ಭಾರತದ ದೇಶೀ ಹಸುಗಳ ಸಗಣಿಗೆ ಈ ದೇಶದಲ್ಲಿ ಭಾರೀ ಡಿಮ್ಯಾಂಡ್ !! | ಬೇಡಿಕೆ ಹೆಚ್ಚಾಗಲು ಕಾರಣ !??

ಭಾರತ ಕೃಷಿ ಪ್ರಧಾನ ದೇಶ. ನಮ್ಮ ದೇಶದಲ್ಲಿ ಕೃಷಿ ವಲಯದಲ್ಲಿ ಪ್ರಾಣಿ ಉತ್ಪನ್ನಗಳ ಯಶಸ್ವಿ ಬಳಕೆ ಸಾವಿರಾರು ವರ್ಷಗಳಿಂದ ನಡೆಯುತ್ತಿದೆ. ಪ್ರಾಣಿಗಳ ಜೊತೆಯಲ್ಲೇ ಭಾರತದ ಕೃಷಿ ಪ್ರಗತಿ ಪಥದತ್ತ ಸಾಗುತ್ತಿದೆ. ಅದರಲ್ಲೂ ನಮ್ಮಲ್ಲಿ ಹಸುವನ್ನು ಗೋಮಾತೆ ಎಂದೇ ಪೂಜಿಸಿ ಸಾಕುತ್ತಾರೆ. ಸಗಣಿ ಗೊಬ್ಬರ ಭಾರತದಲ್ಲಿ ಅನಾದಿ ಕಾಲದಿಂದ ಬಳಕೆಯಲ್ಲಿದ್ದು, ಈಗೀಗ ಸಾವಯವ ಕೃಷಿ ಹೆಸರಿನಲ್ಲಿ ಕೊಟ್ಟಿಗೆ ಗೊಬ್ಬರಕ್ಕೆ ಭಾರೀ ಬೇಡಿಕೆ ಬಂದಿದೆ.

ಪಶು ಉತ್ಪನ್ನಗಳ ರಫ್ತಿನ ವಿಷಯದಲ್ಲಿ ಭಾರತ ಈಗಾಗಲೇ ದೊಡ್ಡ ಕೇಂದ್ರವಾಗಿದೆ. ಈ ನಡುವೆ ಈಗ ಭಾರತ ಮತ್ತೊಂದು ದೊಡ್ಡ ಮೈಲಿಗಲ್ಲನ್ನು ಸಾಧಿಸಿದೆ. ಪ್ರವಾದಿ ಅವಹೇಳನಕಾರಿ ವಿವಾದದ ನಡುವೆಯೂ ಕುವೈತ್‌ಗೆ ಭಾರತದಿಂದ ಭಾರೀ ಪ್ರಮಾಣದ ಹಸುವಿನ ಸಗಣಿ ರಫ್ತಾಗಲಿದೆ. 192 ಮೆಟ್ರಿಕ್ ಟನ್‌ಗಳಷ್ಟು ಬೃಹತ್ ಪ್ರಮಾಣದಲ್ಲಿ ರಫ್ತು ಮಾಡಲಾಗುವುದು ಎಂದು ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಅತುಲ್ ಗುಪ್ತಾ ಮಾಹಿತಿ ನೀಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಗೋವುಗಳ ರಕ್ಷಣೆಗಾಗಿ ನಮ್ಮ ತಂಡ ನಡೆಸಿದ ಅವಿರತ ಪ್ರಯತ್ನಗಳು ಫಲ ನೀಡಿವೆ ಎಂದ ಅವರು, ಜೈಪುರ ಮೂಲದ ಸನ್‌ರೈಸ್ ಅಗ್ರಿಲ್ಯಾಂಡ್ ಮತ್ತು ಡೆವಲಪ್‌ಮೆಂಟ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ರಫ್ತು ಮಾಡಲು ಕುವೈತ್‌ನಿಂದ ಆದೇಶ ಪಡೆದುಕೊಂಡಿದೆ. ಮುಸ್ಲಿಂ ಬಾಹುಳ್ಯದ ಕುವೈತ್‌, ದೇಶಿ ಹಸುಗಳ ಸಗಣಿಯನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವುದು ಬಹುಶಃ ಇದೇ ಮೊದಲು ಎಂದು ಸನ್‌ರೈಸ್ ಅಗ್ರಿಲ್ಯಾಂಡ್ ಮತ್ತು ಡೆವಲಪ್‌ಮೆಂಟ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕ ಪ್ರಶಾಂತ್ ಚತುರ್ವೇದಿ ಹೇಳಿದ್ದಾರೆ.

