ಇನ್ನು ಮುಂದೆ ನಿಮ್ಮ ಮನೆ ಬಾಗಿಲಿಗೇ ಬರಲಿದೆ ‘ಆಧಾರ್ ಕಾರ್ಡ್’ ಸೇವೆ : ಇಲ್ಲಿದೆ ಸಂಪೂರ್ಣ ವಿವರ !

ಜನರಿಗೆ ಇನ್ನು ಮುಂದೆ ಮನೆ ಬಾಗಿಲಿಗೆ ಆಧಾರ್ ಕಾರ್ಡ್ ಸೇವೆ ಒದಗಿಸುವ ಕೆಲಸವೊಂದು ಸಜ್ಜಾಗುತ್ತಿದೆ. ನಿಮ್ಮ ಫೋನ್ ಸಂಖ್ಯೆಯನ್ನು ಆಧಾರ್ ಗೆ ಲಿಂಕ್ ಮಾಡುವುದು, ಇತರ ಮಾಹಿತಿಯನ್ನು ನವೀಕರಿಸುವುದು ಇತ್ಯಾದಿಗಳಂತಹ ಆಧಾರ್ ಸಂಬಂಧಿತ ಸೇವೆಗಳನ್ನು ಶೀಘ್ರದಲ್ಲೇ ನಿಮ್ಮ ಮನೆಯ ಸೌಕರ್ಯದಲ್ಲಿ ಮಾಡಬಹುದು.

 

ಅಂದರೆ ನೀವು ಈ ಸೇವೆಗಳನ್ನು ಪಡೆಯಲು ನೀವು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಅಗತ್ಯವಿರುವುದಿಲ್ಲ.

ಈಗಾಗಲೇ ಈ ಬಗ್ಗೆ ಯುಐಡಿಎಐ ಪ್ರಸ್ತುತ 48,000 ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಪೋಸ್ಟ್ ಮ್ಯಾನ್ ಗಳಿಗೆ ಇದರ ಬಗ್ಗೆ ತರಬೇತಿ ನೀಡುತ್ತಿದೆ. ತರಬೇತಿಯ ನಂತರ, ಆಧಾರ್ ಸೇವೆಗಳನ್ನು ನೀವು ಮನೆಯಲ್ಲಿಯೇ ಸರಿ ಪಡಿಸಿಕೊಳ್ಳೋ ವ್ಯವಸ್ಥೆಯನ್ನು ಜಾರಿಗೆ ತರೋ ವ್ಯವಸ್ಥೆ ಮಾಡಲಿದೆ.

ಅಂಚೆ ಅಧಿಕಾರಿಗಳಿಗೆ, 2 ಹಂತಗಳಲ್ಲಿ ತರಬೇತಿ ನೀಡಲಾಗುವುದು. ದೇಶಾದ್ಯಂತ ಹೆಚ್ಚಿನ ಜನರನ್ನು ತಲುಪಲು ಮತ್ತು ಯುಐಡಿಎಐನ ವಿಸ್ತರಣಾ ಯೋಜನೆಯ ಭಾಗವಾಗಿರುವ ಆಧಾರ್ ಕಾರ್ಯಕ್ರಮದಲ್ಲಿ ನೋಂದಾಯಿಸಲು ಪೋಸ್ಟ್ ಮ್ಯಾನ್ ಗಳಿಗೆ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಆಧಾರಿತ ಆಧಾರ್ ಕಿಟ್ ಸೇರಿದಂತೆ ಸೂಕ್ತ ಡಿಜಿಟಲ್ ಸಾಧನಗಳೊಂದಿಗೆ ಪೋಸ್ಟ್ ಮ್ಯಾನ್ ಗಳನ್ನು ಸಜ್ಜುಗೊಳಿಸುತ್ತದೆ. ಇದರಿಂದ ಅವರು ಆಧಾರ್ ಕಾರ್ಡ್ ಹೊಂದಿರುವವರ ಮಾಹಿತಿಯನ್ನು ನವೀಕರಿಸಬಹುದು ಅಥವಾ ಆಧಾರ್ ಸಂಖ್ಯೆ ವಿತರಣೆಗಾಗಿ ಮಕ್ಕಳನ್ನು ನೋಂದಾಯಿಸಬಹುದು.

ಯುಐಡಿಎಐ ದೇಶದ 755 ಜಿಲ್ಲೆಗಳಲ್ಲಿ ಆಧಾರ್ ಸೇವಾ ಕೇಂದ್ರವನ್ನು ರಚಿಸಲು ಯೋಜಿಸಿದೆ, ಇದರಿಂದ ಎಲ್ಲಾ ಮಾಹಿತಿಯನ್ನು ಸಾಧ್ಯವಾದಷ್ಟು ಬೇಗ ನವೀಕರಿಸಬಹುದು.

Leave A Reply

Your email address will not be published.