KPTCL : 1492 ಹುದ್ದೆಗಳ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ‌ಬಿಡುಗಡೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ( KPTCL) ವು ಕಳೆದ ಫೆಬ್ರವರಿ ತಿಂಗಳಲ್ಲಿ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್, ಕಿರಿಯ ಸಹಾಯಕ ಸೇರಿದಂತೆ ಒಟ್ಟು 1492 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು. ಸದರಿ ಹುದ್ದೆಗಳ ನೇಮಕ ಪ್ರಕ್ರಿಯೆಯ ಮೊದಲ ಹಂತ ಸ್ಪರ್ಧಾತ್ಮಕ ಪರೀಕ್ಷೆಗೆ ನಿನ್ನೆಯಷ್ಟೇ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ. ದಿನಾಂಕ 23-07-2022, 24-07-2022 ಹಾಗೂ 07-08-2022 ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಸಂಭಾವ್ಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಕೆಪಿಟಿಸಿಎಲ್‌ನ ಈ ಹುದ್ದೆಗಳ ಪರೀಕ್ಷೆಗೆ ಅಡ್ಮಿಟ್ ಕಾರ್ಡ್ ಬಿಡುಗಡೆ ಯಾವಾಗ ಎಂದು ಹಲವು ಅಭ್ಯರ್ಥಿಗಳು ಪ್ರಶ್ನೆ ಕೇಳಿದ್ದರು. ಅದಕ್ಕೆ ಈ ಕೆಳಗಿನಂತೆ ನೀಡಲಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಿನ್ನೆಯಷ್ಟೇ ತಾತ್ಕಾಲಿಕ ವೇಳಾಪಟ್ಟಿಯನ್ನು ಪರೀಕ್ಷೆಗೆ ಬಿಡುಗಡೆ ಮಾಡಿದೆ. ಅಲ್ಲದೇ ಈ ವೇಳಾಪಟ್ಟಿಗೆ ಆಕ್ಷೇಪಣೆ ಅರ್ಜಿ ಆಹ್ವಾನಿಸಿದೆ. ಕೆಇಎ ಆಕ್ಷೇಪಣೆಗಳನ್ನು ಸ್ವೀಕರಿಸಿ ಪರಿಶೀಲನೆ ನಡೆಸಲಿದೆ. ಒಂದು ವೇಳೆ ಆಕ್ಷೇಪಣೆಗಳು ಬಂದಲ್ಲಿ ಪರಿಶೀಲಿಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಿದೆ. ಒಂದು ವೇಳೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗದಿದ್ದಲ್ಲಿ ಸಂಭಾವ್ಯ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಸಲಿದೆ.

ಕೆಪಿಟಿಸಿಎಲ್ ಪ್ರವೇಶ ಪತ್ರ ಡೌನ್‌ಲೋಡ್ ಹೇಗೆ?

– ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/index new ಗೆ ಭೇಟಿ ನೀಡಿ.

ಓಪನ್ ಆದ ಪೇಜ್‌ನಲ್ಲಿ ‘ನೇಮಕಾತಿ’ ಎಂದಿರುವಲ್ಲಿ ಕ್ಲಿಕ್ ಮಾಡಿ.

ಕೆಇಎ ಪ್ರಸ್ತುತ ನಡೆಸುತ್ತಿರುವ ನೇಮಕ ಪ್ರಕ್ರಿಯೆಗಳ ಲಿಸ್ಟ್ ಕಾಣುತ್ತದೆ. ಅದರಲ್ಲಿ ‘ಕೆಪಿಟಿಸಿಎಲ್ 2022’ ಎಂದಿರುವಲ್ಲಿ ಕ್ಲಿಕ್ ಮಾಡಿ.

ನಂತರ ಪ್ರವೇಶ ಪತ್ರ ಡೌನ್‌ಲೋಡ್‌ಗೆ ಅವಕಾಶ ನೀಡಿದ್ದಲ್ಲಿ, ಲಿಂಕ್ ನೀಡಲಾಗಿರುತ್ತದೆ. ಕ್ಲಿಕ್ ಮಾಡಿ.

ತೆರೆದ ಪೇಜ್‌ನಲ್ಲಿ ರಿಜಿಸ್ಟರ್ ನಂಬರ್ ನೀಡಿ ಲಾಗಿನ್ ಆಗುವ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕೆಇಎ ಕೆಪಿಟಿಸಿಎಲ್ ಹುದ್ದೆಗಳಿಗೆ ಪರೀಕ್ಷೆ ನಡೆಸಲಿದ್ದು, ಪರೀಕ್ಷೆಗೆ ಒಂದು ವಾರಕ್ಕೆ ಮುಂಚಿತವಾಗಿಯೇ ಪ್ರವೇಶ ಪತ್ರ ಬಿಡುಗಡೆ ಮಾಡಲಿದೆ. ಜುಲೈ 23 ರಿಂದ ಪರೀಕ್ಷೆ ಆರಂಭವಾದಲ್ಲಿ, ಜುಲೈ ಮೂರನೇ ವಾರದ ಆರಂಭದಲ್ಲಿಯೇ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.

ಕೆಪಿಟಿಸಿಎಲ್ ಹುದ್ದೆಗಳಿಗೆ ಎರಡು ಸೆಷನ್‌ಗಳಲ್ಲಿ ಪರೀಕ್ಷೆ ನಡೆಯಲಿದೆ. ಮೊದಲ ಸೆಷನ್ ಬೆಳಿಗ್ಗೆ 10-30 ರಿಂದ 12-30 ರವರೆಗೆ, ಎರಡನೇ ಸೆಷನ್ ಪರೀಕ್ಷೆ ಮಧ್ಯಾಹ್ನ 02 ರಿಂದ 05 ಗಂಟೆವರೆಗೆ ನಡೆಯಲಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೆಪಿಟಿಸಿಎಲ್ ಹುದ್ದೆಗಳಿಗೆ ಕೆಇಎ ಪರೀಕ್ಷೆ ನಡೆಸಲಿದೆ.

Leave A Reply

Your email address will not be published.