ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಕೊಡುಗೆ !!
ಹೆಣ್ಣು ಮಕ್ಕಳಿಗಾಗಿಯೇ ಸರ್ಕಾರ ಅದೆಷ್ಟೋ ಯೋಜನೆಗಳನ್ನು ಜಾರಿಗೆ ತಂದಿದೆ. ಅಂತೆಯೇ ಇದೀಗ ದೆಹಲಿ ಸರ್ಕಾರ ಕ್ರಾಂತಿಕಾರಿ ಯೋಜನೆಯೊಂದನ್ನು ಜಾರಿಗೆ ತರುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಶಿಶುಗಳಿಗೆ ಇನ್ನು ಮುಂದೆ ಜನನ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ದೆಹಲಿಯ ವಾಯುವ್ಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ನೀಡಲಿವೆ.
ಈ ಪ್ರಮಾಣ ಪತ್ರದಲ್ಲಿ ಮಗುವಿನ ಹೆಜ್ಜೆ ಗುರುತು ಮತ್ತು ಪೋಟೋ ಇರಲಿದೆ. ಹೆಣ್ಣುಮಗುವಿನ ಪೋಷಕರು ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ‘ನನ್ಹಿ ಪರಿ’ ಯೋಜನೆ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚೇಷ್ಟಾ ಯಾದವ್ ತಿಳಿಸಿದ್ದಾರೆ. ಹೆಣ್ಣು ಮಕ್ಕಳ ಪೋಷಕರಿಗೆ ಆಗುವ ತೊಂದರೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಈ ವಿಚಾರವನ್ನು ಆಧಾರ್ ಅಧಿಕಾರಿಗಳು ಮತ್ತು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಯೊಂದಿಗೆ ಚರ್ಚಿಸಲಾಗಿದೆ. ಶುಕ್ರವಾರ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಈ ಯೋಜನೆ ಆರಂಭವಾಗಲಿದೆ. ಜಿಲ್ಲೆಯ ಇತರ ಮೂರು ಆಸ್ಪತ್ರೆಗಳಾದ ಭಗವಾನ್ ಮಹಾವೀರ್ ಆಸ್ಪತ್ರೆ, ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆ ಮತ್ತು ದೀಪ್ ಚಂದ್ ಬಂಧು ಆಸ್ಪತ್ರೆಗಳು ಮುಂದಿನ ವಾರ ಈ ಯೋಜನೆಯನ್ನು ಪ್ರಾರಂಭಿಸಲಿವೆ ಎಂದು ಅವರು ತಿಳಿಸಿದ್ದಾರೆ.
ಜನನ ಪ್ರಮಾಣಪತ್ರ ಮತ್ತು ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ, ಬ್ಯಾಂಕ್‌ಗಳು ಕೇಂದ್ರದ “ಸುಕನ್ಯಾ ಸಮೃದ್ಧಿ ಯೋಜನೆ” ಮತ್ತು ದೆಹಲಿ ಸರ್ಕಾರದ “ಲಾಡ್ಲಿ” ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸುತ್ತಿಲ್ಲ ಎಂದು ಯಾದವ್ ತಿಳಿಸಿದ್ದಾರೆ.
ನಾವು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಬಳಿ ‘ನನ್ಹಿ ಪರಿ’ ಸಹಾಯ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಹೆಲ್ಪ್ ಡೆಸ್ಕ್‌ನಲ್ಲಿ ಎಂಸಿಡಿ, ಬ್ಯಾಂಕ್ ಮತ್ತು ಆಧಾರ್ ಘಟಕಗಳ ಅಧಿಕಾರಿಗಳು ಇರುತ್ತಾರೆ, ಹೆಣ್ಣು ಮಕ್ಕಳ ಪೋಷಕರು ಡಿಸ್ಚಾರ್ಜ್ ಆಗುವ ಮೊದಲು ಈ ದಾಖಲೆಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಒಂದು ವೇಳೆ ಡಿಸ್ಚಾರ್ಜ್ ಬೇಗನೆ ಮಾಡಿದರೆ, ಪೋಷಕರು ದಾಖಲಾತಿಗಳನ್ನು ಪಡೆಯಲು ಆಸ್ಪತ್ರೆಗೆ ಬರಬಹುದು. ಆಸ್ಪತ್ರೆಯಲ್ಲಿ ಅವರ ದಾಖಲೆ ಪ್ರಮಾಣ ಪತ್ರ ಇರುತ್ತದೆ ಅಲ್ಲಿಂದ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.