ಸ್ವಯಂ ಉದ್ಯೋಗ, ನೇರಸಾಲ ಮತ್ತು ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನ !!

2022-23ನೇ ಸಾಲಿನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಬಯಸುವ, ಪ್ರವರ್ಗ-1 ರ 6(ಎ) ಯಿಂದ 6(ಎಕೆ) ವರೆಗಿನ ಬೆಸ್ತ, ಕೋಳಿ, ಕಬ್ಬಲಿಗ ಇತ್ಯಾದಿ ಜಾತಿ/ಉಪಜಾತಿಗಳಿಗೆ ಸೇರಿದ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿಗಮದ ಸ್ವಯಂ ಉದ್ಯೋಗ ನೇರಸಾಲ ಮತ್ತು ಸಹಾಯಧನ ಯೋಜನೆ, 2022-23ನೇ ಸಾಲಿನ ಅರಿವು ಶೈಕ್ಷಣಿಕ ಸಾಲ (ನವೀಕರಣ) (3 ಮತ್ತು 4ನೇ ಕಂತುಗಳಿಗೆ) ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಅರ್ಜಿ ಸಲ್ಲಿಸಲು ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಕೇಂದ್ರ ಆಧಾರ್ ಅಧಿನಿಯಮ, 2016 ಸೆಕ್ಷನ್ (7) ರಡಿ ಆಧಾರ್ ಕಾರ್ಡ್ ಹೊಂದಿರಬೇಕು. ಅರ್ಜಿದಾರರ ಹೆಸರು, ಆಧಾರ್ ಕಾರ್ಡ್, ಜಾತಿ/ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಖಾತೆಗಳಲ್ಲಿ ಹೊಂದಾಣಿಕೆ ಆಗಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.

ನಿಗಮದ/ ಸರ್ಕಾರದ ಯಾವುದಾದರೂ ಯೋಜನೆಗಳಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು. ಕುಟುಂಬದ ಒಬ್ಬರಿಗೆ ಮಾತ್ರ ಈ ಸೌಲಭ್ಯ ಒದಗಿಸಲಾಗುವುದು. ಸರ್ಕಾರ/ ನಿಗಮವು ಕಾಲಕಾಲಕ್ಕೆ ವಿಧಿಸುವ ಇನ್ನಿತರ ಅರ್ಹತೆ/ ನಿಬಂಧನೆಗಳನ್ನು ಹೊಂದಿದವರಾಗಿರಬೇಕು.

ಅನುದಾನದ ಲಭ್ಯತೆಗೆ ಅನುಗುಣವಾಗಿ ಯೋಜನೆಯನ್ನು/ಸೌಲಭ್ಯವನ್ನು ಜಾರಿಗೊಳಿಸಲಾಗುವುದು. ಯೋಜನೆಗಳ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಗಳಾದಲ್ಲಿ, ಆ ದಿನಾಂಕದಿಂದ ಜಾರಿಗೆ ಬರುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು. Suvidha.karnataka.gov.in ತಂತ್ರಾಂಶದ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ/ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಛೇರಿಗೆ ಭೇಟಿ ನೀಡಿ ಅಥವಾ ನಿಗಮದ ವೆಬ್ಸೈಟ್  https://ambigaradevelopment.karnataka.gov.in ನಲ್ಲಿ ಅರ್ಜಿ ನಮೂನೆ ಮತ್ತು ವಿವರ ಪಡೆಯಬಹುದಾಗಿದೆ.

error: Content is protected !!
Scroll to Top
%d bloggers like this: