ಪಾಕಿಸ್ತಾನದಲ್ಲಿ ಇಂದಿನ ಪೆಟ್ರೋಲ್ ದರ ಎಷ್ಟು ಗೊತ್ತೆ ?
ಭಾರತದಲ್ಲಿ ಪ್ರತಿದಿನ ಪೆಟ್ರೋಲ್ ಡಿಸೇಲ್ ದರ ಹಾವುಏಣಿ ಆಡುತ್ತಲೇ ಇರುತ್ತದೆ. ಹಾಗೇ ಪಾಕಿಸ್ತಾನದಲ್ಲಿ ಪೆಟ್ರೋಲ್ ಡಿಸೇಲ್ ದರ ಎಷ್ಟು ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಆರ್ಥಿಕ ಬಿಕ್ಕಟ್ಟಿನ ನಡುವೆ ಪಾಕಿಸ್ತಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಭಾರೀ ಏರಿಕೆ ಕಂಡಿದೆ. ಕಳೆದ 20 ದಿನದಲ್ಲಿ ಇಂಧನದ ಬೆಲೆಯು ಮೂರು ಬಾರಿ ಹೆಚ್ಚಳವಾಗಿ
ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದ್ದು, ಗುರುವಾರ ಪೆಟ್ರೋಲ್ ಬೆಲೆ ಒಂದು ಲೀಟರ್ಗೆ 24 ರೂಪಾಯಿ ಏರಿಕೆಯಾಗಿದ್ದು, ಈಗ ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 209.86 ರಿಂದ 233.89 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರದಲ್ಲಿ 16.31 ರೂಪಾಯಿ ಏರಿಕೆಯಾಗಿದೆ.
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಯನ್ನು ಇನ್ನು ಮುಂದೆ ಭರಿಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಘೋಷಿಸಿದ್ದಾರೆ, ಆದ್ದರಿಂದ ಪೆಟ್ರೋಲ್ ಬೆಲೆಯನ್ನು 24.03 ಪಿಕೆಆರ್ ನಷ್ಟು ಹೆಚ್ಚಿಸಲು ನಿರ್ಧರಿಸಿದೆ.
ಪಾಕಿಸ್ತಾನದಲ್ಲಿ ಧಾನ್ಯ, ಸಕ್ಕರೆ, ತರಕಾರಿ, ಹಣ್ಣುಗಳ ಬೆಲೆಯು ಗಗನಕ್ಕೆ ಏರುತ್ತಿದೆ. ಇದರಿಂದಾಗಿ ಜನರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಆರ್ಥಿಕ ಬಿಕ್ಕಟ್ಟಿನ ನಡುವೆ ಪಾಕಿಸ್ತಾನವು ಸುಮಾರು 41 ವಸ್ತುಗಳ ಮೇಲೆ ನಿಷೇಧವನ್ನು ಹೇರಿದೆ. ಎರಡು ತಿಂಗಳುಗಳ ಕಾಲ ನಿಷೇಧವನ್ನು ಹೇರಿದೆ. ಹಾಗೆಯೇ ಆಮದು ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.