ಸಾವಿರ ವೀಣಾವಾದಕಿ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಕಲಾವಿದೆ ಡಾ. ಸುಪರ್ಣಾ ರವಿಶಂಕರ್ ಇನ್ನಿಲ್ಲ

Share the Article

ಬೆಂಗಳೂರು: ವೀಣೆ ವಾದನ ಹಾಗೂ ಭರತನಾಟ್ಯದಲ್ಲಿ ಖ್ಯಾತಿ ಪಡೆದ ಕಲಾವಿದೆ, ರಂಜನೀ ಕಲಾಕೇಂದ್ರದ ಸಂಸ್ಥಾಪಕಿ ಡಾ|ಸುಪರ್ಣಾ ರವಿಶಂಕರ್ ಇಂದು ವಿಧಿವಶರಾದರು.

ಸಾವಿರ ವೀಣೆಯ ವಾದನದಲ್ಲಿ ಹೊಸ ದಾಖಲೆ ಸೃಷ್ಟಿಸಿ ಗಿನ್ನೆಸ್ ರೆಕಾರ್ಡ್ ಮಾಡಿದ್ದ ಸುಪರ್ಣಾ,ಹಲವಾರು ವೇದಿಕೆಗಳಲ್ಲಿ ತನ್ನ ಕಲೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದು, ರಾಷ್ಟ್ರ ಮಟ್ಟದ ಯುವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಯನ್ನು ಮೂಡಿಗೇರಿಸಿಕೊಂಡಿದ್ದರು.

ತನ್ನ ಕಾಲಪ್ರೇಮವನ್ನು ಮುಂದುವರಿಸಿ, ಇನ್ನಷ್ಟು ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಂಜನೀ ಕಲಾ ಕೇಂದ್ರವನ್ನು ಸ್ಥಾಪಿಸಿ ಆ ಮೂಲಕ ಅಪಾರ ಶಿಷ್ಯ ವೃಂದವನ್ನು ಹೊಂದಿದ್ದ ಸುಪರ್ಣಾ ರವಿಶಂಕರ್ ನಿಧಾನಕ್ಕೆ ಅಪಾರ ಬಂಧು ಮಿತ್ರರು, ಹಿತೈಷಿಗಳು, ಶಿಷ್ಯ ವೃಂದ ಸಂತಾಪ ಸೂಚಿಸಿದೆ.

Leave A Reply