ಸ್ವಯಂ ವಿವಾಹ ಅಥವಾ ಸೊಲೊಗಮಿ ಎಂದರೇನು? ಈ ವಿಚಿತ್ರ ಕಲ್ಪನೆ ಹುಟ್ಟಿದ್ದಾದರೂ ಎಲ್ಲಿ? ಯಾವಾಗ?
ತನ್ನನ್ನು ತಾನೇ ಮದುವೆಯಾಗುವುದು. ಇದು ಭಾರತದಲ್ಲಿ ಇಂದಿನ ಬೆಳವಣಿಗೆ ಆದರೆ, ವಿದೇಶದಲ್ಲಿ ಇಂತಹ ಪರಿಕಲ್ಪನೆಯೂ ಇದೆ. ಇಂತಹ ಮದುವೆಯನ್ನು ಇಂಗ್ಲಿಷ್‌ನಲ್ಲಿ ‘ಸೊಲೊಗಾಮಿ’ ಅಂತಲೂ ಕರೆಯುತ್ತಾರೆ.
ಈ ಸ್ವಯಂ ವಿವಾಹ ಕಲ್ಪನೆ ಇಂದು ನಿನ್ನೆಯದಲ್ಲ. 1993ರಲ್ಲಿಯೇ ಅಮೆರಿಕದಲ್ಲಿ ಈ ರೀತಿಯ ವಿವಾಹವಾಗಿರುವುದರ ಬಗ್ಗೆ ವರದಿಯಿದೆ. ಅಮೆರಿಕದ ದಂತ ನೈರ್ಮಲ್ಯ ತಜ್ಞೆ ಲಿಂಡಾ ಬೇಕರ್ ತಮ್ಮನ್ನು ತಾವೇ ಮದುವೆಯಾದ ಮೊದಲನೇ ಮಹಿಳೆ ಎಂದು ಗುರುತಿಸಲಾಗಿದೆ.
ಸ್ವಯಂ ವಿವಾಹಕ್ಕೆ ಯಾವುದೇ ರೀತಿಯ ನಿಯಮಗಳು, ಕಟ್ಟುಪಾಡುಗಳು ಇಲ್ಲ. ವಧು-ವರರು ಭಾಗವಹಿಸುವ ಸಾಂಪ್ರದಾಯಿಕ ವಿವಾಹ ಸಮಾರಂಭದಂತೆ ಈ ಕಾರ್ಯಕ್ರಮವೂ ಇರುತ್ತದೆ.
ಲೇಖಕಿ ಸಾಶಾ ಕ್ಯಾಗೆನ್ ಅವರು ತಮ್ಮ ಪುಸ್ತಕ ‘ಕ್ವಿರ್ಕ್ಯಾಲೋನ್’ನಲ್ಲಿ, “ಸ್ವಯಂ ವಿವಾಹದ ಬಗ್ಗೆ ನಾನು ಕೇಳುವ ಹೆಚ್ಚಿನ ಕಥೆಗಳಲ್ಲಿ ಕಂಡುಬರುವ ಸಾಮಾನ್ಯ ವಿಷಯವೆಂದರೆ ಬೇರೊಬ್ಬರನ್ನು ಮದುವೆಯಾಗುವ ಮೊದಲು ನಿಮ್ಮನ್ನು ನೀವು ಮೊದಲು ಮದುವೆಯಾಗಿ ಎಂದು ಅವರು ಹೇಳುತ್ತಾರೆ” ಎಂದು ಬರೆದಿದ್ದಾರೆ.
ಈ ಸ್ವಯಂ ವಿವಾಹ ಪರಿಕಲ್ಪನೆಯು ಸೆಕ್ಸ್ ಅಂಡ್ ದಿ ಸಿಟಿ, ಗ್ಲೀ ಮತ್ತು ಡಾಕ್ಟರ್ ಹೂ ರೀತಿಯ ಮುಂತಾದ ಜನಪ್ರಿಯ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದೆ. ಸೆಕ್ಸ್ ಅಂಡ್ ದಿ ಸಿಟಿಯ 2003ರ ಸಂಚಿಕೆಯಲ್ಲಿ, ಕ್ಯಾರಿ ಬ್ರಾಡ್‌ಶಾ ಅವರ ವಿವಾಹವನ್ನು ಸ್ವತಃ ವೀಕ್ಷಕರಿಗೆ ತೋರಿಸಲಾಗಿದೆ.
ಗುಜರಾತಿನ ವಡೋದರಾದ 24 ವರ್ಷದ ಹುಡುಗಿ ಕ್ಷಮಾ ಬಿಂದು ತನ್ನನ್ನು ತಾನೇ ವಿವಾಹವಾಗಲುಸಿದ್ಧಳಾಗಿದ್ದಾಳೆ. ಸದ್ಯ ಇಡೀ ದೇಶದಲ್ಲಿ ಈ ವಿಚಿತ್ರ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ಯಾಕಂದ್ರೆ, ಹೀಗೆ ತನ್ನನ್ನು ತಾನೇ ಮದುವೆಯಾಗುತ್ತಿರುವುದು ಇದೇ ಭಾರತದಲ್ಲಿ ಇದೇ ಮೊದಲು.
ಕ್ಷಮಾ ಬಿಂದು ಅವರನ್ನು ವೆಬ್ ಸಿರೀಸ್ ಒಂದರ ಹೇಳಿಕೆಯೇ ಸ್ವಯಂ ವಿವಾಹಕ್ಕೆ ಪ್ರೇರೆಪಿಸಿದೆ. ನಟಿಯೊಬ್ಬರು ವೆಬ್ ಸಿರೀಸ್‌ವೊಂದರಲ್ಲಿ ಪ್ರತಿಯೊಬ್ಬ ಮಹಿಳೆ ವಧುವಾಗಲು ಬಯಸುತ್ತಾಳೆ.