂದ ಗಾಯಾಳುವನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕೃತ್ಯದ ನಂತರ ಅತ್ತಿಗೆ ಇದನ್ನು ಏಕೆ ಮಾಡಿದೆ ಎಂದು ಕೂಡ ವಿವರಿಸಿದ್ದಾಳೆ.

Leave A Reply

Your email address will not be published.