ಅನ್ಯಮತೀಯ ಯುವಕರೊಂದಿಗೆ ಹಿಂದೂ ವಿದ್ಯಾರ್ಥಿನಿಯರ ಚಕ್ಕಂದ!! ಸ್ಥಳೀಯರ ಆಕ್ರೋಶದ ಬೆನ್ನಲ್ಲೇ ಪೊಲೀಸರ ಮಧ್ಯಪ್ರವೇಶ

Share the Article

ಭಟ್ಕಳ:ಅನ್ಯಕೋಮಿನ ಯುವಕರೊಂದಿಗೆ ಮೋಜು ಮಸ್ತಿಯಲ್ಲಿದ್ದ ಹಿಂದೂ ಹಾಗೂ ಕ್ರಿಶ್ಚಿಯನ್ ವಿದ್ಯಾರ್ಥಿನಿಯರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡು ಬುದ್ಧಿವಾದ ಹೇಳಿ ಪೊಲೀಸರಿಗೆ ಒಪ್ಪಿಸಿದ ಘಟನೆಯೊಂದು ಭಟ್ಕಳದಲ್ಲಿ ನಡೆದಿದೆ.

ತಾಲೂಕಿನ ಮುರ್ಡೇಶ್ವರದ ಪಾಲಿಟೆಕ್ನಿಕ್ ಕಾಲೇಜಿನ ದ್ವಿತೀಯ ವರ್ಷದಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳು ಸರ್ಪನಕಟ್ಟೆ ಬಳಿ ಅನ್ಯಧರ್ಮದ ವಿದ್ಯಾರ್ಥಿಗಳೊಂದಿಗೆ ಕೂತು ಹರಟೆ ಹೊಡೆಯುತ್ತಾ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ವಿದ್ಯಾರ್ಥಿನಿಯೋರ್ವಳು ಸ್ಥಳೀಯರನ್ನು ಏಕವಚನದಲ್ಲಿ ಸಂಭೋಧಿಸಿ, ಉಡಾಫೆಯ ಉತ್ತರ ನೀಡಿದ್ದರಿಂದ ಕೆರಳಿದ್ದು, ಅನ್ಯಮತೀಯ ವಿದ್ಯಾರ್ಥಿಗಳ ಸಹಿತ ಹಿಂದೂ ವಿದ್ಯಾರ್ಥಿನಿಯರಿಗೆ ಸಕ್ಕತ್ ಕ್ಲಾಸ್ ತೆಗೆದುಕೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.ಬಳಿಕ ಪೊಲೀಸರು ಮಧ್ಯಪ್ರವೇಶಿಸಿ,ವಿದ್ಯಾರ್ಥಿನಿಯರ ಪೋಷಕರಿಗೆ ತಿಳಿಸಿ ಮನೆಗೆ ಕಳುಹಿಸಿಕೊಟ್ಟಿದ್ದು,ಅನ್ಯಮತೀಯ ವಿದ್ಯಾರ್ಥಿಗಳನ್ನು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ಪ್ರಕರಣಕ್ಕೆ ಅಂತ್ಯಹಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ವಿದ್ಯಾರ್ಥಿಯರ ಅಸಭ್ಯ ವರ್ತನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave A Reply