ಮದುವೆಯಾಗಲು ರೆಡಿಯಾದ ಮಾತಿನ ಮಲ್ಲಿ, ನಮ್ಮ ಕುಡ್ಲದ ಪೊಣ್ಣು…ಆ್ಯಂಕರ್ ಅನುಶ್ರೀ | ಹುಡುಗ ಯಾರು ಗೊತ್ತೇ ?

ಸ್ಯಾಂಡಲ್ ವುಡ್ ಖ್ಯಾತ ನಿರೂಪಕಿ, ನಟಿ, ಮಾತಿನ ಮಲ್ಲಿ ಅನುಶ್ರೀ ತಮ್ಮ ನಿರೂಪಣೆಯಿಂದಲೇ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಹರಳು ಹುರಿದಂತೆ ಮಾತನಾಡುವ ಮಾತಿನ ಮಲ್ಲಿ ಮದುವೆಯಾಗುವ ಆಸೆಯಾಗಿದೆಯಂತೆ. ಹೌದು, ಅನುಶ್ರೀ ಮದುವೆಯಾಗಲು ರೆಡಿಯಾಗಿದ್ದಾರಂತೆ.

 

ತನಗೆ ಮದುವೆಯಾಗುವ ಆಸೆಯಾಗಿದೆ ಎಂದು ಸ್ವತಃ ಅನುಶ್ರೀಯೇ ಹೇಳಿಕೊಂಡಿದ್ದಾರೆ. ಟಿವಿ ವಾಹಿನಿಯ ಶೋವೊಂದರಲ್ಲಿ ಪಾಲ್ಗೊಂಡಿದ್ದ ಅನುಶ್ರೀ ಈ ವಾಹಿನಿಯಲ್ಲಿ ಜೋಡಿಗಳ ರಿಯಾಲಿಟಿ ಶೋ ನಡೆಯುತ್ತಿದೆ. ಈ ಜೋಡಿಗಳ ಪ್ರೀತಿ, ಬಾಂಧವ್ಯ ನೋಡಿ ತನಗೂ ಮದುವೆಯಾಗಬೇಕು ಎಂಬ ಆಸೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಈ ಹಿಂದೆ ಕೂಡಾ ಅನುಶ್ರೀ ಮದುವೆಯ ಬಗ್ಗೆ ಪುಕಾರು ಹಬ್ಬಿತ್ತು. ಒಂದು ಬಾರಿ ಮದುವೆಯ ಫೋಟೋಗಳೇ ವೈರಲ್ ಆಗಿದ್ದವು. ನಂತರ ಗೊತ್ತಾಯ್ತು ಅದು ಸಿನಿಮಾ ಒಂದರ ಶೂಟಿಂಗ್ ನ ಚಿತ್ರಗಳೆಂದು. ಆ ನಂತರ ಹಾಸ್ಯ ನಟ ಚಿಕ್ಕಣ್ಣ ನ ಜತೆ ದೊಡ್ಡ ಬಾಯಿಯ ಈ ನಟಿಯ ಮದುವೆ ಆಗ್ತಿದೆ ಅಂತ ದೊಡ್ಡದಾಗಿಯೇ ಸುದ್ದಿ ಹಬ್ಬಿತ್ತು. ಇದೀಗ ಮೂರನೆಯ ಬಾರಿ ಮ್ಯಾರೇಜ್ ಮ್ಯಾಟರ್ ಬರ್ತಿದೆ.

ಅನುಶ್ರೀ ಅನೇಕ ಜನಪ್ರಿಯ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಸರಿಗಮಪ ಶೋ ಅನುಶ್ರೀಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ಬಳಿಕ ಬೇಡಿಕೆ ಹೆಚ್ಚಿಸಿಕೊಂಡ ಅನುಶ್ರೀ ಯಾವುದೇ ರಿಯಾಲಿಟಿ ಶೋ, ಸಿನಿಮಾ ಈವೆಂಟ್ ಎಲ್ಲಾ ಕಡೆ ಅನುಶ್ರೀನೇ ನಿರೂಪಕಿಯಾಗಬೇಕೆಂದು ಅಭಿಮಾನಿಗಳು ಬಯಸುತ್ತಾರೆ. ನಿರೂಪಣೆ ಜೊತೆಗೆ ಅನುಶ್ರೀ ಸಿನಿಮಾದಲ್ಲೂ ನಟಿಸಿದ್ದಾರೆ. ಆದರೆ ಸಿನಿಮಾದಲ್ಲಿ ಅನುಶ್ರೀಗೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ಬಿಗ್ ಬಾಸ್ ಶೋನಲ್ಲೂ ಅನುಶ್ರೀ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಜೋಡಿ ನಂ.1ರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.   

