ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ ರಿಲಯನ್ಸ್ ಜಿಯೋ !!
ಸ್ಮಾರ್ಟ್‌ಫೋನ್ ಬಳಕೆದಾರರು ತಮಗಿಷ್ಟ ಬಂದಂತಹ ಟೆಲಿಕಾಂ ಕಂಪನಿಯ ರೀಚಾರ್ಜ್ ಪ್ಲಾನ್‌ಗಳನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಂಪೆನಿಗಳ ರಿಚಾರ್ಜ್ ಪ್ಲಾನ್ ದರ ಏರಿಕೆಯಾಗುತ್ತಲೇ ಇದೆ. ಇದೀಗ ರಿಲಯನ್ಸ್ ಜಿಯೋ ತನ್ನ ಕೆಲವು ಯೋಜನೆಗಳ ಬೆಲೆಯನ್ನು ಶೇಕಡಾ 20 ರಷ್ಟು ಹೆಚ್ಚಿಸಿ ಮತ್ತೊಮ್ಮೆ ಶಾಕ್ ನೀಡಿದೆ.
ಹೌದು. ಕೆಲವು ಸಮಯದ ಹಿಂದೆ Jio ತನ್ನದೇ ಆದ ಅಗ್ಗದ ಫೀಚರ್ ಫೋನ್ JioPhone ಅನ್ನು ಬಿಡುಗಡೆ ಮಾಡಿತ್ತು. JioPhone ಬಳಕೆದಾರರಿಗೆ ಕಂಪನಿಯು ಕೆಲವು ವಿಶೇಷ ಯೋಜನೆಗಳನ್ನು ಕೂಡಾ ಪರಿಚಯಿಸಿತ್ತು. ಆದರೆ ಈಗ Jio ತನ್ನ ಮೂರು JioPhone ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ . ಈ ಮೂರು ಯೋಜನೆಗಳನ್ನು ಇಲ್ಲಿಯವರೆಗೆ 20% ರಿಯಾಯಿತಿಯಲ್ಲಿ ನೀಡಲಾಗುತ್ತಿತ್ತು. ಆದರೆ ಈಗ ಈ ಆಫರ್ ತೆಗೆದುಹಾಕಲಾಗಿದೆ. ಇದರಿಂದಾಗಿ ರೀಚಾರ್ಜ್ ಯೋಜನೆಗಳು ದುಬಾರಿಯಾಗಿವೆ.
155 ರೂ. ಪ್ಲಾನ್ ಗೆ ಇನ್ನು ನೀಡಬೇಕು 186 ರೂ. :
155 ರೂಪಾಯಿ ಬೆಲೆಯ JioPhoneನ ಅಗ್ಗದ ರೀಚಾರ್ಜ್ ಯೋಜನೆಯನ್ನು 186 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಯೋಜನೆಯಲ್ಲಿ, 28 ದಿನಗಳವರೆಗೆ 1GB ದೈನಂದಿನ ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ನೀಡಲಾಗುತ್ತಿದೆ.
185 ಪ್ಲಾನ್‌ನ ಬೆಲೆಯೂ ಹೆಚ್ಚಿದೆ :
185 ರೂ. ರೀಚಾರ್ಜ್ ಪ್ಲಾನ್ ಬೆಲೆ ಈಗ 222 ರೂಪಾಯಿಗೆ ಏರಿದೆ. ಈ ಯೋಜನೆಯು ದಿನಕ್ಕೆ 2GB ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಪ್ರಯೋಜನಗಳೊಂದಿಗೆ ಬರುತ್ತದೆ. ದೈನಂದಿನ ಡೇಟಾ ಮುಗಿದ ನಂತರ, ಇಂಟರ್ನೆಟ್ ವೇಗವು 64Kbpsಗೆ ಕಡಿಮೆಯಾಗುತ್ತದೆ. ಈ ಯೋಜನೆಯ ಮಾನ್ಯತೆ ಕೂಡ 28 ದಿನಗಳು.
ಇನ್ನು ಇತ್ತೀಚೆಗಷ್ಟೇ 749 ರೂ. ಟಾಪ್-ಎಂಡ್ ಪ್ಲಾನ್ ಅನ್ನು 899 ರೂ .ಗೆ ಹೆಚ್ಚಳ ಮಾಡಿತ್ತು. ಇದೀಗ ಮತ್ತೊಮ್ಮೆ ಉಳಿದೆರಡು ಪ್ಲಾನ್ ಗಳ ಬೆಲೆ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ನೀಡಿದೆ ರಿಲಯನ್ಸ್ ಜಿಯೋ.