ಪಿಜ್ಜಾ ಡೆಲಿವರಿ ಯುವತಿಗೆ ಮನಬಂದಂತೆ ಥಳಿಸಿದ ನಾಲ್ವರು ಯುವತಿಯರು..! ವೀಡಿಯೋ ವೈರಲ್

ಪಿಜ್ಜಾ ಡೆಲಿವರಿ ಮಾಡೋ ಮಹಿಳಾ ಉದ್ಯೋಗಿಯನ್ನು ನಾಲ್ವರು ಯುವತಿಯರ ಗುಂಪು ಮಧ್ಯಪ್ರದೇಶದ ಇಂದೋರ್‌ನಲ್ಲಿ ಮನ ಬಂದಂತೆ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ನಾಲ್ವರು ಯುವತಿಯರು ಡೋಮಿನೋಸ್ ಪಿಜ್ಜಾ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.

 

ಮಹಿಳಾ ಉದ್ಯೋಗಿಯು ಈ ನಾಲ್ವರನ್ನು ದಿಟ್ಟಿಸಿ ನೋಡಿದ್ದಾಳೆ ಎಂಬ ಕ್ಷುಲ್ಲಕ ಕಾರಣ ಆರೋಪಿಸಿ ಆಕೆಗೆ ಮನಬಂದಂತೆ ಹೊಡೆದಿದ್ದಾರೆ.

ಘಟನೆ ನಡೆಯುತ್ತಿರುವ ಸ್ಥಳಕ್ಕೆ ಸ್ಥಳೀಯರು ಜಮಾಯಿಸಿದ್ದರೂ, ಆ ಮಹಿಳಾ ಉದ್ಯೋಗಿ ಸಹಾಯಕ್ಕಾಗಿ ಅಂಗಲಾಚಿ ಕಣ್ಣಿರಿಟ್ಟರೂ ಯಾರೊಬ್ಬರು ಸಹಾಯ ಮಾಡಲು ಮುಂದಾಗಲಿಲ್ಲ. ಇದರಿಂದಾಗಿ ಅಲ್ಲೇ ಸಮೀಪವಿರುವ ಮನೆಯೊಂದಕ್ಕೆ ಹೋಗಿ ಅಲ್ಲೇ ಬಚ್ಚಿಟ್ಟುಕೊಂಡು ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ. ಕೊನೆಗೆ ಉದ್ಯೋಗಿಯೇ ತಾನು ಹೋಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ನಾಲ್ವರು ಯುವತಿಯರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Leave A Reply

Your email address will not be published.