ಮಂಗಳೂರು | ಆಲ್ಬಮ್ ಸಾಂಗ್ ನೆಪದಲ್ಲಿ ಹಿಂದೂ ಯುವತಿಯರಿಗೆ ಗಾಳ ?!| ರಿಜ್ಜು ಪುತ್ತೂರು ಎಂಬಾತನ ಬಗ್ಗೆ ಹಬ್ಬಿದೆ ಗುಮಾನಿ !

ಇದೀಗ ಹೊಸದೊಂದು ಮಾದರಿಯ ಲವ್ ಜಿಹಾದ್ ಬಲೆ ತಯಾರಾಗಿದೆಯಂತೆ. ಕಲೆ, ನೃತ್ಯ, ಸಂಗೀತ ಸಿನಿಮಾ ಹೀಗೆ ಹಲವು ಕಲಾ ಪ್ರಕಾರಗಳಲ್ಲಿ ಆಸಕ್ತಿ ಇರುವ ಹಿಂದೂ ಹುಡುಗಿಯರ ಮನ ಕಲಕಿ, ಲವ್ ಜಿಹಾದ್ ಗೆ ಎಳೆಯಲಾಗುತ್ತದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಇಂತಹಾ ಜೇಡರ ಬಲೆಗೆ ಹಿಂದೂ ಹುಡುಗಿಯರು ಬಲಿಯಾಗಿ ಬೀಳುತ್ತಿದ್ದಾರೆ ಎಂದು ದೂರು ಕೇಳಿಬಂದಿದೆ. ಅದರಲ್ಲಿ ಪುತ್ತೂರಿನ ರಿಜ್ಜು ಎಂಬಾತನ ಹೆಸರು ಜೋರಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಮನೆಯಲ್ಲಿ ಮೈಮರೆತು ಮಣ್ಣು ತಿನ್ನುತ್ತಾ ಕೂತಿರುವ ಹಿಂದೂ ಹೆಣ್ಣು ಮಕ್ಕಳ ಪೋಷಕರು ಎಚ್ಚೆತ್ತುಕೊಳ್ಳಲು ಸೋಷಿಯಲ್ ಮೀಡಿಯಾದಲ್ಲಿ ಕೋರಲಾಗಿದೆ.

 

” ತನ್ನ ಸಮುದಾಯದ ಹೆಣ್ಣು ಮಕ್ಕಳನ್ನು ಮುಸಲ್ಮಾನರು ರೀತಿ ನಿಯಮವೆಂದುದ ಬೆದರಿಸಿ ಬುರ್ಕಾ ಹಾಗು ಹಿಜಾಬಿನ ಒಳಗಡೆ ಬಂಧಿಸಿ ಇಡುತ್ತಾರೆ. ಅದೇ ಮುಸಲ್ಮಾನರ ಪತ್ವದಲ್ಲಿ ಸಂಗೀತ ಹಾಗು ನಟನೆ ಇಲ್ಲದಿದ್ದರೂ ಮುಸಲ್ಮಾನ ಹುಡುಗರು ಆಲ್ಬಮ್ ಸಾಂಗ್, ಶಾರ್ಟ್ ಪಿಲ್ಮ್ ಎನ್ನುತ್ತಾ ಉಪಯೋಗಿಸಿಕೊಳ್ಳುವುದು ಹಿಂದೂ ಹುಡುಗಿಯರನ್ನು. ಪತಂಗದ ತಹರ ಬೆಂಕಿಯ ಸಹವಾಸ ಬೇಡ ಬೇಡ ಎಂದರೂ ಹಾರಿ ಹೋಗಿ ಬೂದಿ ಆಗುವ ಇಂತಹ ನೀತಿಕೆಟ್ಟ ಹೆಣ್ಣು ಮಕ್ಕಳೇ ಹಿಂದೂ ಧರ್ಮಕ್ಕೆ ದೊಡ್ಡ ಅಪಾಯ. ಇಂತವರಿಂದಲೇ ಲವ್ ಜಿಹಾದ್ ಚಿಗುರೊಡೆವುತ್ತಿರುವುದು. “ಎನ್ನುವ ಅರ್ಥದ ಸುದ್ದಿಯೊಂದು ಕಳೆದ ಒಂದು ವಾರದಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಲ್ಲಿಯವರೆಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೊಡು ಭಾಗದಲ್ಲಿ ಒಬ್ಬಳೇ ಒಬ್ಬಳು ಮುಸಲ್ಮಾನ ಹುಡುಗಿ ಹಿಂದೂ ಹುಡುಗನ ಜೊತೆ ಆಲ್ಬಮ್ ಸಾಂಗ್ ಮಾಡಿದ್ದನ್ನು ನೊಡಿದ್ದೀರ…?! ಎಚ್ಚೆತ್ತು ಕೋ ಹಿಂದೂ, ಬದುಕಿಸಿಕೊ ನೀ ಪ್ರೀತಿಸುವ ಮಗಳನ್ನು ಎನ್ನುವ ಆಂತರ್ಯದ ಮೆಸ್ಸುಜುಗಳು ಹರಿದಾಡ್ತಿದೆ.

“ತಮ್ಮ ಸಮುದಾಯದ ಯುವತಿಯರನ್ನು ಬುರ್ಖಾದೊಳಗೆ ಬಂಧಿಸಿ, ಹಿಂದೂ ಯುವತಿಯರನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವುದು ಎಷ್ಟು ಸರಿ? ಆಲ್ಬಮ್ ಸಾಂಗ್ ಎನ್ನುತ್ತಾ ಮುಸ್ಲಿಂ ಯುವಕರು ನೀಡುವ ಸಣ್ಣ ಅವಕಾಶಕ್ಕೆ ತಲೆ ಕೊಡುವ ಹಿಂದೂ ಯುವತಿಯರಷ್ಟು ಮತಿಗೆಟ್ಟವರು ಬೇರೆ ಯಾರೂ ಇಲ್ಲ. ಅದು ಅವಕಾಶ ಅಲ್ಲ, ಬೋನು!”

” ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಒಂದೇ ಒಂದು ಆಲ್ಬಮ್ ಸಾಂಗ್ ನಲ್ಲಿ ಮುಸ್ಲಿಂ ಯುವತಿಯರು ಕಾಣಸಿಗುತ್ತಿಲ್ಲ. ಆದರೆ ಹಿಂದೂ ಯುವತಿಯರು ಮಾತ್ರ ಮುಸ್ಲಿಂ ಯುವಕರೊಂದಿಗೆ ಬಣ್ಣ ಹಚ್ಚಲು ಮುಂದೆ ಬರುತ್ತಿದ್ದಾರೆ ಎನ್ನುವ ಆಕ್ರೋಶದ ನುಡಿಗಳು ಬರಹದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅವುಗಳಲ್ಲಿ ರಿಜ್ಜೂ ಪುತ್ತೂರು ಎಂಬವನು ಹಿಂದೂ ಹುಡುಗಿಯರನ್ನು ಆಲ್ಬಂ ಶಾರ್ಟ್ ಫಿಲ್ಮ್ ಹೆಸರಿನಲ್ಲಿ ದಾರಿ ತಪ್ಪಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹಲವು ದಂಗಲ್ ಗಳ ಮಧ್ಯೆ ಇಂತಹ ಸ್ವಾಸ್ಥ್ಯ ಕೆದಕುವ ಇಂತಹ ಸಂಗತಿಗಳು ಸೃಷ್ಟಿ ಆಗುತ್ತಿರುವುದು ವಿಪರ್ಯಾಸ.

Leave A Reply

Your email address will not be published.