ಹಸೆಮಣೆ ಏರಲು ಸಜ್ಜಾಗಿರುವ ಯುವಕರಿಗೆ ಶಾಕ್!! ಅದೊಂದೇ ಕಾರಣ ನೀಡಿ ಮುರಿದು ಬೀಳುತ್ತಿದೆಯಂತೆ ಮದುವೆ!???

Share the Article

ಇತ್ತೀಚಿನ ಮದುವೆಗಳಲ್ಲಿ ಮದುಮಗ ಗಡ್ಡ ಬಿಟ್ಟು ಹಸೆಮಣೆ ಏರುವುದು ಟ್ರೆಂಡ್ ಆಗಿದ್ದು,ಇದೇ ಉದ್ದೇಶದಲ್ಲಿ ಮದುಮಗ ಸ್ಟೈಲಿಶ್ ಆಗಿ ಗಡ್ಡ ಬಿಟ್ಟು ಮದುವೆಗೆ ಸಜ್ಜಾಗಿ ನಿಲ್ಲುತ್ತಾನೆ. ಆದರೆ ಇಂತಹ ಗಡ್ಡಾಧಾರಿ ಯುವಕರಿಗೆ ಇಲ್ಲೊಂದು ಶಾಕಿಂಗ್ ಕಾದಿದ್ದು, ಅದೊಂದೇ ಕಾರಣ ನೀಡಿ ಹೆಣ್ಣಿನ ಮನೆಯವರು ಮದುವೆಯನ್ನೇ ನಿಲ್ಲಿಸುತ್ತಾರಂತೆ, ಹೆಣ್ಣು ಕೊಡುವುದಿಲ್ಲವಂತೆ.

ಹೌದು, ರಾಜಸ್ಥಾನದ ಪಾಲಿ ಜಿಲ್ಲೆಯ ಸುಮಾರು 19 ಗ್ರಾಮಗಳ ಪ್ರಮುಖ ಕುಮಾವತ್ ಜನಾಂಗದ ಮುಖಂಡರುಗಳು ಸೇರಿ ಇಂತಹದೊಂದು ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದ್ದು, ಈ ನಿಯಮದ ಪ್ರಕಾರ ಇಲ್ಲಿ ಮದುವೆಯ ಗಂಡು ಗಡ್ಡ ಬಿಟ್ಟಿರಲು ಅವಕಾಶ ಇಲ್ಲವಂತೆ. ಹಾಗೂ ಗಡ್ಡ ಬೇಕೆಂದು ಹಠ ಹಿಡಿದಾತನಿಗೆ ಹೆಣ್ಣು ಸಿಗುವುದು ಬಹಳ ಕಷ್ಟ ಎನ್ನುತ್ತಿದ್ದಾರೆ ಇಲ್ಲಿನ ಜನ.

ಮದುವೆ ಕಾರ್ಯಕ್ರಮದಲ್ಲಿ ಎಲ್ಲವೂ ಹಿಂದಿನ ಸಂಪ್ರದಾಯದಂತೆ ನಡೆಯಬೇಕು ಎನ್ನುವುದು ಇಲ್ಲಿನ ಜನರ ಆಶಯ. ಒಂದು ಕಾಲದಲ್ಲಿ ಮದುಮಗ ಗಡ್ಡ ಬೋಳಿಸಿ ಹಸೆಮಣೆ ಏರಿ ತಾಳಿ ಕಟ್ಟುತ್ತಿದ್ದ ಸಂಸ್ಕೃತಿ, ಪದ್ಧತಿ ಕಾಲ ಉರುಳಿದಂತೆ ಬದಲಾಗಿದೆ. ಹಾಗೆ ಬದಲಾದರೂ ಈ ಜಿಲ್ಲೆಯ ಗ್ರಾಮಗಳಲ್ಲಿ ಬದಲಾಗಬಾರದು, ಮುಂದಿನ ಪೀಳಿಗೆಗೂ ಅದು ಉಳಿಯಬೇಕು ಎನ್ನುವ ದೃಷ್ಟಿಯಿಂದ ಕೈಗೊಂಡ ನಿರ್ಧಾರಕ್ಕೆ ಒಮ್ಮತದ ಸಹಕಾರ ವ್ಯಕ್ತವಾಗಿದೆಯಂತೆ.

Leave A Reply