ಯಶ್ ಮುಂದಿನ ಚಿತ್ರಕ್ಕೆ ಕರಾವಳಿ ಹುಡುಗಿ

ಭಾರತೀಯ ಚಿತ್ರರಂಗದಲ್ಲಿಯೇ ಈಗಿನ ಮಟ್ಟಿಗೆ ಸದ್ದು ಮಾಡುತ್ತಿರುವ ಸೂಪರ್ ಸ್ಟಾರ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಅನ್ನಬಹುದು. ಈಗ `ಕೆಜಿಎಫ್ 2′ ಭರ್ಜರಿ ಹಿಟ್ ಆದ ಮೇಲೆ ಎಲ್ಲರ ದೃಷ್ಟಿ ಯಶ್ ಮುಂದಿನ ಚಿತ್ರದ ಮೇಲೆ ಕೂತಿದೆ. ರಾಕಿಭಾಯ್ ನೆಕ್ಸ್ಟ್‌ ಸಿನಿಮಾ ಯಾವುದು, ಅದರ ಸ್ಟೋರಿ ಎಂತಾದ್ದು, ಅವರ ಮುಂದಿನ ಸಿನಿಮಾಗೆ ನಾಯಕಿ ಯಾರು ಎಂಬ ನಿರಂತರ ಪ್ರಶ್ನೆಗಳು ಸಿನಿ ಪ್ರಿಯರಲ್ಲಿ ಕಾಡುತ್ತಿವೆ.

 

ಕೆಜಿಎಫ್ 2′ ಸಕ್ಸಸ್ ನಂತರ ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಯಶ್ . ಇದು ಯಶಸ್ಸಿನ ಉತ್ತುಂಗದ ಸ್ಥಿತಿ . ಅದೇ ಕಾರಣಕ್ಕೆ ಪಾತ್ರಗಳ ಆಯ್ಕೆಯಲ್ಲಿ ಚೂಸಿ ಆಗಿದ್ದಾರೆ ರಾಕೀ ಭಾಯ್ . ಇದೀಗ,ಮಪ್ತಿ’ ನಿರ್ದೇಶಕ ನರ್ತನ್ ಮತ್ತು ಯಶ್ ಕಾಂಬಿನೇಷನ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬರೋದಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ, ಸದ್ಯದಲ್ಲೇ ಈ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ ಎನ್ನುವುದು ಕೇವಲ ಗುಮಾನಿ ಅಲ್ಲ. ಕೆವಿಎನ್ ಚಿತ್ರ ನಿರ್ಮಾಣ ಸಂಸ್ಥೆ ಕೈ ಜೋಡಿಸಿದೆ. ಇದರ ಬೆನ್ನಲ್ಲೆ ರಾಕಿಂಗ್ ಸ್ಟಾರ್ ಯಶ್‌ಗೆ ನಾಯಕಿ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರೋದ್ರಿಂದ ದಕ್ಷಿಣದ ಸ್ಟಾರ್ ನಾಯಕಿಯನ್ನೇ ಆಯ್ಕೆ ಮಾಡಿದ್ದಾರೆ. ಕರಾವಳಿ ಮೂಲದ ನಟಿ ದಕ್ಷಿಣ ಭಾರತದ ಸುಂದರಿ ಪೂಜಾ ಹೆಗ್ಡೆ ಯಶ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸತತ ಸೋಲಿನ ಸುಳಿಯಲ್ಲಿ ಸಿಲುಕಿರುವ ಈ ನಟಿಯ ಅದೃಷ್ಟ ಇನ್ನಾದರೂ ಬದ್ಲಾಗತ್ತಾ ಅಂತ ನೋಡಬೇಕು.

ನಟಿ ಪೂಜಾ ಹೆಗ್ಡೆ, ಕರಾವಳಿಯ ಮೂಲದವಳು, ಆದರೂ ಬೆಳೆದಿದ್ದೆಲ್ಲಾ ಮುಂಬೈನಲ್ಲಿ. ಸದ್ಯ ಸೋತ ಸಿನಿಮಾ ಕೊಡುತ್ತಿದ್ದರೂ ಬಾಲಿವುಡ್‌ನಲ್ಲಿ ತಕ್ಕ ಮಟ್ಟಿಗೆ ಬ್ಯುಸಿಯಿರೋ ನಟಿ. ಇಲ್ಲಿತನಕ ಒಂದೇ ಒಂದು ಕನ್ನಡ ಸಿನಿಮಾದಲ್ಲೂ ನಟಿಸಿಲ್ಲ. ಇದೀಗ ಆ ಕಾಲ ಕೂಡಿ ಬಂದಿದ್ದು, ಯಶ್‌ಗೆ ನಾಯಕಿಯಾಗುವ ಮೂಲಕ ಪೂಜಾ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡ್ತಿದ್ದಾಳಂತೆ. ಕರಾವಳಿ ಬೆಡಗಿ ಪೂಜಾ ನಿಜವಾಗಲೂ ಯಶ್ ಜೋಡಿಯಾಗಿ ಕನ್ನಡಕ್ಕೆ ಬರ್ತಾಳಾ ? ಯಶ್ ಜೊತೆ ಪೂಜಾ ಅದೃಷ್ಟ ಕೂಡಾ ಖುಲಾಯಿಸ್ತದಾ ಎನ್ನುವುದಕ್ಕೆ ಮೊದಲು ಶೂಟಿಂಗ್ ಸ್ಟಾರ್ಟ್ ಆಗಬೇಕು, ಆಗ ಒಂದೊಂದೇ ಮ್ಯಾಟರ್ ಹೊರಗೆ ಬರಲು ಪ್ರಾರಂಭ ಆಗ್ತದೆ, ಅಲ್ಲೀತನಕ ಅಭಿಮಾನಿಗಳು ಕಾಯ್ಬೇಕಾಗಿದೆ.

Leave A Reply

Your email address will not be published.