ಜೈಪುರದ ಟೋಂಕ್ ರಸ್ತೆಯ ಶ್ರೀಪಿಂಜ್ರಾಪೋಲ್ ಗೋಶಾಲೆಯಲ್ಲಿರುವ ಸನ್‌ರೈಸ್ ಆರ್ಗಾನಿಕ್ ಪಾರ್ಕ್‌ನಲ್ಲಿ ಕಸ್ಟಮ್ಸ್ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಂಟೈನರ್‌ಗಳಲ್ಲಿ ಹಸುವಿನ ಸಗಣಿ ಪ್ಯಾಕ್ ಮಾಡುವ ಕೆಲಸ ನಡೆಯುತ್ತಿದೆ. ಜೂನ್ 15 ರಂದು ಕನಕಪುರ ರೈಲು ನಿಲ್ದಾಣದಿಂದ ರವಾನೆಯಾಗಲಿದೆ ಎಂದು ಹೇಳಿದ್ದಾರೆ. ಮೊದಲ ರವಾನೆಯಲ್ಲಿ, 192 ಮೆಟ್ರಿಕ್ ಟನ್ ಹಸುವಿನ ಸಗಣಿ ಕುವೈತ್‌ಗೆ ರಫ್ತು ಮಾಡಲಾಗುವುದು. ಗುಜರಾತ್‌ನ ಮುಂದ್ರಾ ಬಂದರಿನಿಂದ ಕುವೈತ್‌ಗೆ ಸಾಗಿಸಲಾಗುವುದು.

ಇದಲ್ಲದೇ ಸಾವಯವ ಗೊಬ್ಬರದ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ದೇಶೀಯ ಹಸುವಿನ ಸಗಣಿ ಸಂಶೋಧನೆಯ ನಂತರ ಅದರ ಬಳಕೆಯ ಲಾಭಗಳನ್ನು ಅನೇಕ ದೇಶಗಳು ಕಂಡುಕೊಂಡಿವೆ. ಇದು ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಅದರಿಂದ ಉತ್ಪತ್ತಿಯಾಗುವ ಉತ್ಪನ್ನಗಳ ಬಳಕೆಯು ಗಂಭೀರ ಕಾಯಿಲೆಗಳಿಂದ ಮನುಷ್ಯರನ್ನು ರಕ್ಷಿಸುತ್ತದೆ. ಇದೇ ಕಾರಣಕ್ಕೆ ಹಲವು ದೇಶಗಳು ಭಾರತದಿಂದ ಸಾವಯವ ಗೊಬ್ಬರದ ಜೊತೆಗೆ ದೇಶಿ ಗೋಮಯವನ್ನು ಆಮದು ಮಾಡಿಕೊಳ್ಳಲು ಆರಂಭಿಸಿವೆ. 2020-21ರಲ್ಲಿ 27,155.56 ಕೋಟಿ ರುಪಾಯಿ ಬೆಲೆಯ ಪ್ರಾಣಿ ಉತ್ಪನ್ನಗಳ ಭಾರತದಿಂದ ರಫ್ತು ಆಗಿದೆ ಎಂದು ತಿಳಿದುಬಂದಿದೆ.

error: Content is protected !!
Scroll to Top
%d bloggers like this: