ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ | ಕಳೆದ ಬಾರಿಗಿಂತಲೂ ಹೆಚ್ಚು ‘ಡಿಎ’ ಪಡೆಯುವ ಸಾಧ್ಯತೆ!

ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಹಿಂದೆಂದಿಗಿಂತಲೂ ಪಡೆಯದಷ್ಟು ಹೆಚ್ಚಿನ ತುಟ್ಟಿಭತ್ಯೆಯನ್ನು ಪಡೆಯಲಿದ್ದು, ಜುಲೈ 1 ರಿಂದಲೇ ಸರ್ಕಾರವು ತುಟ್ಟಿಭತ್ಯೆ ಹೆಚ್ಚಿಸುವ ಸಾಧ್ಯತೆಗಳಿದೆ.

 

ಸಹಜವಾಗಿ ಕೇಂದ್ರ ಸರ್ಕಾರಿ ನೌಕರರ ಡಿಎಯನ್ನು ಶೇ.3 ಅಥವಾ ಶೇ.4 ರಷ್ಟು ಹೆಚ್ಚಿಸಲಾಗುತ್ತದೆ. ಕೇಂದ್ರ ಸರ್ಕಾರವು ವರ್ಷಕ್ಕೆ 2 ಬಾರಿ DA ಯನ್ನು ಹೆಚ್ಚಿಸುತ್ತದೆ. ಪ್ರತಿ ವರ್ಷ ಜನವರಿಯಲ್ಲಿ ಮತ್ತು ಜುಲೈನಲ್ಲಿ ಎರಡು ಬಾರಿ ಡಿಎ ಹೆಚ್ಚಳ ಮಾಡಲಾಗುತ್ತದೆ. ಈ ವರ್ಷ ಜುಲೈನಲ್ಲಿ ಡಿಎ ಏರಿಕೆಯಾಗಲಿದ್ದು, ಕಳೆದ ಬಾರಿಗಿಂತ ಹೆಚ್ಚು ಡಿಎ ಪಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಶೇ.5ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

ವಾಸ್ತವವಾಗಿ, DA ಹೆಚ್ಚಳವು AICPIಯ ಡೇಟಾವನ್ನು ಅವಲಂಬಿಸಿರುತ್ತದೆ. ಹೀಗಾಗಿ ಈ ಡೇಟಾ ಉದ್ಯೋಗಿಗಳ ಡಿಎ ಹೆಚ್ಚಳವನ್ನು ನಿರ್ಧರಿಸುತ್ತದೆ. ಮಾರ್ಚ್ 2022ರಲ್ಲಿ ಎಐಸಿಪಿಐ ಸೂಚ್ಯಂಕದಲ್ಲಿ ಜಿಗಿತ ಕಂಡುಬಂದಿದೆ. ಅದರ ನಂತರ ಸರ್ಕಾರವು ತುಟ್ಟಿಭತ್ಯೆ ಅನ್ನು ಶೇಕಡಾ 5ರಷ್ಟು ಹೆಚ್ಚಿಸಬಹುದು, ಆದರೆ 3 ಅಲ್ಲ. ಇದಕ್ಕೆ ಅನುಮೋದನೆ ದೊರೆತರೆ ಉದ್ಯೋಗಿಗಳ ಡಿಎ ಶೇ.34ರಿಂದ ಶೇ.39ಕ್ಕೆ ಏರಿಕೆಯಾಗಲಿದೆ. ಇದೇ ವೇಳೆ ಕೇಂದ್ರ ನೌಕರರ ವೇತನ 27 ಸಾವಿರಕ್ಕೂ ಹೆಚ್ಚು ಹೆಚ್ಚಾಗಬಹುದು. ಇತ್ತೀಚಿನ AICPI ದತ್ತಾಂಶವನ್ನು ಆಧರಿಸಿ, ಉದ್ಯೋಗಿಗಳಿಗೆ DA ಈ ಬಾರಿ 5% ರಷ್ಟು ಹೆಚ್ಚಾಗುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ.

AICPI ಅಂಕಿ-ಅಂಶಗಳನ್ನು ಗಮನಿಸಿದರೆ, ಜನವರಿಯಲ್ಲಿ 125.1 ಅಂಕಗಳಿಷ್ಟಿತ್ತು. ಫೆಬ್ರವರಿಯಲ್ಲಿ 125 ಅಂಕಗಳು, ಮಾರ್ಚ್ ನಲ್ಲಿ 126 ಅಂಕಗಳು ಮತ್ತು ಏಪ್ರಿಲ್ ನಲ್ಲಿ 127.7 ಅಂಕಗಳಿತ್ತು. ಹಣದುಬ್ಬರದಿಂದಾಗಿ ಎಐಸಿಪಿಐ ಅಂಕಿಅಂಶಗಳು ಹೆಚ್ಚುತ್ತಿವೆ. ಇದರ ಪರಿಣಾಮವಾಗಿ ಉದ್ಯೋಗಿಗಳು ಹೆಚ್ಚುವರಿ DA ಪಡೆಯುವ ಸಾಧ್ಯತೆಗಳಿವೆ.

ಸರಕಾರ ಶೇ.5ರಷ್ಟು ಡಿಎ ಹೆಚ್ಚಿಸಿದ್ರೆ ಕೇಂದ್ರ ನೌಕರರ ಡಿಎ ಶೇ.34ರಿಂದ ಶೇ.39ಕ್ಕೆ ಏರಿಕೆಯಾಗಲಿದೆ. ಈಗ ಗರಿಷ್ಠ ಮತ್ತು ಕನಿಷ್ಠ ಮೂಲ ವೇತನದಲ್ಲಿ ಎಷ್ಟು ಹೆಚ್ಚಳವಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಗರಿಷ್ಠ ಮೂಲ ವೇತನದ ಲೆಕ್ಕಾಚಾರ

  1. ನೌಕರನ ಮೂಲ ವೇತನ ರೂ 56,900
  2. ಹೊಸ ತುಟ್ಟಿಭತ್ಯೆ (39%) ರೂ 22,191/ತಿಂಗಳು
  3. ಇದುವರೆಗಿನ ತುಟ್ಟಿಭತ್ಯೆ (34%) ರೂ 19,346/ತಿಂಗಳು
  4. ಎಷ್ಟು ತುಟ್ಟಿ ಭತ್ಯೆ 21,622 ಹೆಚ್ಚಾಗಿದೆ- 19,346 = ರೂ 2,845/ತಿಂಗಳು
  5. ವಾರ್ಷಿಕ ವೇತನದಲ್ಲಿ ಹೆಚ್ಚಳ 2,845X12 = ರೂ 34,140

ಕನಿಷ್ಠ ಮೂಲ ವೇತನದ ಲೆಕ್ಕಾಚಾರ:

  1. ಉದ್ಯೋಗಿಯ ಮೂಲ ವೇತನ ರೂ 18,000
  2. ಹೊಸ ತುಟ್ಟಿಭತ್ಯೆ (39%) ರೂ 7,020/ತಿಂಗಳು
  3. ಇದುವರೆಗಿನ ತುಟ್ಟಿಭತ್ಯೆ (34%) ರೂ 6120/ತಿಂಗಳು
  4. ಎಷ್ಟು ತುಟ್ಟಿ ಭತ್ಯೆ ಹೆಚ್ಚಾಗಿದೆ 7020-6120 = ರೂ 900/ತಿಂಗಳು
  5. ವಾರ್ಷಿಕ ವೇತನದಲ್ಲಿ ಹೆಚ್ಚಳ 900 X12 = ರೂ 10,800

Leave A Reply

Your email address will not be published.