ಜೈಲಲ್ಲಿ ಪುಕ್ಸಟ್ಟೆ ಊಟ ಮಾಡಿಕೊಂಡು ಜೀವನ ಕಳೆಯಲು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ ??
ತಪ್ಪು ಮಾಡಿದ್ದರೂ ಪೊಲೀಸರ ಮುಂದೆ ಶರಣಾಗದೆ ತಲೆ ಮರೆಸಿಕೊಳ್ಳುವವರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ಸರ್ಕಾರದ ಖರ್ಚಿನಲ್ಲಿ ಜೀವನ ಪರ್ಯಂತ ಉಚಿತ ಊಟ ತಿಂದುಕೊಂಡು ಜೀವನ ಸಾಗಿಸಬಹುದೆಂದು ತಾನೇ ಕೊಲೆಗಾರ ಎಂದು ಹೇಳಿ ಪೋಲೀಸರ ಮುಂದೆ ಶರಣಾದ ವಿಚಿತ್ರ ಘಟನೆ ನಡೆದಿದೆ.
ಈ ಘಟನೆ ಕೋಲ್ಕತ್ತಾದಲ್ಲಿ ಬೆಳಕಿಗೆ ಬಂದಿದ್ದು, ಒಬ್ಬ ವ್ಯಕ್ತಿ ತಡರಾತ್ರಿ ದಕ್ಷಿಣ ಕೋಲ್ಕತ್ತಾದ ಬಾನ್ಸ್‌ದ್ರೋನಿ ಸ್ಟೇಷನ್‌ನಲ್ಲಿ ಪೊಲೀಸರ ಮುಂದೆ ಹಾಜರಾಗಿ ತನ್ನ ಸಹೋದರನನ್ನು ಕೊಂದ ಬಗ್ಗೆ ಸುಳ್ಳು ತಪ್ಪೊಪ್ಪಿಗೆಯನ್ನು ನೀಡಿದ್ದಾನೆ. ”ನಾನು ನನ್ನ ಅಣ್ಣನನ್ನು ಕೊಂದಿದ್ದೇನೆ, ನನ್ನನ್ನು ಬಂಧಿಸಿ”ಎಂದು ಘೋಷಣೆ ಕೂಗುತ್ತಿದ್ದ ವ್ಯಕ್ತಿಯನ್ನು ಕಂಡ ಪೊಲೀಸ್ ತಂಡ ಸ್ಥಳಕ್ಕೆ ತೆರಳಿತ್ತು. ಪರಿಶೀಲಿಸಿದಾಗ ಮುಖಕ್ಕೆ ತಲೆದಿಂಬು ಹಾಕಿಕೊಂಡು ಶವವನ್ನು ಹೊರತೆಗೆದಿದ್ದಾರೆ. ಆದರೆ ಶವಪರೀಕ್ಷೆಯ ನಂತರ, ಹಿರಿಯ ಸಹೋದರ ಎಂದು ತಿಳಿದುಬಂದಿದೆ. ಆದರೆ, ಆ ವ್ಯಕ್ತಿಯ ಕೊಲೆಯಾಗಿರಲಿಲ್ಲ. ಬದಲಿಗೆ ಸೆರೆಬ್ರಲ್ ಸ್ಟ್ರೋಕ್‌ನಿಂದ ಮೃತಪಟ್ಟಿದ್ದರು ಎನ್ನಲಾಗಿದೆ.
ಪೊಲೀಸರ ಪ್ರಕಾರ ಈ ಘಟನೆ ಬಾನ್ಸ್‌ದ್ರೋನಿಯ ನಿರಂಜನ್ ಪಲ್ಲಿಯಲ್ಲಿ ನಡೆದಿದ್ದು, ಮೃತರನ್ನು ದೇಬಾಶಿಸ್ ಚಕ್ರವರ್ತಿ (48) ಎಂದು ಗುರುತಿಸಲಾಗಿದೆ. ಮೃತರು ತಮ್ಮ ಸಹೋದರ ಶುಭಾಶಿಸ್ ಅವರೊಂದಿಗೆ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದರು. ದೇಬಾಶಿಸ್ ಮತ್ತು ಶುಭಾಷಿಗಳ ತಾಯಿ ಜಾದವ್‌ಪುರದ ಸೆರಾಮಿಕ್ಸ್ ಸಂಸ್ಥೆಯ ಉದ್ಯೋಗಿಯಾಗಿದ್ದರು. ಅವರ ತಂದೆ ಆಗಲೇ ತೀರಿಕೊಂಡಿದ್ದರು. ನಿವೃತ್ತಿಯ ನಂತರ ತಾಯಿಗೆ ಪಿಂಚಣಿ 35 ಸಾವಿರ ರೂ.ಸಿಗುತ್ತಿತ್ತು. ಕುಟುಂಬದ ಹಿರಿಯ ಮಗ ದೇಬಾಶಿಸ್ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಕೆಲಸ ಮಾಡುವಾಗ ಅವರ ಕಣ್ಣುಗಳಿಗೆ ಹಾನಿಯಾದ ಕಾರಣ ಕೆಲಸ ಮಾಡಲಾಗದಿದ್ದರೂ ತಿಂಗಳಿಗೆ 15 ಸಾವಿರ ಪಿಂಚಣಿ ಪಡೆಯುತ್ತಿದ್ದರು. ಕಿರಿಯ ಮಗ ಶುಭಾಷಿಸ್ ಮಾಲ್ಡಾದಲ್ಲಿ ಉದ್ಯೋಗದಲ್ಲಿದ್ದು, 2017 ರಿಂದ ನಿರುದ್ಯೋಗಿಯಾಗಿದ್ದಾರೆ.
