ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ತರಬೇತಿ ಕೇಂದ್ರದಿಂದ ಉಚಿತ ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ತರಬೇತಿ ಕೇಂದ್ರ ಮಾಲೂರಿನಲ್ಲಿ ಕೌಶಲ್ಯ ಕರ್ನಾಟಕ ಯೋಜನೆಯಡಿ ವಾಹನ ಚಾಲನಾ ತರಬೇತಿ ಮತ್ತು ತಾಂತ್ರಿಕ ತರಬೇತಿ ನೀಡಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಲತಾ ಟಿ.ಎಸ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕೋಲಾರದ ಮಾಲೂರಿನ ಕೆ ಎಸ್ ಆರ್ ಟಿ ಸಿಯ ಕೇಂದ್ರೀಯ ತರಬೇತಿ ಕೇಂದ್ರದಲ್ಲಿ ಕೌಶಲ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಉಚಿತ ಭಾರಿ, ಲಘು ವಾಹನ ಚಾಲನಾ ತರಬೇತಿ ಮತ್ತು ತಾಂತ್ರಿಕ ತರಬೇತಿ ನೀಡಲಾಗುತ್ತದೆ.
30 ದಿನಗಳ ಈ ತರಬೇರಿಯಲ್ಲಿ ವಸತಿ ಸೌಕರ್ಯ ಹಾಗೂ ಊಟದ ವ್ಯವಸ್ಥೆ ಕೂಡ ಇರಲಿದೆ. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ಕುರಿತು ಇಲ್ಲಿದೆ ಮಾಹಿತಿ.
*ಎಸ್ ಎಸ್ ಎಲ್ ಸಿ ಉತ್ತೀರ್ಣ, ಅನುತ್ತೀರ್ಣ ಹೊಂದಿರುವ ಅಂಕಪಟ್ಟಿ
*ಲಘು ವಾಹನ ತರಬೇತಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ಮೀರಿರಬಾರದು
*ನಾಲ್ಕು ಪಾಸ್ ಪೋರ್ಟ್ ಅಳತೆಯ ಪೋಟೋಗಳು
*ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
*ಆಧಾರ್ ಕಾರ್ಡ್
*ಭಾರಿ ವಾಹನ ತರಬೇತಿಗೆ ಅರ್ಜಿ ಸಲ್ಲಿಸೋರು, ಲಘು ವಾಹನ ಚಾಲನಾ ಪರವಾನಿಗೆಯನ್ನು ಪಡೆದು ಕನಿಷ್ಠ ಒಂದು ವರ್ಷ ಪೂರೈಸಿರಬೇಕು
*ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸುವವರ ವಯೋಮಿತಿ ಕನಿಷ್ಠ 21, ಗರಿಷ್ಠ 35 ಮೀರಿರಬಾರದು
ತಾಂತ್ರಿಕ ತರಬೇತಿ:
ಟೈರ್ ಫಿಟ್ಟರ್, ಆಟೋ ಮೆಕಾನಿಕ್, ವೆಲ್ಡರ್ ತರಬೇತಿ ನೀಡಲಾಗುತ್ತದೆ. ತಾಂತ್ರಿಕ ತರಬೇತಿಯ ಅವಧಿ 90 ದಿನಗಳಾಗಿವೆ. ಈ ತರಬೇತಿಗೆ ಅರ್ಜಿ ಸಲ್ಲಿಸಲು ಎಸ್ ಎಸ್ ಎಲ್ ಸಿ ಪಾಸ್ ಇಲ್ಲವೇ, ಫೇಲ್ ಆಗಿದ್ದವರು ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸುವುದು. ನಾಲ್ಕು ಪಾಸ್ ಪೋರ್ಟ್ ಅಳತೆಯ ಪೋಟೋಗಳನ್ನು ಕಳುಹಿಸುವುದು.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ದೂರುವಾಣಿ ಸಂಖ್ಯೆ 7760990133, 7760992539ಗೆ ಕರೆ ಮಾಡಿ ಪಡೆಯಬಹುದು. ಇಲ್ಲವೇ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕೇಂದ್ರೀಯ ತರಬೇತಿ ಕೇಂದ್ರ, ಕೋಲಾರ ಮುಖ್ಯ ರಸ್ತೆ, ಬಸ್ ಡಿಪೋ ಹತ್ತಿರ, ಮಾಲೂರು -563130 ಇಲ್ಲಿಗೆ ಕಳುಹಿಸಿ ಕೊಡುವಂತೆ ತಿಳಿಸಲಾಗಿದೆ.