ಸಂದರ್ಶನಕ್ಕೆಂದು ಬಂದ ಕಾಲೇಜು ಹುಡುಗಿ, ಬಾಸ್ ನ ಪಟಾಯಿಸಿದ್ಲು!

ಕೆಲಸಕ್ಕೆಂದು ಹೋದ ಯುವತಿ ಅಲ್ಲಿನ ಬಾಸ್ ನ್ನು ಪ್ರೀತಿ ಮಾಡಿದ ಕಥೆ ಇದು. 25 ವರ್ಷದ ವಿದ್ಯಾರ್ಥಿಯೊಬ್ಬಳು ಅರೆಕಾಲಿಕ ಉದ್ಯೋಗದ ಸಂದರ್ಶನಕ್ಕಾಗಿ ಹೋಟೆಲ್ ಹೋದಾಗ ಈ ಲವ್ವಿ ಡವ್ವಿ ನಡೆದಿದೆ. ಸಂದರ್ಶನ ಮಾಡಲು 55 ವರ್ಷ ವಯಸ್ಸಿನ ಹೋಟೆಲ್ ನ ಜನರಲ್ ಮ್ಯಾನೇಜರ್ ಬಂದಿದ್ದರು. ಆದರೆ, ಸಂದರ್ಶನ ಮಾಡಲು ಬಂದಿದ್ದ ಬಾಸ್ ನ ಮೇಲೆಯೇ ಆಕೆಗೆ ಪ್ರೇಮಾಂಕುರವಾಗಿತ್ತು. ಈಗ ಈ ಸಂಬಂದಕ್ಕೆ ಮೂರು ವರ್ಷವಾಗಿದ್ದು, ಪರಸ್ಪರ ಪ್ರೀತಿಯಲ್ಲಿದ್ದಾರೆ.

25 ವರ್ಷ ವಯಸ್ಸಿನ ಸುಜಾನಾ ಡಯಾಜ್ ಅಮೆರಿಕದ ಜಾಕ್ಸನ್ ಲೇಕ್ ನಿವಾಸಿಯಾಗಿದ್ದು, 2018 ರಲ್ಲಿ ಅರೆಕಾಲಿಕ ಉದ್ಯೋಗ ಮಾಡಬೇಕೆಂದು ಕೆಲಸ ಹುಡುಕುತ್ತಿದ್ದಳು. ಕಾಲೇಜಿನಲ್ಲಿ ಓದುತ್ತಿದ್ದ ಈಕೆ, ತಮ್ಮ ಖರ್ಚಿನ ಹಣವನ್ನು ವ್ಯವಸ್ಥೆ ಮಾಡಿಕೊಳ್ಳಲು ಅರೆಕಾಲಿಕ ಕೆಲಸದ ಹುಡುಕಾಟದಲ್ಲಿದ್ದಳು. ಈ ವೇಳೆ ಸ್ಥಳೀಯ ಹೋಟೆಲ್ ನಲ್ಲಿ ಪಾರ್ಟ್ ಟೈಮ್ ಜಾಬ್ ಇರುವ ಬಗ್ಗೆ ಆಕೆಗೆ ಮಾಹಿತಿ ಸಿಕ್ಕಿತ್ತು.

ಸೀದಾ ರೆಸ್ಟೋರೆಂಟ್ ಗೆ ಹೋಗಿದ್ದ ಸುಜನಾ ಡಯಾಜ್, ಅಲ್ಲಿಯೇ ಇದ್ದ ಪಕ್ಕದ ಬೂತ್ ನಲ್ಲಿ ಕೆಲಸದ ಅರ್ಜಿಗಳನ್ನು ಭರ್ತಿ ಮಾಡುತ್ತಿದ್ದಾಗ, ಈ ವೇಳೆ ಆಕೆಯ ಭುಜವನ್ನು ತಟ್ಟಿ ಯಾರೋ ಕರೆದಂತಾಗಿತ್ತು. ಹಿಂತಿರುಗಿ ನೋಡಿದರೆ, ರೆಸ್ಟೋರೆಂಟ್ ನ ಜನರಲ್ ಮ್ಯಾನೇಜರ್ ಟೋನಿ ಕಹಾನೆಕ್ ಇದ್ದರು. ಸ್ವತಃ ಟೋನಿ ಕಹಾನೆಕ್ ಅವರೇ ಸುಜನಾ ಡಯಾಜ್ ಅವರ ಸಂದರ್ಶನ ಮಾಡುವವರಾಗಿದ್ದರು.

