ಗ್ಯಾಂಗ್ ರೇಪ್ ಆರೋಪಿಗಳಿಗೆ ಬಿರಿಯಾನಿ ಊಟ ! ಕಾಂಡೋಮ್ ಬಳಸಿದವರಿಗೆ ಫೈಸ್ಟಾರ್ ಟ್ರೀಟ್ಮೆಂಟ್
ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಗ್ಯಾಂಗ್ರೇಪ್ ಮಾಡಿ ಸಿಕ್ಕಿಬಿದ್ದು ಜೈಲು ಪಾಲಾಗಿರುವ ವಿಐಪಿ ಮಕ್ಕಳಿಗೆ ಫೈವ್ಸ್ಟಾರ್ ಹೋಟೆಲ್ನ ಬಿರಿಯಾನಿ ನೀಡಲಾಗುತ್ತಿದೆಯಂತೆ! ಜೂಬಿಲಿ ಹಿಲ್ಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿ ರಾಜಕಾರಣಿಗಳ ಪುತ್ರರಿಗೆ ಪೊಲೀಸ್ ಕಸ್ಟಡಿಯಲ್ಲಿ ಬಿರಿಯಾನಿ ನೀಡಿರುವ ಸುದ್ದಿ ಆಕ್ರೋಶಕ್ಕೆ ಕಾರಣವಾಗಿದೆ
ಹೈದರಾಬಾದ್ನ ಜೂಬಿಲಿ ಹಿಲ್ಸ್ ಗ್ಯಾಂಗ್ರೇಪ್ ಎಂದೇ ಕರೆಯಲ್ಪಡುವ ಈ ಪ್ರಕರಣದಲ್ಲಿ 17 ವರ್ಷದ ಬಾಲಕಿಯ ಮೇಲೆ ಆಲ್ ಇಂಡಿಯಾ ಮಜ್ಲಿಸ್-ಎ- ಇತ್ತೇಹಾದುಲ್ ಮುಸ್ಲೀಮೀನ್ (AIMIM) ಪಕ್ಷದ ಮುಖಂಡನ ಅಪ್ರಾಪ್ತ ಪುತ್ರ, ಟಿಆರ್ಎಸ್, ಅದರ ಮಿತ್ರಪಕ್ಷ ಎಂಐಎಂ ಪ್ರಮುಖ ನಾಯಕರ ಮಕ್ಕಳನ್ನು ಅರೆಸ್ಟ್ ಮಾಡಲಾಗಿದೆ. ಈ ಎಲ್ಲಾ ಆರೋಪಿಗಳು ಕಾಂಡೋಮ್ ಖರೀದಿ ಮಾಡಿ ಅಲ್ಲಿಗೆ ತಂದಿದ್ದರು. ಅತ್ಯಾಚಾರಕ್ಕೂ ಮುನ್ನ ಅದನ್ನು ಬಳಸಿದ್ದರು ಎನ್ನಲಾಗಿದೆ. ಘಟನೆಯಿಂದ ಬಾಲಕಿ ಆಘಾತಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಾಮೂಹಿಕ ಅತ್ಯಾಚಾರಕ್ಕೆ ಬಳಸಿದ ಎರಡು ಕಾರುಗಳ ಮಧ್ಯದಿಂದ ಸಹಾಯಕರು ಬಿರಿಯಾನಿ ಪೊಟ್ಟಣಗಳನ್ನು ಹೊತ್ತೊಯ್ಯುತ್ತಿರುವ ದೃಶ್ಯಗಳು ವೈರಲ್ ಆಗಿದೆ. ಆರೋಪಿಗಳಿಗೆ ಬಿರಿಯಾನಿ ಕೊಂಡೊಯ್ಯುತ್ತಿರುವ ಫೋಟೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಸ್ಪಷ್ಟನೆ ನೀಡಿದ್ದು, ಅದು ಆರೋಪಿಗಳಿಗೆ ಅಲ್ಲ, ಬದಲಿಗೆ ಪೊಲೀಸ್ ಸಿಬ್ಬಂದಿಗೆ ಎಂದಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಓರ್ವ ಪೊಲೀಸ್ ಅಧಿಕಾರಿ ವಿಭಿನ್ನ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಆರೋಪಿಗಳಿಗೆ ಮಾಮೂಲಿ ಊಟ ಬೇಡ ಎಂಬ ಕಾರಣಕ್ಕೆ ಬಿರಿಯಾನಿ ತರಬೇಕಾಯಿತು, ಆರೋಪಿಗಳ ಆರೋಗ್ಯ ಕಾಪಾಡುವುದು ಪೊಲೀಸರ ಜವಾಬ್ದಾರಿ, ಬಿರಿಯಾನಿ ಹಾಕುವುದು ರಾಜಾತಿಥ್ಯ ಅಲ್ಲ ಎಂದಿದ್ದಾರೆ!