ಪುತ್ತೂರು:ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸುವಾಗ ಕಾಲುಜಾರಿ ಸಾಂಬಾರು ಪಾತ್ರೆಗೆ ಬಿದ್ದ ಮಹಿಳಾ ಸಿಬ್ಬಂದಿ ಸಾವು!!
ಪುತ್ತೂರು:ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿ ಮಹಿಳೆಯೊಬ್ಬರು ಅಡುಗೆ ತಯಾರಿಸುವ ವೇಳೆಯಲ್ಲೇ ಕಾಲುಜಾರಿ ಸಾಂಬಾರು ಪಾತ್ರೆಗೆ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಅಗ್ನೆಸ್ ಪ್ರಮೀಳಾ ಡಿಸೋಜ ಎಂದು ಗುರುತಿಸಲಾಗಿದ್ದು, ಮಹಿಳೆಯು ತಾಲೂಕಿನ ಕಸ್ಬಾ ಗ್ರಾಮದ ಸೈಂಟ್ ವಿಕ್ಟರ್ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿದ್ದರು.
ಎಂದಿನಂತೆ ಮಕ್ಕಳಿಗೆ ಬಿಸಿಯೂಟ ತಯಾರಿಸುವ ವೇಳೆ ಆಗತಾನೆ ಬೆಂಕಿಯಿಂದ ಇಳಿಸಿ ಕೆಳಗಿಟ್ಟಿದ್ದ ಸಾಂಬಾರಿನ ಪಾತ್ರೆಗೆ ಕಾಲು ಜಾರಿ ಬಿದ್ದ ಪರಿಣಾಮ ಗಂಭೀರ ಸುಟ್ಟ ಗಾಯಗಳಾಗಿದ್ದು,ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಮಹಿಳೆ ಮೃತಪಟ್ಟಿದ್ದು,ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.