ಸಂದರ್ಶನದ ವೇಳೆ, ಇಬ್ಬರಿಗೂ ಕೆಲ ವಿಚಾರಗಳಲ್ಲಿ ಸಾಮ್ಯತೆಗಳನ್ನು ಇರುವ ಬಗ್ಗೆ ಸಂಬಂಧ ಇರುವ ಬಗ್ಗೆ ಅರ್ಥ ಮಾಡಿಕೊಂಡಿದ್ದರು. ಈ ವೇಳೆಗಾಗಲೇ ಟೋನಿ ಕಹಾನೆಕ್ ಅವರ ಮಾತಿನ ಮೋಡಿಗೆ ಸುಜನಾ ಡಯಾಜ್ ಬಿದ್ದಿದ್ದರು. ರೋಗಿ ಬಯಸಿದ್ದೂ ಹಾಲು, ವೈದ್ಯ ಹೇಳಿದ್ದೂ ಹಾಲು ಎನ್ನುವಂತೆ ಇದೇ ಸಂದರ್ಭದಲ್ಲಿ ಟೋನಿ ಕಹಾನೆಕ್, ಸುಜನಾ ಡಯಾಜ್ ಬಳಿ ಫೋನ್ ನಂಬರ್ ಕೇಳಿದ್ದರು. ಸಂದರ್ಶನ ಮುಗಿಸಿ ಮನೆಗೆ ತೆರಳಿದ್ದ ಸುಜನಾಗೆ ಮರುದಿನ ಟೋನಿಯಿಂದ ಸಂದೇಶ ಬಂದಿತ್ತು. ಕೆಲ ದಿನಗಳ ಕಾಲ ಫೋನ್ ನಲ್ಲಿಯೇ ಮಾತುಕತೆ ನಡೆಸಿದ ಈ ಜೋಡಿ, ಕೊನೆಗೆ ಒಂದು ದಿನ ಡಿನ್ನರ್ ಪ್ಲಾನ್ ಮಾಡಿದ್ದರು.

ಆರಂಭದಲ್ಲಿ ಸುಜನಾ ಹಾಗೂ ಟೋನಿ ಇಬ್ಬರೂ ತಮ್ಮ ಸಂಬಂಧವನ್ನು ರಹಸ್ಯವಾಗಿ ಇಟ್ಟಿದ್ದರು. ಏಕೆಂದರೆ, ಟೋನಿ ಕಹಾನೆಕ್ ನನ್ನು ಮದುವೆಯಾಗಬೇಕಾದರೆ ಈ ಬಗ್ಗೆ ಪೋಷಕರಿಗೆ ತಿಳಿಸಬೇಕಿತ್ತು. ತನಗಿಂತ ದುಪ್ಪಟ್ಟು ವಯಸ್ಸಿನ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದರೆ ಮನೆಯಲ್ಲಿ ಒಪ್ಪಿಕೊಳ್ಳುವುದು ಅನುಮಾನ ಎನ್ನುವ ಆತಂಕ ಸುಜನಾಗೆ ಇತ್ತು. ಅದರಂತೆ, ಮೊದಲಿಗೆ ಪೋಷಕರು ಕೂಡ ಆರಂಭದಲ್ಲಿ ಇದನ್ನು ನಂಬಿರಲಿಲ್ಲ. ಆದರೆ, ಮಗಳು ಟೋನಿಯ ಜೊತೆ ಸಂತಸವಾಗಿರುವುದನ್ನು ನೋಡಿದ ಬಳಿಕ, ಟೋನಿ ಕಹಾನೆಕ್ ಅವರನ್ನು ತಮ್ಮ ಕುಟುಂಬದ ಸದಸ್ಯನನ್ನಾಗಿ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದರು. ಇನ್ನೊಂದೆಡೆ ಟೋನಿ ಕಹಾನೆಕ್ ಅವರ ತಾಯಿ ಕೂಡ ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದರು.

ಹಾಗಿದ್ದರೂ, ಟೋನಿ ಹಾಗೂ ಸುಜನಾ ಅವರ ಕೆಲ ಆಪ್ತ ಸ್ನೇಹಿತರು ಈ ಸಂಬಂಧದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಆದರೆ, ಸುಜನಾ ಮಾತ್ರ, ತಮ್ಮದೇ ವಯಸ್ಸಿನ ಸಂಗಾತಿಯೊಂದಿಗೆ ಬದುಕುವುದಕ್ಕಿಂತ, ಪ್ರಬುದ್ಧ ವ್ಯಕ್ತಿಯೊಂದಿಗೆ ಸಂಬಂಧ ಹೊಂದುವುದು ಉತ್ತಮ. ಅವರೊಂದಿಗೆ ಬಾಳ್ವೆ ಸುಲಭ ಎಂದು
ನಂಬಿರುವುದಾಗಿ ಹೇಳಿದ್ದಾಳೆ. ಈಗಾಗಲೇ ಇವರಿಬ್ಬರ ಸಂಬಂದಕ್ಕೆ ಮೂರು ವರ್ಷಗಳಾಗಿವೆ. ಇಬ್ಬರು ಈಗಲೂ ಕೂಡಾ ಸಂಬಂಧದಲ್ಲಿ ಖುಷಿಯಾಗಿ‌ ಇದ್ದಾರೆಂಬ ಮಾಹಿತಿ ಇದೆ.

Leave A Reply

Your email address will not be published.