ಆಸ್ಪತ್ರೆಗೆ ದಾಖಲಾದ ಜಾಕ್ ಮಂಜು ; ಆರೋಗ್ಯದ ಅಪ್ಡೇಟ್ ನೀಡಿದ ಕಿಚ್ಚ

Share the Article

ಸ್ಯಾಂಡಲ್ ವುಡ್‌ನ ಖ್ಯಾತ ನಿರ್ಮಾಪಕ, ಕಿಚ್ಚ ಸುದೀಪ್ ಆಪ್ತ ಜಾಕ್ ಮಂಜು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯೇ ಜಾಕ್ ಮಂಜು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾರ್ಯಕ್ರಮವೊಂದಕ್ಕೆ ಹೋಗಿದ್ದ ನಿರ್ಮಾಪಕ ಜಾಕ್ ಮಂಜು ಎಡವಿ ಬಿದ್ದು ಕಾಲು ಮುರಿದುಕೊಂಡ ಹಿನ್ನಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬನ್ನೇರುಘಟ್ಟ ಬಳಿ ಇರೋ ಅಪೋಲೋ ಆಸ್ಪತ್ರೆಯಲ್ಲಿ ಜಾಕ್ ಮಂಜು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜಾಕ್ ಮಂಜು ಕಳೆದ ಕೆಲವು ದಿನಗಳಿಂದ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದರು. ದೇಶದಾದ್ಯಂತ ಸಂಚರಿಸುತ್ತಿದ್ದರು. ಆದರೀಗ ದಿಢೀರ್ ಆಸ್ಪತ್ರೆ ದಾಖಲಾದ ವಿಚಾರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. 

ಇದೀಗ ಕಿಚ್ಚ ಸುದೀಪ್ ಗೆಳೆಯ ಜಾಕ್ ಮಂಜು ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಾಕ್ ಮಂಜು ಆರೋಗ್ಯದ ಅಪ್ ಡೇಟ್ ನೀಡಿರುವ ಸುದೀಪ್, ‘ನನ್ನ ಆತ್ಮೀಯ ಗೆಳೆಯ ಮತ್ತು ಸಹೋದರ ಜಾಕ್ ಮಂಜು ಆರೋಗ್ಯವಾಗಿದ್ದಾರೆ. ಇಂದು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗುತ್ತಿದ್ದಾರೆ. ಮುನ್ನೆಚ್ಚರಿಕೆ ಆಧಾರದ ಮೇಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸಮಸ್ಯೆ ಏನು ಇಲ್ಲ. ಜಾಕ್ ಮಂಜು ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಕೆಲವು ಫೋಟೋಗಳು ಗಂಭೀರ ಆಗಿದೆ ಎನ್ನುವ ಹಾಗಿದೆ. ನಿಮ್ಮೆಲ್ಲರ ಪ್ರಾರ್ಥನೆಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ. 

Leave A Reply

Your email address will not be published.