ಕೋಟಿ ರೂಪಾಯಿ ಬ್ಯಾಗಲ್ಲಿದ್ರೂ, ರೈಲು ಟಿಕೆಟ್ ಮಾಡಲು ಕಂಜೂಸ್ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳ !!!
ಮಂಗಳೂರು: ರೈಲಿನ ಮೂಲಕ ಮುಂಬೈನಿಂದ ಮಂಗಳೂರಿಗೆ ಸಾಗಿಸುತ್ತಿದ್ದ ದಾಖಲೆ ರಹಿತ ಎರಡು ಕೋಟಿ ಹಣವನ್ನು ಸಾಗಿಸುತ್ತಿದ್ದ ಆರೋಪಿಯನ್ನು ಒಂದು ವಿಚಿತ್ರ ಸನ್ನಿವೇಶದಲ್ಲಿ ಪೊಲೀಸರು ಹಿಡಿದು ಹಾಕಿದ್ದಾರೆ.
ರಾಜಸ್ಥಾನ ಮೂಲದ ಮನೋಹರ್ ಸಿಂಗ್ ಅಲಿಯಾಸ್ ಚೇನ್ ಸಿಂಗ್ ಆರೋಪಿ ಹೀಗೆ ಕಾರವಾರದ ರೈಲ್ವೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ.
ನಿನ್ನೆ ಮಂಗಳೂರು ಎಕ್ಸ್ಪ್ರೆಸ್ ರೈಲಿನಲ್ಲಿ ಟಿಕೆಟ್ ಪಡೆಯದೆ ವ್ಯಕ್ತಿಯೊಬ್ಬ ಪ್ರಯಾಣಿಸುತ್ತಿದ್ದ. ಹಾಗೆ ಮನೋಹರ್ ಸಿಂಗ್‍ನನ್ನು ಕಾರವಾರದ ಬಳಿ ರೈಲ್ವೆ ಪೊಲೀಸರು ಟಿಕೆಟ್ ಇಲ್ಲದ ಕಾರಣ ಹಿಡಿದು ದಂಡ ವಿಧಿಸಿದ್ದರು. ಈ ವೇಳೆ ಅನುಮಾನಗೊಂಡ ರೈಲ್ವೆ ಪೊಲೀಸರು ಈತನ ಬಳಿ ಇದ್ದ ಬ್ಯಾಗ್ ಅನ್ನು ತಪಾಸಣೆಗೆ ಒಳಪಡಿಸಿದಾಗ ಈತನ ಬಳಿ ಇದ್ದ ಬ್ಯಾಗಿನಲ್ಲಿ 100 ಬಂಡಲ್‍ನ ಎರಡು ಕೋಟಿ ಹಣ ಪತ್ತೆಯಾಗಿದೆ !!. ಬ್ಯಾಗಿನಲ್ಲಿ ಇಷ್ಟೆಲ್ಲಾ ದುಡ್ಡು ಇಟ್ಟುಕೊಂಡಿದ್ದರು ಚಿಲ್ಲರೆ ದುಡ್ಡುಕೊಟ್ಟು ಟಿಕೆಟ್ ಮಾಡುವ ಕಂಜೂಸುತನ ತೋರಿ ಇದೀಗ ಸಮೇತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಮನೋಹರ್ ಸಿಂಗ್ ಮುಂಬೈನ ಭರತ್ ಬಾಯ್ ಅಲಿಯಾಸ್ ಪಿಂಟೊ ಎಂಬುವರ ಬಳಿ 15 ಸಾವಿರಕ್ಕೆ ಕೆಲಸ ಮಾಡುತಿದ್ದ. ಮನೋಹರ್ ಸಿಂಗ್ ತನ್ನ ಮಾಲೀಕನಿಂದ ಬ್ಯಾಗ್ ಪಡೆದು ಮಂಗಳೂರಿನಲ್ಲಿ ರಾಜು ಎಂಬವರಿಗೆ ತಲುಪಿಸಲು ಮುಂಬೈನಿಂದ ಮಂಗಳೂರಿಗೆ ಹೊರಟಿದ್ದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ರೈಲ್ವೆ ಪೊಲೀಸರು ಆರೋಪಿಯನ್ನು ಕಾರವಾರ ಗ್ರಾಮಾಂತರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. 1500 ರೂಪಾಯಿ ತೆರಲು ಆಸೆಪಟ್ಟು ಈಗ 1 ಕೋಟಿ ಹಣದ ಕಟ್ ಜೈಲು ಪಾಲಾಗುವ ಹಾಗೆ ಆಗಿದೆ.