ತಾಯಿ ಮತ್ತು ಅವರ ಇಬ್ಬರು ಪುತ್ರರು 50,000 ರೂ.ಗಳನ್ನು ಸಂಪಾದಿಸುತ್ತಿದ್ದು, ದಕ್ಷಿಣ ಕೋಲ್ಕತ್ತಾದ ಬಾನ್ಸ್‌ದ್ರೋನಿಯಲ್ಲಿರುವ ಸೋನಾಲಿ ಪಾರ್ಕ್‌ನಲ್ಲಿ ಫ್ಲಾಟ್ ಅನ್ನು ಬಾಡಿಗೆಗೆ ಪಡೆದು ವಾಸವಿದ್ದರು. ಕಳೆದ ಮೇ ತಿಂಗಳಲ್ಲಿ ಅವರ ತಾಯಿ ನಿಧನರಾದ ನಂತರ ಪಿಂಚಣಿ ಸ್ಥಗಿತಗೊಳಿಸಲಾಗಿತ್ತು. ಇಬ್ಬರು ಸಹೋದರರು ಫ್ಲಾಟ್ ತೊರೆದು ನಿರಂಜನ್ ಪಲ್ಲಿಯಲ್ಲಿ ಸಣ್ಣ ಮನೆಯೊಂದನ್ನು ಬಾಡಿಗೆಗೆ ಪಡೆದು 15 ಸಾವಿರ ರೂ.ಗೆ ಸಂಸಾರ ನಡೆಸುತ್ತಿದ್ದರು. ಅವರು ಸ್ವತಃ ಚೆನ್ನಾಗಿ ಅಡುಗೆ ಮಾಡಲು ಸಾಧ್ಯವಾಗದ ಕಾರಣ ಒಣ ಆಹಾರ ಸೇವಿಸಿ ದಿನ ಕಳೆಯುತ್ತಿದ್ದರು.
ಕೆಲವು ದಿನಗಳ ಹಿಂದೆ, ದೇಬಾಶಿಸ್ ತನ್ನ ಸಹೋದರನಿಗೆ ತಾನು ಹೆಚ್ಚು ಕಾಲ ಬದುಕುವುದಿಲ್ಲ ಎಂದು ಹೇಳಿದ್ದನು. ತನ್ನ ಸಾವಿನ ನಂತರ ತನ್ನ ನಿರುದ್ಯೋಗಿ ಸಹೋದರ ಹಸಿವಿನಿಂದ ಸಾಯುತ್ತಾನೆ ಎಂದು ಹೆದರಿದ ಅವನು ತನ್ನ ಸಹೋದರನಿಗೆ ಕೊಲೆಯ ‘ಕಥೆ’ ಹೇಳಿ ಪೊಲೀಸರಿಗೆ ಹೋಗಿ ಶರಣಾಗುವಂತೆ ಹೇಳಿದ್ದನಂತೆ. ಅದರಂತೆ ಅಣ್ಣ ಮರಣ ಹೊಂದಿದ್ದು, ಬಳಿಕ ತಮ್ಮ ಅನಾಥನಾಗಿ ಬಿಟ್ಟ. ಬಳಿಕ ಅಣ್ಣನಿಗೆ ಬರುತ್ತಿದ್ದ 15 ಸಾವಿರ ಪಿಂಚಣಿಯನ್ನೂ ನಿಲ್ಲಿಸಲಾಯಿತು.
ಹೀಗಾಗಿ ಅಣ್ಣ ಹೇಳಿದಂತೆ ತಮ್ಮ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಕೊಲೆ ಆರೋಪದಡಿ ಜೈಲಿಗೆ ಹೋದರೆ ಊಟ, ವಸತಿಯಿಂದ ವಂಚಿತರಾಗುವುದಿಲ್ಲ ಎಂದು ಭಾವಿಸಿ ಅಣ್ಣನನ್ನು ಕೊಂದಿರುವುದಾಗಿ ಹೇಳಿದ್ದಾನೆ. ಜೀವಾವಧಿ ಶಿಕ್ಷೆಯಾದರೆ ಜೀವನ ಪರ್ಯಂತ ಸರ್ಕಾರದ ಖರ್ಚಿನಲ್ಲಿ ತಿಂದು ಬದುಕಬಹುದು ಎಂದು ಈ ಕೆಲಸಕ್ಕೆ ಮುಂದಾಗಿದ್ದನು ಎನ್ನಲಾಗುತ್ತಿದೆ.