ಪಿ.ಎಸ್.ಐ. ಹುದ್ದೆ ನೇಮಕಾತಿ ಅಕ್ರಮ: 8 ಜನರ ಜಾಮೀನು ಅರ್ಜಿ ತಿರಸ್ಕೃತ

ಕಲಬುರ್ಗಿ: ಪಿಎಸ್‌ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಅರೋಪಿಗಳಾದ ದಿವ್ಯಾ ಹಾಗರಗಿ ಸೇರಿದಂತೆ 8 ಜನರ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

 

ಪ್ರಕರಣದಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್ ಸೇರಿದಂತೆ ಹಲವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಈ ನಡುವೆ ಪ್ರಕರಣದ ಕಿಂಗ್ ಪಿನ್ ರುದ್ರೇಗೌಡ ಪಾಟೀಲ್ ಆಪ್ತರಾಗಿರುವ ಅಸ್ಲಂ ಮುಜಾವರ್ ಹಾಗೂ ಮುನಾಫ್ ಜಮಾದಾರ್ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ದ್ದಾರೆ.

ದಿವ್ಯಾ ಹಾಗರಗಿ ಹಾಗೂ ಮಹಾಂತೇಶ್ ಪಾಟೀಲ್ ಸೇರಿದಂತೆ 8 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕಲಬುರ್ಗಿ 1ನೇ ಹೆಚ್ಚುವರಿ ಸೆಷನ್ ನ್ಯಾಯಾ ಲಯ ಜಾಮೀನು ತಿರಸ್ಕರಿಸಿ ಆದೇಶ ಹೊರಡಿಸಿದೆ.

Leave A Reply

Your email address will not be published.