ಮಹಿಳೆಯರ ಸ್ನಾನದ ಕೋಣೆಯಲ್ಲಿ “ರಹಸ್ಯ ಕ್ಯಾಮೆರಾ” ಅಳವಡಿಕೆ, ಆರೋಪಿ ಸಿಪಿಎಂ ನಾಯಕ ಅರೆಸ್ಟ್ | ತಾನು ಹೆಣೆದ ಬಲೆಗೆ ತಾನೇ ಬಿದ್ದ ವಿಕೃತ ಕಾಮುಕ

ಮಹಿಳೆಯರ ಅಶ್ಲೀಲ ವೀಡಿಯೋಗಳನ್ನು ಸೆರೆಹಿಡಿಯಲು ಅವರು ಸ್ನಾನ ಮಾಡುವ ಕೊಠಡಿಗಳಿಗೆ ರಹಸ್ಯ ಕ್ಯಾಮೆರಾ ಅಳವಡಿಸಿ, ವೀಡಿಯೋಗಳನ್ನು ನೋಡುತ್ತಿದ್ದ ಕಾಮುಕನೋರ್ವನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

 

ಅಶ್ಲೀಲ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದ ಆರೋಪದಲ್ಲಿ ಮಾಜಿ ಸಿಪಿಎಂ ನಾಯಕ ಶಹಜಹಾನ್ ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಈತ ಕೊಡುಂಬಾ ನಿವಾಸಿಯಾಗಿದ್ದು ಪೊಲೀಸರ ಹುಡುಕಾಟದ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ.

ಮಹಿಳೆಯೊಬ್ಬರು ಬಾತ್‌ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ, ಕಿಟಕಿಯ ಬಳಿ ವ್ಯಕ್ತಿಯೊಬ್ಬನ ನೆರಳು ನೋಡಿ ಕಿರುಚಿಕೊಂಡಿದ್ದರು. ಈ ಘಟನೆ ಇತ್ತೀಚೆಗೆ ನಡೆದಿತ್ತು. ಆದರೆ ಆರೋಪಿ ಶಹಜಹಾನ್ ಅಲ್ಲಿಂದ ಓಡುವಾಗ ಆತನ ಮೊಬೈಲ್ ಹತ್ತಿರದ ಮೈದಾನದಲ್ಲಿ ಬಿದ್ದು ಹೋಗಿತ್ತು. ಆರೋಪಿ ಶಹಜಹಾನ್ ಎಂದು ತಿಳಿಯದ ಮಹಿಳೆ ನೆರೆಮನೆ ನಿವಾಸಿಯಾಗಿದ್ದ ಆತನಲ್ಲೇ ನೆರವು ಕೇಳಲು ಹೋಗಿದ್ದಾಳೆ.

ಆದರೆ ಮೈದಾನದಲ್ಲಿ ಕಳೆದುಹೋದ ಆರೋಪಿಯ ಮೊಬೈಲ್ ಅದೇ ಮಹಿಳೆಗೆ ದೊರಕಿದ್ದು, ಅದರಲ್ಲಿ ಅನೇಕ ಮಹಿಳೆಯರ ಅಶ್ಲೀಲ ವೀಡಿಯೋಗಳನ್ನು ನೋಡಿ ಗಾಬರಿಗೊಂಡ ಮಹಿಳೆ ಇದು ಶಹಜಹಾನಿದ್ದೇ ಕೆಲಸ ಎಂಬುದನ್ನು ತಿಳಿದು, ಮೊಬೈಲ್ ಸಮೇತ ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು.

ವೀಡಿಯೋ ‌ನೋಡಿದ ಪೊಲೀಸರು ತನಿಖೆ ನಡೆಸಿ, ಜಾಮೀನು ರಹಿತ ಕಾಯ್ದೆಯಡಿ ಶಹಜಹಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇತ್ತ ದೂರು ದಾಖಲಾಗುತ್ತಿದ್ದಂತೆ ಆತನ ಬಂಧನಕ್ಕೆ ವಿಶೇಷ ತನಿಖಾ ತಂಡದ ರಚನೆ ಮಾಡಲಾಯಿತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಆರೋಪಿ ರಾಜ್ಯವನ್ನೇ ತೊರೆದು ತಮಿಳುನಾಡಿಗೆ ಪರಾರಿಯಾಗಿದ್ದ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ಕೈಗೆತ್ತಿಗೊಂಡಿದ್ದಾರೆ.

Leave A Reply

Your email address will not be published.