ಶಿಕ್ಷಕರ ನೇಮಕಕ್ಕೆ ಜೂನ್ 24 ರಂದು ನಡೆಯಲಿರುವ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟ

Share the Article

ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆಯು 2021-22 ನೇ ಸಾಲಿನ ಶಿಕ್ಷಕರ ನೇಮಕಕ್ಕೆ ಜೂನ್ 24 ಕ್ಕೆ ಕೌನ್ಸೆಲಿಂಗ್ ನಡೆಯಲಿದ್ದು, ವೇಳಾಪಟ್ಟಿ ಪ್ರಕಟಿಸಲಾಗಿದೆ.

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳ ಆಯ್ಕೆಗೆ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಕೌನ್ಸೆಲಿಂಗ್ ನಡೆಸಲಿದೆ.

ಲಿಖಿತ ಪರೀಕ್ಷೆ ನಡೆಸಿ ಮೊದಲ ಹಂತದ ಕೌನ್ಸೆಲಿಂಗ್ ಮುಗಿಸಲಾಗಿದೆ. ಆದರೆ ಬಹುತೇಕ ಜಿಲ್ಲೆಗಳಲ್ಲಿ ಹುದ್ದೆ ಖಾಲಿ ಉಳಿದಿದ್ದು, ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಉಳಿದ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಆದ್ದರಿಂದ ಜೂನ್ 24 ರಂದು ಕೌನ್ಸೆಲಿಂಗ್ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ

https://www.schooleducation.kar.nic.in ಗೆ ಭೇಟಿ ನೀಡಬಹುದು.

Leave A Reply