ಈ ಟೆಲಿಕಾಂ ಕಂಪನಿ ಪರಿಚಯಿಸಿದ ಪ್ರಿಪೇಯ್ಡ್‌ ಪ್ಲ್ಯಾನ್‌ ನಲ್ಲಿ ಪ್ರತೀ ದಿನ 3.5GB ಡೇಟಾದೊಂದಿಗೆ ಉಚಿತ ಕರೆ!

Share the Article

ಇದೀಗ ಪ್ರತಿಯೊಂದು ಟೆಲಿಕಾಂ ಕಂಪನಿಗಳು ಹೊಸ-ಹೊಸ ಆಫರ್ ನೊಂದಿಗೆ ಲಗ್ಗೆ ಇಡುತ್ತಲೇ ಇದ್ದು, ಇದೀಗ ದೇಶದ ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಟೆಲಿಕಾಂ ಆಗಿ ಗುರುತಿಸಿಕೊಂಡಿರುವ ವೊಡಾಫೋನ್ ಐಡಿಯಾ ಟೆಲಿಕಾಂ, ಚಂದಾದಾರರನ್ನು ಸೆಳೆಯಲು ಅಧಿಕ ಡೇಟಾ ಯೋಜನೆಗಳನ್ನು ಪರಿಚಯಿಸಿದೆ.

ವಿ ಟೆಲಿಕಾಂನ ಅಲ್ಪಾವಧಿಯ ಯೋಜನೆಗಳ ಜೊತೆಗೆ ಕೆಲವು ಆಕರ್ಷಕ ದೀರ್ಘಾವಧಿಯ ಪ್ಲ್ಯಾನ್‌ಗಳನ್ನು ಪಡೆದಿದ್ದು, ಬಹುತೇಕ ಪ್ಲ್ಯಾನ್‌ಗಳು ಅಧಿಕ ದೈನಂದಿನ ಡೇಟಾ ಪಡೆದಿವೆ. ಆ ಪೈಕಿ ವಿ ಟೆಲಿಕಾಂನ ಪ್ರಿಪೇಯ್ಡ್‌ ಪ್ಲ್ಯಾನ್‌ವೊಂದು ಭಾರೀ ಗಮನ ಸೆಳೆದಿದ್ದು, ಜಿಯೋ ಟೆಲಿಕಾಂ ಹಾಗೂ ಏರ್‌ಟೆಲ್‌ಗೆ ಪೈಪೋಟಿ ನೀಡುವ ಯೋಜನೆಗಳ ಆಯ್ಕೆ ಹೊಂದಿದೆ.

ವಿ ಟೆಲಿಕಾಂ 409ರೂ. ಯೋಜನೆಯ ಅಧಿಕ ಡೇಟಾ, ಅನಿಯಮಿತ ವಾಯಿಸ್ ಕರೆ, ಎಸ್‌ಎಮ್‌ಎಸ್‌ ಹಾಗೂ ಆಕರ್ಷಕ ವ್ಯಾಲಿಡಿಟಿ ಪ್ರಯೋಜನಗಳನ್ನು ಒಳಗೊಂಡಿವೆ. ಇದರೊಂದಿಗೆ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಪಡೆದಿವೆ. ವಿ ಟೆಲಿಕಾಂ 409ರೂ. ಪ್ರೀಪೇಯ್ಡ್‌ ಯೋಜನೆಯನ್ನು ರೀಚಾರ್ಜ್ ಮಾಡಿಸಿಕೊಳ್ಳುವ ಪ್ರಯೋಜನಗಳೇನು ಎಂಬುದು ಇಲ್ಲಿದೆ ನೋಡಿ.

ವಿ ಟೆಲಿಕಾಂನ 409ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು

ವಿ ಟೆಲಿಕಾಂನ 409ರೂ. ಪ್ರೀಪೇಯ್ಡ್‌ ಪ್ಲ್ಯಾನಿನಲ್ಲಿ ಪ್ರತಿದಿನ 3.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ಡೇಟಾ ರೋಲ್‌ ಓವರ್, ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ. ಆದರೆ, ಇದರ ವ್ಯಾಲಿಡಿಟಿ ಕೇವಲ 28 ದಿನಗಳ ಅವಧಿ ಪಡೆದಿದೆ. ಹೀಗಾಗಿ ಹೆಚ್ಚು ಗಮನಿಸದ, ಹಾಗೂ ನಿತ್ಯವೂ ಅಧಿಕ ಡೇಟಾ ಅಗತ್ಯ ಎನಿಸುವ ಗ್ರಾಹಕರಿಗೆ ಈ ಯೋಜನೆ ಆಕರ್ಷಕ ಎನಿಸುತ್ತದೆ.

ವಿ ಟೆಲಿಕಾಂನ 399ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು:
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 42 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

ವಿ ಟೆಲಿಕಾಂನ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು:
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 70 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

ವಿ ಟೆಲಿಕಾಂನ 719ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು:
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹೆಚ್ಚುವರಿಯಾಗಿ ವಿ ಆಪ್ಸ್‌ಗಳ ಸೇವೆಗಳು ಲಭ್ಯ ಆಗಲಿವೆ.

Leave A Reply