ರಾಜ್ಯದಲ್ಲಿ ಕೊರೊನಾ ಮಹಾಮಾರಿ ಪ್ರಕರಣ ಹೆಚ್ಚಳ : ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ! ಏನೆಲ್ಲಾ ಹೊಸ ರೂಲ್ಸ್ ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ …

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಳದ ಕಾರಣ, ನಿಯಂತ್ರಣ ಕ್ರಮವಾಗಿ ಹೊಸ ಮಾರ್ಗಸೂಚಿ ಕ್ರಮಗಳನ್ನು ರಾಜ್ಯ ಆರೋಗ್ಯ ಇಲಾಖೆ ಪ್ರಕಟಿಸಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವಂತ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್ ಅವರು, ರಾಜ್ಯದಲ್ಲಿ ಕಳೆದ 10 ದಿನಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿವೆ. ಹೀಗಾಗಿ ಈ ಕೆಳಗಿನ ಮಾರ್ಗಸೂಚಿ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದ್ದಾರೆ.

ಹೀಗಿವೆ ಕೋವಿಡ್ ನಿಯಂತ್ರಣದ ಹೊಸ ಮಾರ್ಗಸೂಚಿ ಕ್ರಮಗಳು

ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ

ಮಾಸ್ಕ್ ಧರಿಸದೇ ಇದ್ದರೇ ಮಾರ್ಷಲ್, ಪೊಲೀಸ್
ಸಿಬ್ಬಂದಿಗಳು ದಂಡ ವಿಧಿಸಲು ಸೂಚನೆ

ಮುಚ್ಚಿದ ಕಫೆ ಟೀರಿಯಾ, ಹೋಟೆಲ್, ಶೈಕ್ಷಣಿಕ ಸಂಸ್ಥೆಗಳು, ಮಾಲ್ ಗಳು, ರೆಸ್ಟೋರೆಂಟ್ ಗಳು, ಪಬ್ ಗಳು, ಕಚೇರಿಗಳು, ಕಾರ್ಖಾನೆಗಳಲ್ಲಿ ಜನರು, ಸಿಬ್ಬಂದಿಗಳು ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಧರಿಸಿದ ಜನರಿಗೆ ಮಾತ್ರವೇ ಮುಚ್ಚಿದ ಸ್ಥಳಗಳಲ್ಲಿನ ಪ್ರದೇಶಗಳಿಗೆ ಅನುಮತಿ.

ಸ್ವಂತ ವಾಹನಗಳು ಹಾಗು ಸಾರ್ವಜನಿಕ ಸಾರಿಗೆಗಳಲ್ಲಿ ( ಬಸ್ ಮತ್ತು ರೈಲು ) ಪ್ರಯಾಣಿಸುವ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ

ಐಎಲ್‌ಐ ( ILI) ಮತ್ತು ಸಾರಿ ( SARI) ಲಕ್ಷಣಗಳನ್ನು ಹೊಂದಿರುವವರು, ಹೈರಿಸ್ಕ್ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರೋರು ಆದ್ಯತೆ ಮೇರೆಗೆ ಪರೀಕ್ಷೆ ಒಳಪಡಲು ಸೂಚನೆ.

ಅರ್ಹ ಜನರೆಲ್ಲರೂ ಪ್ರಿಕಾಷನರಿ ಡೋಸ್ ಸೇರಿದಂತೆ ಕೋವಿಡ್ ಲಸಿಕೆ ಪಡೆಯಲು ಸೂಚನೆ.

ಈ ಮೇಲ್ಕಂಡ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ

Leave A Reply

Your email address will not be published.