KUIDFC : ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಉದ್ಯೋಗ, ಅರ್ಜಿ ಆಹ್ವಾನ

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದಿಂದ ಅನುಷ್ಠಾನಗೊಳ್ಳುತ್ತಿರುವ ‘ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣಾ ಯೋಜನೆ, 9 ಟೌನ್ ಪ್ರಾಜೆಕ್ಟ್ ಗಳಿಗೆ, ಯೋಜನಾ ಅವಧಿಗೆ ಸೀಮಿತಗೊಳಿಸಿ ಅವಶ್ಯಕವಿರುವ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಕಾರ್ಯಕಾರಿ ವ್ಯವಸ್ಥಾಪಕರು ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಹಾಕಿರಿ.

 

ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 15-06-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-06-2022

ಉದ್ಯೋಗ ಸಂಸ್ಥೆ : ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹುದ್ದೆಯ ಹೆಸರು: ಕಾರ್ಯಕಾರಿ ವ್ಯವಸ್ಥಾಪಕರು ಹುದ್ದೆಗಳ ಸಂಖ್ಯೆ: 2

ಈ ಮೇಲಿನ ಹುದ್ದೆಗಳನ್ನು ಹೆಚ್ಆರ್ ಪಾಲಿಸಿಯನ್ವಯ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ವಿವರ, ವಿದ್ಯಾರ್ಹತೆ, ಅನುಭವ, ವೇತನ / ಭತ್ಯೆ, ಗುತ್ತಿಗೆ ನೇಮಕಾತಿ ಷರತ್ತುಗಳು ಹಾಗೂ ಇತರೆ ಎಲ್ಲ ಮಾಹಿತಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಅರ್ಜಿ ನಮೂನೆಗಳು ನಿಗಮದ ಅಧಿಕೃತ ವೆಬ್‌ಸೈಟ್ www.kuidfc.com/careers .

ಅರ್ಜಿಯನ್ನು ದಿನಾಂಕ 15-06-2022 ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ದಿನಾಂಕ 30-06 2022 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ / ಕೊರಿಯರ್ ಮೂಲಕ ಸಲ್ಲಿಸಲು ಅವಕಾಶ ಇರುವುದಿಲ್ಲ.

ವಿದ್ಯಾರ್ಹತೆ, ಅನುಭವ ಹಾಗೂ ಇತರೆ ಸಂಬಂಧಪಟ್ಟ

ದಾಖಲೆಗಳನ್ನು ಅರ್ಜಿ ವೇಳೆ ಅಪ್‌ಲೋಡ್ ಮಾಡಬೇಕು. ಅಪೂರ್ಣ ಅರ್ಜಿಗಳನ್ನು ಹಾಗೂ ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ನೇಮಕಾತಿ ವಿಷಯದಲ್ಲಿ ಸಂಸ್ಥೆಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಆಧಾರ್ ಕಾರ್ಡ್, ಹುದ್ದೆಗೆ ನಿಗಧಿತ ಶೈಕ್ಷಣಿಕ ಅರ್ಹತೆ ದಾಖಲೆ, ಕಾರ್ಯಾನುಭವ

ಆನ್‌ಲೈನ್ ಅರ್ಜಿ ಸಲ್ಲಿಸುವ ವೆಬ್ ವಿಳಾಸ :
www.kuidfc.com/careers

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.