1940ರಲ್ಲೇ ನಿಧನರಾದ ಹೆಡ್ಗೆವಾರ್ 1942ರಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದು ಹೇಗೆ !?? | ಟ್ವೀಟ್ ಮೂಲಕ ಸಾಕ್ಷಿ ಸಮೇತ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಬಿಜೆಪಿ

ಆರ್‌ಎಸ್‌ಎಸ್ ವಿಚಾರವಾಗಿ ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಡುವೆ ಕೆಲದಿನಗಳಿಂದ ತಿಕ್ಕಾಟ ಶುರುವಾಗಿದೆ. ಸಿದ್ದರಾಮಯ್ಯ ಚಡ್ಡಿ ಸುಡುವ ಅಭಿಯಾನ ಆರಂಭಿಸುವುದಾಗಿ ಹೇಳಿದ ಬಳಿಕ ಈ ಕೋಲ್ಡ್ ವಾರ್ ಇನ್ನೂ ಜೋರಾಗಿದೆ. ಈ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಡಿದ ಟ್ವೀಟ್‌ಗೆ ಬಿಜೆಪಿ ಬಲವಾಗಿ ಟಾಂಗ್ ಕೊಟ್ಟಿದೆ.

 

ಹೌದು. ಮಾಜಿ ಸಿಎಂ ಸಿದ್ದರಾಮಯ್ಯ, `1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಹೆಡ್ಗೆವಾರ್, ಗೋಲ್ವಾಲ್ಕರ್ ಅವರು ಬ್ರಿಟಿಷರ ಜೊತೆ ಸೇರಿ ಸಂಚು ರೂಪಿಸಿ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಿದ್ದನ್ನು ಈ ದೇಶದ ಜನ ಮರೆತಿಲ್ಲ’ ಎಂದು ಟ್ವೀಟ್ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ 1940ರಲ್ಲೇ ಹೆಡ್ಗೆವಾರ್ ತೀರಿಕೊಂಡಿದ್ದಾರೆ. ಹೀಗಿರುವಾಗ 1942ರಲ್ಲಿ ಬ್ರಿಟಿಷರಿಗೆ ಸಹಾಯ ಮಾಡಲು ಹೇಗೆ ಸಾಧ್ಯ ಎಂಬುದನ್ನು ದಾಖಲೆಯನ್ನು ಸಾಕ್ಷಿಯಾಗಿರಿಸಿ ಪ್ರಶ್ನಿಸಿದೆ.

#ಶಿಕ್ಷಣವಿರೋಧಿಕಾಂಗ್ರೆಸ್ ಎನ್ನುವ ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಿರುವ ಬಿಜೆಪಿ, ತಿರುಚಿದ ಇತಿಹಾಸದ ಪಠ್ಯ ಪುಸ್ತಕ ಓದಿ, ನಮ್ಮ ನೆಲದ ಇತಿಹಾಸದ ಬಗ್ಗೆ ತಿಳಿಯದೆ, ಇತಿಹಾಸದ ಬಗ್ಗೆ ಸುಳ್ಳನ್ನೇ ಮಾತನಾಡುತ್ತಾ ಬಂದವರಲ್ಲಿ ಸಿದ್ದರಾಮಯ್ಯ ಅವರೂ ಒಬ್ಬರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಾದ ತಪ್ಪುಗಳನ್ನು ನಮ್ಮ ಸರ್ಕಾರ ತಿದ್ದುತ್ತಿದೆ. ಅದಕ್ಕೂ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಕುಟುಕಿದೆ.

ಈ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಬೇರೆ, ಮಹಾತ್ಮ ಗಾಂಧಿ ಬೇರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಮಹಾತ್ಮ ಗಾಂಧಿಯೇ ಹೊರತು, ಈ ನಕಲಿ ಗಾಂಧಿಗಳಲ್ಲ. #ಬುರುಡೆರಾಮಯ್ಯ ಅವರು ಗಾಂಧಿ ಕುಟುಂಬದ ವಂಶ ವೃಕ್ಷದ ಬಗ್ಗೆ ಮೊದಲು ಅರಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದೆ.

Leave A Reply

Your email address will not be published.