ಚಿನ್ನ ಹೊಂದಿದವರೇ ಬಂಗಾರ ಖರೀದಿಸುವವರೇ ಇಲ್ಲಿದೆ ಎಚ್ಚರಿಕೆ ಸುದ್ದಿ
ಭಾರತೀಯರಿಗೆ ಚಿನ್ನ ಖರೀದಿ ಎಂದರೆ ಬಹಳ ಇಷ್ಟ. ಆದರೇ ಇನ್ನು ಕಷ್ಟವಾಗುವ ಸಂದರ್ಭ ಬಂದಿದೆ. ಒಬ್ಬ ವ್ಯಕ್ತಿ ಎಷ್ಟು ಚಿನ್ನ ಹೊಂದಿರಬೇಕು ಎಂಬುದಕ್ಕೂ ಮಿತಿಯಿದೆ. ಅದಕ್ಕಿಂತ ಹೆಚ್ಚು ಖರೀದಿಸಿದ್ರೆ ಅಥವಾ ಹೊಂದಿದ್ರೆ ತೆರಿಗೆ ಪಾವತಿಸಬೇಕು.
ಚಿನ್ನ ಎಂದ ತಕ್ಷಣ ಬರೀ ಆಭರಣ ಎಂದು ಅರ್ಥವಲ್ಲ. ಚಿನ್ನದ ನಾಣ್ಯಗಳು, ಚಿನ್ನದ ಗಟ್ಟಿಗಳು ಹಾಗೂ ಇತರ ಮಾದರಿಯ ಚಿನ್ನವೂ ಸೇರಿದೆ. ಚಿನ್ನದ ಖರೀದಿ ಮೇಲೆ ಶೇ.3ರಷ್ಟು ಸರಕು ಹಾಗೂ ಸೇವಾ ತೆರಿಗೆ (GST) ವಿಧಿಸಲಾಗುತ್ತದೆ. ಹಾಗೆಯೇ ಮೇಕಿಂಗ್ ಚಾರ್ಜ್ ಮೇಲೆ ಶೇ.5.
ಅವಿವಾಹಿತ ಮಹಿಳೆ 250 ಗ್ರಾಂ ತನಕ ಚಿನ್ನ ಹೊಂದಬಹುದು. ವಿವಾಹಿತ ಮಹಿಳೆ 500ಗ್ರಾಂ ಚಿನ್ನ ಹೊಂದಬಹುದು. ಪುರುಷ 100ಗ್ರಾಂ ಚಿನ್ನ ಹೊಂದಿರಬಹುದು. ಇನ್ನು ಮಗಳು ತಾಯಿಯಿಂದ ಬಳುವಳಿಯಾಗಿ ಬಂದ 200ಗ್ರಾಂ ಚಿನ್ನ ಹೊಂದಲು ಅವಕಾಶವಿದೆ. ನಿಗದಿತ ಮಿತಿಗಿಂತ ಹೆಚ್ಚಿನ ಚಿನ್ನ ಒಬ್ಬ ವ್ಯಕ್ತಿ ಬಳಿಯಿದ್ರೆ ಅದಕ್ಕೆ ಆತ ತೆರಿಗೆ ಪಾವತಿಸಬೇಕಾಗುತ್ತದೆ.
2016ರ ಡಿಸೆಂಬರ್ 1ರಂದು ಸಿಬಿಡಿಟಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಇದೇ ರೀತಿ ನಿಮಗೆ ಯಾರಾದ್ರೂ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ರೆ ಕೂಡ ಅದರ ದಾಖಲೆಯನ್ನು ಇಟ್ಟುಕೊಂಡಿರಿ. ಚಿನ್ನ ಖರೀದಿಸಿದ ಬಳಿಕ ಟ್ಯಾಕ್ಸ್ ಇನ್ ವಾಯ್ಸ್ ಅನ್ನು ಹಾಗೆಯೇ ಇಟ್ಟುಕೊಳ್ಳಿ.