ಮದುವೆಯಾಗಲು ಮನಸ್ಸು ಮಾಡಿರುವ ಅನುಶ್ರೀಗೆ ಹುಡುಗ ಸಿಕ್ಕಿದ್ದಾನಾ, ಇಲ್ಲ ರಿಯಾಲಿಟಿ ಶೋದಲ್ಲಿ ಸುಮ್ಮನೆ ಮದುವೆ ಕುರಿತು ಮಾತನಾಡಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆ ಅನುಶ್ರೀ ಮದುವೆಯನ್ನು ಹಲವಾರು ಜನ ಎದುರು ನೋಡುತ್ತಿದ್ದಾರೆ. ಎಲಿಜಿಬಲ್ ಬ್ಯಾಚಲರ್ ಗಳು ಅರ್ಜಿ ಸಮೇತ ನಿಂತಿದ್ದರೆ, ಉಳಿದವರು ಕನ್ನಡದ ಮಾತಿನ ಮಲ್ಲಿಯ ಮದುವೆಯಾಗುವ ಹುಡುಗ ಹೇಗಿರಬಹುದು ಎಂಬ ಕೂತೂಹಲದಿಂದ ಇದ್ದಾರೆ.

ಅನುಶ್ರೀ ಈಗ ಚಿಕ್ಕ ಹುಡುಗಿಯಾಗಿ ಉಳಿದಿಲ್ಲ. ಹದಿನಾರರ ಹುಡುಗಿಯ ಉತ್ಸಾಹ ಆಕೆಯಲ್ಲಿ ಇನ್ನೂ ಮುಂದುವರೆದಿದ್ದರೂ, ಪ್ರಾಯ ಎಲ್ಲರಂತೆ ಏರುತ್ತಲೇ ಇದೆ. ಆಕೆಗೆ ಮೊನ್ನೆ ಜನವರಿ 24 ಕ್ಕೆ ಭರ್ತಿ 33 ತುಂಬಿ ನಿಂತಿದೆ. ಈಗ 34 ರ ಹರೆಯ ಅವಳದ್ದು. ವಯಸ್ಸಿನ ಜತೆ ದೇಹ ತೂಕವೂ ಕೂಡಾ ತುಂಬಿಕೊಳ್ಳುತ್ತಿದೆ. ಇದು ಕೊಂಚ ಲೇಟ್ ನೇ ; ಆದ್ರೂ ಪರ್ವಾಗಿಲ್ಲ. ಇದು ಸೂಕ್ತ ಕಾಲ ಮದುವೆ ಆಗಲು.

ಆಕೆಯ ಮುಂದೆ ಅರ್ಜಿ ಹಾಕದೆ, ಮೌನವಾಗಿ ಆಕೆಯನ್ನು ಇಷ್ಟಪಡುವ ಜನ ಕರ್ನಾಟಕ ಮಾತ್ರವಲ್ಲದೆ ಹೊರಗೂ ಇದ್ದಾರೆ. ಆಕೆಗೆ ಕಾಲ ಕೂಡಿಬರಬೇಕು-ಅವರಿಗೆ ಅದೃಷ್ಟ ಒಲಿದುಬರಬೇಕು. ಅಲ್ಲಿಯ ತನಕ ಮದುವೆ ಕುರಿತ ಎಲ್ಲಾ ಸುದ್ದಿಗಳನ್ನು ಟೆಕ್ನಿಕಲ್ ಪರಿಭಾಷೆಯಲ್ಲಿ ಹೇಳೋದು ಏನಂದ್ರೆ – ಗಾಸಿಪ್ !!

Leave A Reply

Your email address will not be published.