ಮಂಗಳೂರು : ವಿಹೆಚ್ ಪಿ – ಬಜರಂಗದಳ ಪ್ರತಿಭಟನೆ : ಸ್ಪಷ್ಟನೆ ನೀಡಿದ ಮಂಗಳೂರು ಪೊಲೀಸ್ ಆಯುಕ್ತ

ಪ್ರವಾದಿಯವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದವರ ವಿರುದ್ಧ ಪ್ರತಿಭಟನೆ ಹೆಸರಿನಲ್ಲಿ ದೇಶದಾದ್ಯಂತ ಹಿಂಸೆ ನಡೆಸಿರುವುದನ್ನು ಖಂಡಿಸಿ ಜೂ.16 ರಂದು ಸಂಜೆ 3.00 ಗಂಟೆಗೆ ಪಿವಿಎಸ್ ವೃತ್ತದ ಬಳಿ ವಿಶ್ವಹಿಂದೂಪರಿಷತ್ – ಭಜರಂಗದಳ ಮಂಗಳೂರು ಇವರ ವತಿಯಿಂದ ಪ್ರತಿಭಟನಾ ಸಭೆ ನಡೆಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಾಪ್ ಗ್ರೂಪ್‌ಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.

 

ಸಾಮಾಜಿಕ ಜಾಲತಾಣಗಳಲ್ಲಿ ಪಿವಿಎಸ್ ವೃತ್ತದ ಬಳಿ ವಿಶ್ವಹಿಂದೂಪರಿಷತ್ – ಭಜರಂಗದಳ ಮಂಗಳೂರು ಇವರ ವತಿಯಿಂದ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸುದ್ದಿಗಳು ಹರಿದಾಡುತ್ತಿದೆ.

ಆದರೆ ಈ ಕುರಿತು ಅಧಿಕೃತವಾಗಿ ಅನುಮತಿ ಕೋರಿಕೆ ಪತ್ರವನ್ನು ಸಲ್ಲಿಸಿರುವುದು ಕಂಡು ಬರುವುದಿಲ್ಲ. ಆದಾಗ್ಯೂ ಸಹ ಹಾಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಭದ್ರತೆಯ ಹಿತದೃಷ್ಟಿಯಿಂದ ಯಾವುದೇ ಪ್ರತಿಭಟನೆಯನ್ನು ಮಾಡಲು ಅನುಮತಿ ನೀಡಿರುವುದಿಲ್ಲವಾಗಿ ಮಾಹಿತಿಯನ್ನು ತಿಳಿಯಪಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Leave A Reply

Your email address will not be published.