ತೃಷೆ ತೀರಿಸಿಕೊಳ್ಳಲು ಕೊಳದ ಬಳಿ ಬಂದ ಮರಿಯಾನೆಯ ಮೇಲೆರಗಿದ ಮೊಸಳೆ !! | ಮುಂದೇನಾಯ್ತು !??

ಕಾಡು ಪ್ರಾಣಿಗಳ ನಡುವೆ ಆಗಾಗ್ಗೆ ಕಾದಾಟಗಳು ನಡೆಯುತ್ತಿರುತ್ತವೆ. ಅಂತಹ ಘನಘೋರ ಯುದ್ಧದ ವೀಡಿಯೋಗಳು ಭಯಾನಕವಾಗಿರುವುದು ಸತ್ಯ. ಅಂತೆಯೇ ಅವುಗಳ ನಡುವೆ ಸ್ನೇಹದ ದೃಶ್ಯಗಳು ಕೂಡ ಕೆಲವೊಮ್ಮೆ ವೈರಲ್ ಆಗುತ್ತದೆ. ಕಾಡುಪ್ರಾಣಿಗಳ ಪ್ರತಿಯೊಂದು ಕ್ರಿಯೆಯೂ ಕೂಡಾ ನೋಡುಗರಿಗೆ ಖುಷಿ ನೀಡುತ್ತದೆ.

ಇದೀಗ ಇಂಥದ್ದೇ ವೀಡಿಯೋವೊಂದು ಹೊರಬಿದ್ದಿದೆ. ಇದರಲ್ಲಿ ಕಾಡಿನ ಕೊಳದಲ್ಲಿ ನೀರು ಕುಡಿಯಲು ಬಂದಿರುವ ಆನೆಗಳ ಗುಂಪನ್ನು ಕಾಣಬಹುದು. ಒಟ್ಟಾಗಿ ಬಂದು ಆನೆಗಳು ತಮ್ಮ ಪಾಡಿಗೆ ನೀರು ಕುಡಿಯುತ್ತಾ ಇರುತ್ತವೆ. ಅಷ್ಟರಲ್ಲಿ ನೀರಿನಲ್ಲಿ ಅವಿತುಕೊಂಡಿದ್ದ ಮೊಸಳೆ ಅಲ್ಲಿ ಪ್ರತ್ಯಕ್ಷವಾಗಿ ಬಿಡುತ್ತದೆ. ತನ್ನ ಬಾಯಾರಿಕೆ ನೀಗಿಸುತ್ತಿದ್ದ ಮರಿಯಾನೆಯೊಂದರ ಸೊಂಡಿಲಿಗೆ ಮೊಸಳೆ ಬಾಯಿ ಹಾಕಿ ಬಿಡುತ್ತದೆ.

ಆನೆಯೊಂದಿಗೆ ಕಾಳಗಕ್ಕಿಳಿದ ಮೊಸಳೆ :

ತನ್ನ ಗುಂಪಿನೊಂದಿಗೆ ಬಂದು ನೀರು ಕುಡಿಯುತ್ತಿರುವ ಆನೆ, ಮೊಸಳೆ ಈ ರೀತಿಯಲ್ಲಿ ದಾಳಿ ಮಾಡಿ ಬಿಡಬಹುದು ಎಂದು ಕಲ್ಪಿಸಿಯೂ ಇರಲಿಕ್ಕಿಲ್ಲ. ಆದರೆ ಮೊಸಳೆ ಏಕಾಏಕಿ ಮರಿಯಾನೆಯ ಮೇಲೆ ದಾಳಿ ಮಾಡಿದೆ. ಆನೆ ಕೂಡಾ ತನ್ನ ಸೊಂಡಿಲಿನಲ್ಲಿ ಸಿಲುಕಿಕೊಂಡಿದ್ದ ಮೊಸಳೆಯನ್ನು ಕಿತ್ತು ಎಸೆಯಲು ಪ್ರಯತ್ನಿಸುತ್ತದೆ. ಮೊಸಳೆ ಆನೆಯ ಸೊಂಡಿಲಿನ ಮೇಲೆ ದಾಳಿ ಮಾಡಿರುವುದನ್ನು ಗುಂಪಿನ ಇತರ ಆನೆಗಳು ಕೂಡಾ ಸಹಿಸುವುದಿಲ್ಲ. ಆ ಆನೆಗಳು ಕೂಡಾ ಮೊಸಳೆಯ ಮೇಲೆ ದಾಳಿ ಮಾಡಿ ಬಿಡುತ್ತವೆ. ಹೀಗೆ ಎಲ್ಲಾ ಆನೆಗಳ ಒಗ್ಗಟ್ಟಿನಿಂದಾಗಿ ಮೊಸಳೆಯ ಬಾಯಿಯಿಂದ ಮರಿಯಾನೆ ಸುರಕ್ಷಿತವಾಗಿ ಹೊರ ಬರಲು ಸಾಧ್ಯವಾಗುತ್ತದೆ.

Wildlife_stories_ ಹೆಸರಿನ Instagram ಖಾತೆಯಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೋ ಈಗಾಗಲೇ ನೆಟ್ಟಿಗರ ಮನಸ್ಸು ಗೆದ್ದಿದ್ದು, ಸಾವಿರಾರು ವ್ಯೂವ್ಸ್ ಮತ್ತು ಲೈಕ್ಸ್ ಗಳನ್ನು ಪಡೆದುಕೊಂಡಿದೆ.

https://www.instagram.com/reel/CegivBIj_mu/?igshid=YmMyMTA2M2Y=
Leave A Reply

Your email address will not be published.