ನೆಲ್ಯಾಡಿ: ಪೆರಿಯಶಾಂತಿ ಬಳಿಯಲ್ಲಿ ವಾಹನದ ಮೇಲೆ ಮುರಿದು ಬಿದ್ದ ಮರ!! | ಕೆಲ ಕಾಲ ಸಂಚಾರ ಅಸ್ತವ್ಯಸ್ತ-ಪ್ರಯಾಣಿಕರು ಅಪಾಯದಿಂದ ಪಾರು
ನೆಲ್ಯಾಡಿ:ಮಂಗಳೂರು ಬೆಂಗಳೂರು ರಾಷ್ಟೀಯ ಹೆದ್ದಾರಿಯ ಪೆರಿಯಶಾಂತಿ ಎಂಬಲ್ಲಿ ಚಲಿಸುತ್ತಿದ್ದ ಪ್ರವಾಸಾರ್ಥಿಗಳ ವಾಹನವೊಂದರ ಮೇಲೆ ಮರ ಬಿದ್ದು ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಜೂನ್ 12ರ ಮಧ್ಯಾಹ್ನ ಸಂಭವಿಸಿದೆ.
ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಬದಿಯ ಬೃಹತ್ ಆಕಾರದ ಮರಗಳು ಧರೆಗೆ ಉರುಳುತ್ತಿರುವುದು ಪ್ರಯಾಣಿಕರಿಗೆ ಸಂಚರಿಸಲು ಕಂಟಕವಾಗಿ ಪರಿಣಮಿಸಿದೆ.
ಈ ಘಟನೆ ನಡೆಯುವ ಕೆಲ ಹೊತ್ತಿನ ಮುಂಚೆ ಸುಬ್ರಹ್ಮಣ್ಯ ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಮೇಲೂ ಬೃಹತ್ ಆಕಾರದ ಮರ ಬಿದ್ದಿದ್ದು,ಒಟ್ಟಿನಲ್ಲಿ ಈ ಪ್ರದೇಶದ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಮರ ಮುರಿದು ಬೀಳುವ ಭೀತಿಯಿಂದಲೇ ಸಂಚರಿಸಬೇಕಾಗಿದೆ.ಕೂಡಲೇ ಇತ್ತ ಸಂಬಂಧಪಟ್ಟ ಇಲಾಖೆ ಗಮನಹರಿಸದೇ ಇದ್ದಲ್ಲಿ ಪ್ರಾಣಹಾನಿ ಸಂಭವಿಸುವುದು ಖಚಿತ ಎನ್ನುತ್ತಾರೆ ಸ್ಥಳೀಯರು.