ಮುಕ್ಕೂರು : ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಮುಕ್ಕೂರು : ರೋಗ ಮುಕ್ತ ಜೀವನಕ್ಕೆ ಯೋಗ ಅಭ್ಯಾಸ ಮಾಡುವುದು ಉತ್ತಮ ಮಾರ್ಗ. ಆರೋಗ್ಯ ಕಾಪಾಡಿಕೊಳ್ಳಲು ಯೋಗ ಪೂರಕ ಎಂದು ಭಾರತ್ ಸ್ವಾಭಿಮಾನ್ ಪತಂಜಲಿ ಯೋಗ ಸಮಿತಿ ಬೆಳ್ಳಾರೆ ಇದರ ಯೋಗ ತರಬೇತುದಾರ ವನಶ್ರೀ ಕೆ.ಗಣಪಯ್ಯ ಹೇಳಿದರು.

 

ಕೆಎಂಎಫ್ ಮಂಗಳೂರು ನಿರ್ದೇಶನದಂತೆ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ-2022 ಜೂ.17 ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಿತು.ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ಮಹತ್ವವನ್ನು ವಿಶ್ವಕ್ಕೆ ಸಾರಿದರು. ಹಾಗಾಗಿ ಜೂ.21 ರಂದು ಜಗತ್ತಿನ ನಾನಾ ದೇಶಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನ ಈ ಮೂಲಕ ಆಗುತ್ತಿದೆ ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ನಿರ್ದೇಶಕರಾದ ಸುಬ್ರಾಯ ಭಟ್ ನೀರ್ಕಜೆ, ಕೇಶವ ಕೆ.ಎನ್.ಕಂಡಿಪ್ಪಾಡಿ, ಗುಡ್ಡಪ್ಪ ಗೌಡ ಅಡ್ಯತಕಂಡ, ಸುಮಲತಾ ಮರಿಕೇಯಿ, ಸಾವಿತ್ರಿ ಚಾಮುಂಡಿಮೂಲೆ, ಪ್ರೇಮನಾಥ ರೈ, ಯೋಗ ತರಬೇತುದಾರ ಪ್ರಸಾದ್ ಸೇವಿತ, ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಗೌಡ ಮೊದಲಾದವರು ಉಪಸ್ಥಿತರಿದ್ದರು. 45 ನಿಮಿಷಗಳ ಕಾಲ ವಿದ್ಯಾರ್ಥಿಗಳು, ಸಾರ್ವಜನಿಕರು ವಿವಿಧ ಯೋಗ ಆಸನಗಳನ್ನು ಅಭ್ಯಸಿಸಿದರು.

Leave A Reply

Your email address will not be published.