ಎಣ್ಣೆಯಲ್ಲಿ “ಉಗುಳು”ತ್ತಿದ್ದ ಮುಸ್ಲಿಂ ಪಾಪ್ ಕಾರ್ನ್ ಮಾರಾಟಗಾರ | ರೆಡ್ ಹ್ಯಾಂಡ್ ಆಗಿ ಹಿಡಿದ ಸಾರ್ವಜನಿಕರು ! ಅಸಹ್ಯ ವರ್ತನೆಗೆ ಆಕ್ರೋಶಗೊಂಡ ಜನ!

ಬೀದಿ ಬದಿಯಲ್ಲಿ ಪಾಪ್ ಕಾರ್ನ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವ ಅಡುಗೆ ಎಣ್ಣೆಗೆ ಉಗುಳುತ್ತಿದ್ದ ವ್ಯಕ್ತಿಯೋರ್ವನನ್ನು ನೋಡಿ ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

 

ಅಡುಗೆ ಎಣ್ಣೆಯಲ್ಲಿ ಉಗುಳುತ್ತಿದ್ದ 21 ವರ್ಷದ ಪಾಪ್ ಕಾರ್ನ್ ಮಾರಾಟಾಗರ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.

ಸೋಮೇಶ್ವರನಗರದ ನಿವಾಸಿ ನಯಾಜ್ ಪಾಷಾ ಬಂಧಿತ ಆರೋಪಿಯಾಗಿದ್ದಾನೆ. ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ಪಾಪ್ ಕಾರ್ನ್ ಮಾರಾಟ ಮಾಡುತ್ತಿದ್ದ.

ನಿನ್ನೆ ಬೆಳಿಗ್ಗೆ 9.30ರ ಸುಮಾರಿಗೆ ಪಾಪ್ ಕಾರ್ನ್ ಹುರಿಯುವಾಗ ಅಡುಗೆ ಎಣ್ಣೆಯಲ್ಲಿ ಆತ ಉಗುಳುತ್ತಿದ್ದುದ್ದನ್ನು ಸ್ಥಳದಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ನೋಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದಾಗ ಆತ ಕೂಡಲೇ ಕ್ಷಮೆಯಾಚಿಸಿದ್ದಾನೆ. ಇದರಿಂದ ಕೋಪಗೊಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಅಂಗಡಿಯನ್ನು ಬಂದ್ ಮಾಡಿಸಿ, ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳೀಯರು ಲಿಖಿತ ದೂರು ನೀಡದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಇದೀಗ ವ್ಯಕ್ತಿಯನ್ನು ವಿರುದ್ಧ ಐಪಿಸಿ ಸೆಕ್ಷನ್ 269ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.